ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅಭಿಮಾನಿಗಳೊಂದಿಗೆ ಬಿಗ್ ಬಿ ಸದಾ ಆತ್ಮೀಯವಾಗಿ ಕ್ಷಣವನ್ನು ಕಳೆಯುತ್ತಾರೆ. ಆಗಾಗ ತಮ್ಮ ನಿವಾಸದ ಮುಂದೆ ಅಭಿಮಾನಿಗಳನ್ನು ಮೀಟ್ ಮಾಡುತ್ತಾರೆ.
ಅಮಿತಾಭ್ ಅವರ ಸರಳತೆಗೆ ಇತ್ತೀಚೆಗೆ ನಡೆದ ಘಟನೆಯೊಂದು ಉದಾಹರಣೆಯಾಗಿದೆ. ಅದನ್ನು ಸ್ವತಃ ಅಮಿತಾಭ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಅಮಿತಾಭ್ ಅವರು ಶೂಟಿಂಗ್ ವೊಂದಕ್ಕೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಇದೇ ಘಳಿಗೆಯಲ್ಲಿ ಫ್ಯಾನ್ ವೊಬ್ಬರು ಬೈಕ್ ನಲ್ಲಿ ಅಮಿತಾಭ್ ಅವರನ್ನು ಕೂರಿಸಿಕೊಂಡು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿಸಿದ್ದಾರೆ.
ಅಭಿಮಾನಿಯ ಬೈಕ್ ಹಿಂಬದಿಯಲ್ಲಿ ಕೂತು ಅಮಿತಾಭ್ ಸವಾರಿ ಮಾಡಿದ್ದಾರೆ. ಅಭಿಮಾನಿಯ ಈ ಸೇವೆಯನ್ನು ಅಮಿತಾಭ್ ಮರೆಯದೇ ಅವರ ಸೇವಾ ಋಣಕ್ಕೆ ಪೋಸ್ಟ್ ವೊಂದನ್ನು ಹಾಕಿ ಬಿಗ್ ಬಿ ಥ್ಯಾಂಕ್ಯೂ ಹೇಳಿದ್ದಾರೆ.
“ಸವಾರಿಗಾಗಿ ಧನ್ಯವಾದಗಳು ಗೆಳಯ ನೀವು ನನಗೆ ಯಾರೆಂದು ಗೊತ್ತಿಲ್ಲ. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ ಥ್ಯಾಂಕ್ಯೂ” ಬರೆದಿದ್ದಾರೆ.
ಸದ್ಯ ಅಭಿಮಾನಿಯೊಂದಿಗೆ ಬೈಕ್ ಸವಾರಿ ಮಾಡಿದ ಅಮಿತಾಭ್ ಅವರ ಫೋಟೋ ವೈರಲ್ ಆಗಿದ್ದು, ಬಿಗ್ ಬಿಯ ಸರಳತೆಯನ್ನು ಜನ ಮೆಚ್ಚಿಕೊಂಡಿದ್ದಾರೆ.
ಅಮಿತಾಭ್ ಬಿಗ್ ಬಜೆಟ್ ʼಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…