ಚಿತ್ರ ಮಂಜರಿ

ಕಾಂತಾರ ಗತ್ತು ಗೂಗಲ್‌ಗೂ ಗೊತ್ತು; ಹೆಚ್ಚಾಯ್ತು ನಿರೀಕ್ಷೆ, ಕ್ರೇಜ್‌

ನಿನ್ನೆಯಷ್ಟೇ ( ನವೆಂಬರ್‌ 27 ) ಚಾಪ್ಟರ್‌ ಒಂದರ ಮುಹೂರ್ತ ಆಚರಿಸಿಕೊಂಡ ಕಾಂತಾರ ಚಿತ್ರತಂಡ ವಿಶೇಷ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್‌ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿದೆ.

ಕಾಂತಾರ 2ನಲ್ಲಿ ಕರಾವಳಿ ಭಾಗದ ಜನರ ದೈವಾರಾಧನೆ ಭೂತಕೋಲದ ಮಹತ್ವವನ್ನು ಸಾರಿ ಹೇಳಿದ್ದ ನಿರ್ದೇಶಕ ರಿಷಬ್‌ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು. ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.

ಈ ಬಾರಿ ದೊಡ್ಡ ಬಜೆಟ್‌ನೊಂದಿಗೆ ಚಿತ್ರವನ್ನು ಆರಂಭಿಸಿರುವ ಚಿತ್ರತಂಡ ಈ ಫಸ್ಟ್‌ಲುಕ್‌ ಟೀಸರ್‌ ಮೂಲಕ ದೇಶವ್ಯಾಪಿ ಸದ್ದು ಮಾಡಿದೆ. ಈ ಸದ್ದು ಎಷ್ಟರ ಮಟ್ಟಿಗೆ ಇದೆ ಎಂದರೆ ಗೂಗಲ್‌ ಇಂಡಿಯಾ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕಾಂತಾರ ಅಧ್ಯಾಯ 1ರ ಬಿಡುಗಡೆ ದಿನಾಂಕದ ಫೋಟೊವನ್ನು ಹಂಚಿಕೊಂಡು ಫಸ್ಟ್‌ಲುಕ್‌ ಬಗ್ಗೆ ಬರೆದುಕೊಂಡಿದೆ.

“2024 ಮತ್ತಷ್ಟು ಕಾತರತೆಯನ್ನು ಪಡೆದುಕೊಂಡಿದೆ. ಈಗ ತಾನೇ ಕಾಂತಾರ ಫಸ್ಟ್‌ಲುಕ್‌ ಟೀಸರ್‌ ನೋಡಿದೆ ಹಾಗೂ ವೋಹ್‌….. ಎಂದು ಕೂಗಬೇಕೆನಿಸುತ್ತಿದೆ” ಎಂದು ಗೂಗಲ್‌ ಇಂಡಿಯಾ ಬರೆದುಕೊಂಡಿದೆ. ಕನ್ನಡ ಚಿತ್ರವೊಂದರ ಬಗ್ಗೆ ಗೂಗಲ್‌ ಈ ರೀತಿಯ ಟ್ವೀಟ್‌ ಮಾಡಿರುವುದನ್ನು ಕಂಡು ಕನ್ನಡಿಗರು ಹಾಗೂ ಕಾಂತಾರ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.

andolana

Recent Posts

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…

7 hours ago

ಕಾಡಾನೆ ದಾಳಿಗೆ 75 ತೆಂಗಿನ ಮರ ನಾಶ: ಬೆಳೆ ಪರಿಹಾರಕ್ಕೆ ರೈತ ಕುಟುಂಬದ ಮನವಿ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…

12 hours ago

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ

ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…

13 hours ago

ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್ ನೀಡಿದ ಸುಪ್ರೀಂಕೋರ್ಟ್‌

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.…

14 hours ago

ಕೋಟೆ ಟಿಎಪಿಸಿಎಂಎಸ್: ನಾಳೆ ಮೈತ್ರಿ ಪಕ್ಷದ 8 ಸದಸ್ಯರ ರಾಜೀನಾಮೆ ಭವಿಷ್ಯ ನಿರ್ಧಾರ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…

15 hours ago

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

20 hours ago