ಚಿತ್ರ ಮಂಜರಿ

ಜಾತಿ ನಿಂದನೆ ಆರೋಪ: ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಬಿಗ್ ಬಾಸ್ ಸೀಸನ್‌ 10ರ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌-10 ಶೋನಲ್ಲಿ ತನಿಷಾ ಕುಪ್ಪಂಡ ಅವರು ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಎಂಬುವರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ‌ ಕುಂಬಳಗೂಡು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ, ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ತನಿಷಾ ಕುಪ್ಪಂಡ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಬಿಗ್‌ ಬಾಸ್‌ ನ ಸ್ಪರ್ಧಿ ವರ್ತೂರ್‌ ಸಂತೋಷ್‌ ಪ್ರಕರಣದ ನಂತರ ಈಗ ತನಿಷಾ ಅವರ ಹೇಳಿಕೆ ಬಗ್ಗೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ ?

ನವೆಂಬರ್‌ 8ರಂದು ಪ್ರಸಾರವಾದ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಜೊತೆ ಮಾತನಾಡುವಾಗ ತನಿಷಾ ಕುಪ್ಪಂಡ ” ಏನೋ ಒಡ್ಡನ ತರ ಆಡ್ತಾ ಇದಿಯಾ” ಎಂದು ಹೇಳಿಕೆ ನೀಡಿದ್ದರು.  ಈ ಹೇಳಿಕೆ ಇದೀಗ ಆ ಸಮುದಾಯದ ಜನರ ಕೋಪಕ್ಕೆ ಕಾರಣವಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

andolanait

Recent Posts

ಓದುಗರ ಪತ್ರ: ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಲಿ

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಸಣಾಪುರ ಚಾಟಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅಪಮಾನ…

4 hours ago

ಓದುಗರ ಪತ್ರ: ಒಡೆಯರ್ ಪೋಸ್ಟ್ ಕಾರ್ಡ್ ಬಿಡುಗಡೆ ಶ್ಲಾಘನೀಯ

ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು…

4 hours ago

ಓದುಗರ ಪತ್ರ: ಮೈಸೂರು ದಟ್ಟಗಳ್ಳಿಯ ಪಿನ್ ಕೋಡ್ ಸಮಸ್ಯೆ ನಿವಾರಿಸಿ

ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು.…

4 hours ago

ಮಳೆಗಾಲದ ಸವಾಲು ಎದುರಿಸಲು ಸೆಸ್ಕ್ ಸಜ್ಜು

ಪುನೀತ್ ಮಡಿಕೇರಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು…

4 hours ago

ರಸ್ತೆ ಇಲ್ಲದೆ ಯೋಧನ ಕುಟುಂಬ ಪರದಾಟ

ಮಹೇಶ್ ಕರೋಠಿ ಮುಚ್ಚಿರುವ ರಸ್ತೆಯನ್ನು ಪುನಃ ತೆರೆದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯ ಕಿಕ್ಕೇರಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶದ ಭದ್ರತೆಗಾಗಿ…

4 hours ago

ಕುತೂಹಲ ಮೂಡಿಸಿದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ

ಮಂಜು ಕೋಟೆ ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ; ಮುಖಂಡರಿಗೆ ಪ್ರತಿ ಎಚ್.ಡಿ.ಕೋಟೆ: ಕ್ಷೇತ್ರದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ…

4 hours ago