ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಯಶಸ್ಸಿಗಿಂತ, ಸೋಲು ಮತ್ತು ನಷ್ಟವೇ ಹೆಚ್ಚಾಗಿತ್ತು. ೨೦೨೫ರಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಈ ವರ್ಷದ ಆರಂಭ ಅಷ್ಟೇನೂ ಉತ್ತೇಜಕವಾಗಿಲ್ಲ. ಈ ಒಂದೂವರೆ ತಿಂಗಳಲ್ಲಿ ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರವೂ ಯಶಸ್ವಿಯಾಗಲಿಲ್ಲ. ಶೇ.೯೦ ರಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದಕ್ಕೂ ಸಾಧ್ಯವಾಗಲಿಲ್ಲ.
ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಒಟ್ಟು ೧೪ ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ಮೊದಲ ವಾರವೇ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಫೆಬ್ರವರಿ ೦೭ರಂದು ‘ಗಜರಾಮ’, ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನ್‌ಲಾಕ್ ರಾಘವ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಶರಣರ ಶಕ್ತಿ’ ಚಿತ್ರಗಳು ಬಿಡುಗಡೆಯಾದವು. ಎಂಟೂ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಸೋತಿವೆ.
ಫೆಬ್ರವರಿ ೧೪ರಂದು ‘ಸಿದ್ಲಿಂಗು ೨’, ‘ಭುವನಂ ಗಗನಂ’, ‘ರಾಜು ಜೇಮ್ಸ್‌ಬಾಂಡ್’, ‘ಜಸ್ಟೀಸ್’ ಮತ್ತು ‘ನಿಮಿತ್ತ ಮಾತ್ರ’ ಚಿತ್ರಗಳು ಬಿಡುಗಡೆಯಾಗಿವೆ. ಈ ಐದು ಚಿತ್ರಗಳಲ್ಲಿ ‘ಸಿದ್ಲಿಂಗು ೨’ ಮತ್ತು ‘ಭುವನಂ ಗಗನಂ’ ಚಿತ್ರಗಳು ತಕ್ಕ ಮಟ್ಟಿಗೆ ಇವೆ ಎಂಬ ಅಭಿಪ್ರಾಯ ಕೇಳಿ ಬಂದರೆ, ಮಿಕ್ಕ ಯಾವ ಚಿತ್ರಗಳ ಬಗ್ಗೆಯೂ ಪ್ರೇಕ್ಷಕರಿಂದ ಪ್ರತಿಕ್ರಿಯೆ ಇಲ್ಲ. ಈ ಎರಡೂ ಚಿತ್ರಗಳು ದೊಡ್ಡ ಕಲೆಕ್ಷನ್ ಏನೂ ಮಾಡುತ್ತಿಲ್ಲ.
ಈ ಶುಕ್ರವಾರ (ಫೆ.೨೧) ದಾಖಲೆಯ ೧೦ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ವಾರ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಹಿಂದೆಯೂ ಬಿಡುಗಡೆಯಾಗಿವೆ. ಆದರೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ೧೦ ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿದೆ. ‘ವಿಷ್ಣುಪ್ರಿಯ,’ ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾ ಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವ ತೀರಯಾನ’ ಮತ್ತು ‘ನಿಮಗೊಂದು ಸಿಹಿಸುದ್ದಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಯಾವ ಚಿತ್ರ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಇನ್ನು, ಫೆಬ್ರವರಿ ಕೊನೆಯ ಶುಕ್ರವಾರ (ಫೆ.೨೮) ಈಗಾಗಲೇ ಆರು ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಣೆಯಾಗಿವೆ. ‘೧೯೯೦’, ‘ರಾಕ್ಷಸ’, ‘ಅಪಾಯವಿದೆ ಎಚ್ಚರಿಕೆ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮತ್ತು ‘ಮಾಂಕ್ ದಿ ಯಂಗ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಆರು ಚಿತ್ರಗಳ ಜೊತೆಗೆ ಕೊನೆಯ ಕ್ಷಣದಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುತ್ತವೋ, ಈಗಲೇ ಹೇಳುವುದು ಕಷ್ಟ.
ಒಟ್ಟಾರೆ ಈ ತಿಂಗಳು ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿದ್ದು, ಜನವರಿಯಲ್ಲಿ ಬಿಡುಗಡೆಯಾದ ೨೨ ಚಿತ್ರಗಳನ್ನು ಸೇರಿಸಿದರೆ, ಒಟ್ಟಾರೆ ಮೊದಲೆರಡು ತಿಂಗಳಲ್ಲಿ ೫೨ ಚಿತ್ರಗಳ ಬಿಡುಗಡೆಯನ್ನು ಕಂಡಂತಾಗುತ್ತದೆ. ಮೊದಲೆರಡು ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಚಿತ್ರಗಳ ಬಿಡುಗಡೆ ಸಂಖ್ಯೆಯೇನೋ ಹೆಚ್ಚುತ್ತಲೇ ಇದೆ. ಆದರೆ, ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.
ಚಿತ್ರ ಜಾಸ್ತಿ; ಪ್ರಚಾರ ಕಡಿಮೆ
ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಪ್ರಚಾರ ಮಾತ್ರ ಇಲ್ಲ. ಬಹಳಷ್ಟು ಚಿತ್ರಗಳು ಬಿಡುಗಡೆಯಾಗುತ್ತಿರುವುದೇ ಗೊತ್ತಾಗುತ್ತಿಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿರುವವರಿಗೇ ಈ ಕಷ್ಟವಾದರೆ, ಜನಸಾಮಾನ್ಯರಿಗಂತೂ ಇಂಥದ್ದೊಂದು ಚಿತ್ರವಿದೆ ಎಂಬುದು ಗಮನಕ್ಕೆ ಬರುತ್ತಿಲ್ಲ. ಈ ತಿಂಗಳು ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನಾಮಧೇಯ ಅಶೋಕ್‌ಕುಮಾರ್’, ‘ಜಸ್ಟೀಸ್’, ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವತೀರ ಯಾನ’, ‘ರಾಕ್ಷಸ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮುಂತಾದ ಚಿತ್ರಗಳ ಬಗ್ಗೆ ಸೂಕ್ತವಾದ ಮಾಹಿತಿಗಳೇ ಇಲ್ಲ. ಕೆಲವು ಚಿತ್ರಗಳ ಪತ್ರಿಕಾಗೋಷ್ಠಿಗಳಾಗಿವೆಯಾದರೂ, ಹೆಚ್ಚು ಪ್ರಚಾರವಿಲ್ಲ
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…