ಮುಂಬೈ: ಬೈಕ್ ನಲ್ಲಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ತಮ್ಮ ಸಹ ಸವಾರನಿಗೆ 12 ಲಕ್ಷ ರೂಪಾಯಿ ದುಬಾರಿ ಬಿಎಂಡಬ್ಲ್ಯು ಸೂಪರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಜಿತ್ ತನ್ನ ಸಹ ಸವಾರ ಸುಗತ್ ಸತ್ಪತಿ ಅವರಿಗೆ ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದು, ಇಬ್ಬರೂ 2022 ರಲ್ಲಿ ಸಿಕ್ಕಿಂಗೆ ಬೈಕ್ ಪ್ರವಾಸ ಕೈಗೊಂಡಿದ್ದರು. ನಂತರ ಹಲವು ಬಾರಿ ಜೊತೆಯಾಗಿ ಬೈಕ್ ಪ್ರವಾಸ ಕೈಗೊಂಡಿದ್ದರು. ಸತ್ಪತಿ ಅವರು ಅಜಿತ್ ಅವರಿಗಾಗಿ ಎರಡು ಬಾರಿ ಬೈಕ್ ಪ್ರವಾಸವನ್ನು ಆಯೋಜಿಸಿದ್ದರು.
ಇತ್ತೀಚೆಗಷ್ಟೇ ನೇಪಾಳ ಪ್ರವಾಸ ಆಯೋಜಿಸಿದ್ದ ಸತ್ಪತಿ ಅವರಿಗೆ ನಟ ಅಜಿತ್ ಅವರು ಬಿಎಂಡಬ್ಲ್ಯು ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
Bikedekho.com ಪ್ರಕಾರ, ಸೂಪರ್ ಬೈಕ್‌ನ ಆನ್ ರೋಡ್ ಬೆಲೆ ರೂ. 12.95 ಲಕ್ಷ. ರೂಪಾಯಿ.
ನಟ ಅಜಿತ್ ಅವರ ಸರ್ಪ್ರೈಸ್ ಗಿಫ್ಟ್ ಗೆ ಪ್ರತಿಕ್ರಿಯಿಸಿರುವ ಸತ್ಪತಿ ಅವರು, “ಯಾವುದೂ ಪೂರ್ವನಿರ್ಧರಿತವಾಗಿರುವುದಿಲ್ಲ. ನಮ್ಮ ಹಿಂದಿನ ಅಡೆತಡೆಗಳು ಹೊಸ ಆರಂಭಕ್ಕೆ ಕಾರಣವಾಬಹುದು” ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಎಂಡಬ್ಲ್ಯು ಸೂಪರ್ ಬೈಕ್ ಜಗತ್ತನ್ನು ಅನ್ವೇಷಿಸಲು ನನಗೆ ನೆರವಾಗಲಿದೆ. ಇದು ಪ್ರೀತಿಯ ಅಣ್ಣನಿಂದ(ಅಜಿತ್ ಕುಮಾರ್) ಸಿಕ್ಕ ಉಡುಗೊರೆ. ಏನನ್ನೂ ಅಪೇಕ್ಷಿಸದ ಹಾಗೂ ಒಳ್ಳೆದನ್ನೇ ಬಯಸುವ ಗುಣ ಅವರದ್ದು. ಅಂತಹ ದೊಡ್ಡ ಸ್ಟಾರ್ ನಟನೊಂದಿಗೆ ಸಂಪರ್ಕ ಹೊಂದಿರುವುದು ನನ್ನ ಅದೃಷ್ಟ ಎಂದು ಸತ್ಪತಿ ಹೇಳಿದ್ದಾರೆ.
“ಅವರು ನನಗೆ ಹೆಚ್ಚು ಒಳ್ಳೆಯದನ್ನು ಬಯಸುವ ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸದ ಹಿರಿಯ ಸಹೋದರನಂತೆ ಭಾವಿಸಿದರು. ನೀವು ಗ್ರೇಟ್, ಅಣ್ಣಾ” ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…