ನವದೆಹಲಿ: ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆಯಾದ ಘಟನೆ ನಿನ್ನೆ ನಡೆದಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ದವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ.
ಸೋನು ನಿಗಮ್ ಜೊತೆ ಸೆಲ್ಫಿಗಾಗಿ ಬಂದ ಶಾಸಕನ ಮಗನನ್ನು ಸೋನು ಅಂಗರಕ್ಷಕರು ತಳ್ಳಿದ್ದಾರೆ. ಈ ತಳ್ಳಾಟದಲ್ಲಿ ಶಾಸಕನ ಮಗನು ವೇದಿಕೆಯಿಂದ ಕೆಳಗೆ ಬಿದ್ದ ಎಂದು ಹೇಳಲಾಗುತ್ತಿದೆ. ರೊಚ್ಚಿಗೆದ್ದ ಹುಡುಗನು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದ ಸೋನು ನಿಗಮ್ ಅವರನ್ನು ಹಿಡಿದೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸೋನು ನಿಗಮ್ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಸೋನು ಬರೆದ ದೂರಿನಲ್ಲಿ ‘ನಾವು ಕಾರ್ಯಕ್ರಮ ಮುಗಿಸಿಕೊಂಡು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದೆವು. ಮೊದಲು ಆ ಹುಡುಗ ನನ್ನ ತಂಡದೊಂದಿಗೆ ಗಲಾಟೆಗೆ ಇಳಿದ. ತಳ್ಳಾಟ ಶುರುವಾಯಿತು. ನನ್ನನ್ನು ಆ ಹುಡುಗ ಕೋಪದಿಂದ ತಳ್ಳಿದ. ನಾನು ವೇದಿಕೆಯ ಮೆಟ್ಟಿಲುಗಳಿಂದ ಜಾರಿದೆ’ ಎಂದು ಬರೆದಿದ್ದಾರೆ. ಸದ್ಯ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಚಾಮರಾಜನಗರ : ತೀವ್ರ ಬಿಸಿ ಗಾಳಿ (ಹೀಟ್ ವೇವ್) ಇರುವುದರಿಂದ ಜಿಲ್ಲೆಯ ಎಲ್ಲಾ ಖಾಸಗಿ ಅನುದಾನಿತ, ಅನುದಾನರಹಿತ ಹಾಗೂ ಸರ್ಕಾರಿ…
ಪಿರಿಯಾಪಟ್ಟಣ : ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವಿಗೀಡಾಗಿರುವ ಘಟನೆ ದೊಡ್ಡ ಹರವೆ ಬಳಿ ನಡೆದಿದೆ. ಪಿರಿಯಾಪಟ್ಟಣದಲ್ಲಿ…
ಟೆಹ್ರಾನ್ : ಇರಾನ್‌ನ ಪರಮಾಣು ಯೋಜನೆಯ ಸುತ್ತಲಿನ ಅಂತಾರಾಷ್ಟ್ರೀಯ ಬಿಕ್ಕಟ್ಟು ಮತ್ತೆ ತಾರಕಕ್ಕೇರಿದೆ. ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು…
ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ…
ಚಾಮರಾಜನಗರ : ಕೋವಿಡ್ ವೇಳೆಯಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ (ಈಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ) ಸಂಭವಿಸಿದ್ದ ಆಕ್ಸಿಜನ್ ದುರಂತದಲ್ಲಿ 36…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.20 ಹಾಗೂ 21ರಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 20ರಂದು…