ಚಿತ್ರ ಮಂಜರಿ

ಕಾಂತಾರ ಗೆಲುವು ದುಖಃವನ್ನೂ ಕೊಟ್ಟಿದೆ : ಹೀಗಂದಿದ್ಯಾಕೆ ರಿಷಬ್ ಶೆಟ್ಟಿ ?

ಕಾಂತಾರ ಸಿನಿಮಾ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ದುಖಃವನ್ನೂ ಕೊಟ್ಟಿದೆ ಎಂದು ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಬೇಸರ ಹೊಹೊರ ಹಾಕಿದ್ದಾರೆ.

ನಂದಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಿಷಬ್‌ ಶೆಟ್ಟಿ, ನನಗೆ ಕಾಂತಾರ ಸಿನಿಮಾದ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ನೋವನ್ನೂ ಕೂಡ ಕೊಟ್ಟಿದೆ ಎಂದಿದ್ದಾರೆ.

ದೈವಾರಾಧನೆಯ ಬಗ್ಗೆ ಕನ್ನಡ, ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಈಗಿನ ಕಾಲಘಟ್ಟದಲ್ಲಿ ದೈವಾರಾಧನೆಯ ಶ್ರೇಷ್ಠತೆ ಹೇಳುವ ಸಲುವಾಗಿ ಈ ಸಿನಿಮಾ ಮಾಡಿದ್ದೀನಿ. ಆದರೆ ಕಾಂತಾರ ಬಳಿಕ ದೈವದ ಹಾಡಿಗೆ ತಪ್ಪಾಗಿ ರೀಲ್ಸ್‌ ಮಾಡೋದು ಜಾಸ್ತಿ ಆಗಿದೆ. ದೈವಾರಾಧನೆಗೆ ಅಪಮಾನ ಮಾಡಬೇಡಿ. ಪಂಜುರ್ಲಿ, ದೈವಾರಾಧನೆ, ಕೋಲ ನಮ್ಮ ನೆಲದ ಮೂಲ ಸಂಸ್ಕೃತಿ. ನಮ್ಮ ನೆಲದ ಕಥೆ ಹೇಳಬೇಕು ಅಂತಾ ಈ ಸಿನಿಮಾ ಮಾಡಿದ್ದೀನಿ ದಯವಿಟ್ಟು ದೈವದ ಹಾಡಿಗೆ ತಪ್ಪಾಗಿ ರೀಲ್ಸ್‌ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಕಾಂತಾರ 2ನಲ್ಲಿ ಕರಾವಳಿ ಭಾಗದ ಜನರ ದೈವಾರಾಧನೆ ಭೂತಕೋಲದ ಮಹತ್ವವನ್ನು ಸಾರಿ ಹೇಳಿದ್ದ ನಿರ್ದೇಶಕ ರಿಷಬ್‌ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು. ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.

ನವೆಂಬರ್‌ 27 ರಂದು ಕಾಂತಾರ ಚಾಪ್ಟರ್‌ ಒಂದರ ಮುಹೂರ್ತ ನೆರವೇರಿತ್ತು. ಕಾಂತಾರ ಚಿತ್ರತಂಡ ವಿಶೇಷವಾದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್‌ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿತ್ತು.

lokesh

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

1 hour ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

1 hour ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

2 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

2 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

2 hours ago