ಇತರೇ ಹಸುವಿನ ತಳಿಗಳ ಹಾಲಿಗಿಂತ ಹಳ್ಳಿಕಾರ್ ತಳಿ ಹಸುವಿನ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳಾದ ಮೊಸಲು,ಮಜ್ಜಿಗೆ, ಬೆಣ್ಣೆ, ತುಪ್ಪ ಸತ್ವಯುತವಾದದ್ದು ಹಾಗೂ ಸರ್ವಶ್ರೇಷ್ಟ ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಇದು ನಿಜವೂ ಕೂಡ. ಹಾಗಾಗಿಯೇ ಹಳ್ಳಿಕಾರ್ ತಳಿ ಹಸುವಿನ ಹಾಲಿನ ಉತ್ಪನ್ನಗಳಿಗೆ ಬೆಲೆ ಹೆಚ್ಚಿರುತ್ತದೆ. ಎತ್ತುಗಳಿಗೂ ದುಬಾರಿ ಬೆಲೆ, ಜಾತ್ರೆ ಸಂದರ್ಭಗಳಲ್ಲಿ ಬರುವ ಜೋಡಿ ಲಕ್ಷಾಂತರ ರೂ.ಗಳಿಗೆ ಮಾರಾಟವಾಗುತ್ತವೆ. ದೇಸೀ ಜಾತ್ರೆಗಳಲ್ಲಿ ಹಳ್ಳಿಕಾರ್ ತಳಿಯ ದನಗಳು, ಎತ್ತುಗಳು ಇಲ್ಲದಿದ್ದರೆ ಅದಕ್ಕೆ ಕಳೆಯೇ ಇರುವುದಿಲ್ಲ.
– ಜಯಶಂಕರ್ ಬದನಗುಪ್ಪೆ
ಭಾರತದ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಕರ್ನಾಟಕದ ಜನಪ್ರಿಯ ಮತ್ತು ಹೆಮ್ಮೆಯ ಹಳ್ಳಿಕಾರ್ ಕೂಡ ಒಂದು.
ಸಾಮಾನ್ಯವಾಗಿ ಇವುಗಳು 170-190 ಸೆಂ.ಮೀ. ಎತ್ತರ ಹಾಗೂ ಅಂದಾಜು 450 ಕೆ.ಜಿ. ತೂಕ ಇರುತ್ತವೆ. ಹಸುವಿನ ಕರಾವಿನ ಅವಧಿ 250ರಿಂದ 310 ದಿನಗಳು. ಅತ್ಯಂತ ಕಡಿಮೆ ಆಹಾರ ಸೇವನೆ ಇವುಗಳ ಇನ್ನೊಂದು ವೈಶಿಷ್ಟ್ಯ. ಹಿಂದಿನಿಂದಲೂ ಬೀಜದ ಹೋರಿಗಳನ್ನು ಆರಿಸಲು ಕೇವಲ ದೈಹಿಕ ಆಕಾರವೊಂದನ್ನೆ ಮಾನದಂಡವಾಗಿ ಪರಿಗಣಿಸಿದ್ದರಿಂದ ಈಗಿನ ತಳಿಗಳು ದಿನಕ್ಕೆ 2-4 ಲೀಟರ್ ಹಾಲು ಕೊಡುತ್ತವೆ. ಹೆಚ್ಚೆಂದರೆ ದಿನಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಸಮಯ ಸೇರಿ ಐದು ಲೀಟರ್ ಹಾಲು ಕೊಡಬಹುದಷ್ಟೆ.
ಸಣ್ಣ- ಮಳ್ಳಿಗೆ, ಗುಜುಮಾವು ಎಂಬ ಎರಡು ಉಪತಳಿಗಳು ಇದ್ದವು ಎನ್ನುತ್ತಾರಾದರೂ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಭಾರತೀಯ ಅಂಚೆ ಇಲಾಖೆ ಹಳ್ಳಿಕಾರ್ ಚಿತ್ರಪಟವಿರುವ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ಈ ತಳಿಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಸೇರಿದಂತೆ ಕೆಲ ಸಂಘ ಸಂಸ್ಥೆಗಳು ಕ್ರಮ ಕೈಗೊಂಡಿವೆಯಾದರೂ ಇವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಸಾಗಿದೆ. ಇರುವ ಗೋವುಗಳು ಕೂಡ ಕೇವಲ ಶೇ. 60-70 ತಳಿಶುದ್ಧತೆ ಹೊಂದಿವೆ ಎಂದು ಹೇಳಲಾಗುತ್ತದೆ.
ಭಾರತೀಯ ಗೋತಳಿಗಳು ಅವುಗಳ ಬಳಕೆ ಮತ್ತು ಗುಣಲಕ್ಷಣಗಳಿಗನುಸಾರವಾಗಿ ಹಾಲಿನ ತಳಿ, ಕೆಲಸಗಾರ ತಳಿ ಹಾಗೂ ಉಭಯೋದ್ದೇಶದ ತಳಿಗಳೆಂದು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ.
ಕೆಲಸಗಾರ ತಳಿಗಳು: ಈ ತಳಿಗಳಲ್ಲಿ ಗಂಡು ಒಳ್ಳೆಯ ಕೆಲಸಗಾರ,ಹಸುಗಳ ಹಾಲಿನ ಉತ್ಪಾದನೆ ಕಡಿಮೆ. ಪ್ರತಿ ಹಾಲು ಕೊಡುವ ಚಕ್ರಕ್ಕೆ ಸರಾಸರಿ 600 ಕೆ.ಜಿ.ಯಷ್ಟು ಮಾತ್ರ ಇರುತ್ತದೆ. ಸಾಮಾನ್ಯವಾಗಿ ಇವು ಬಿಳಿ, ರೂಪಾಯಿ ಬಣ್ಣ ಅಥವಾ ಬೂದು ಬಣ್ಣದ್ದಾಗಿರುತ್ತವೆ. ಒಂದು ಜೊತೆ ಎತ್ತುಗಳು 1 ಸಾವಿರ ಕೆ.ಜಿ.ಯಷ್ಟು ಭಾರ ಎಳೆಯಬಲ್ಲವು. ಸಾಧಾರಣ ರಸ್ತೆಯಲ್ಲಿ ಗಾಡಿ ಎಳೆದುಕೊಂಡು ಗಂಟೆಗೆ 6 ರಿಂದ 8 ಕಿ.ಮೀ. ನಡೆದು ದಿನಕ್ಕೆ 40 ರಿಂದ 50 ಕಿ.ಮೀ. ದೂರ ಕ್ರಮಿಸಬಲ್ಲವು. ಕರ್ನಾಟಕದ ಹಳ್ಳಿಕಾರ್,ಅಮೃತಮಹಲ್, ತಮಿಳುನಾಡಿನ ಕಂಗಾಯಂ, ಅಂಬ್ಲಾಚೆರಿ ತಳಿಗಳು ಈ ವಿಭಾಗದಲ್ಲಿ ಗುರುತಿಸಲ್ಪಟ್ಟಿವೆ.
ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜಿನೆಟಿಕ್ ರಿಸೋರ್ಸಸ್‌ನಲ್ಲಿ ಒಟ್ಟು 39 ದೇಸೀ ತಳಿಗಳ ಹೆಸರುಗಳು ದಾಖಲಾಗಿವೆ. ಭಾರತೀಯ ಗೋತಳಿಗಳಲ್ಲಿ ಬಹಳಷ್ಟು ತಳಿಗಳು ಅವುಗಳು ಅಭಿವೃದ್ಧಿಗೊಂಡ ಪ್ರದೇಶಗಳ ಹೆಸರಿನಿಂದಲೇ ಗುರುತಿಸಲ್ಪಡುತ್ತವೆ. ಉದಾಹರಣೆಗೆ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತಮಹಲ್…
ನಮ್ಮ ಮನೆಯಲ್ಲಿ ಸುಮಾರು 60 ವರ್ಷದಿಂದಲೂ ಹಳ್ಳಿಕಾರ್ (ನಾಡತಳಿ) ಹಸುಗಳು ಮತ್ತು ಎತ್ತುಗಳನ್ನು ಸಾಕುತ್ತಿದ್ದೇವೆ. ಈ ತಳಿಯ ಹಸುಗಳ ಹಾಲನ್ನೇ ನಾವು ಮನೆಗೆ ಬಳಸುತ್ತೇವೆ. ಮುಡಕುತೊರೆ ಜಾತ್ರೆಯ ದನಗಳ ಪರಿಷೆಗೆ ನಮ್ಮ ಎತ್ತುಗಳು ಹೋಗುತ್ತಿದ್ದವು. ಹಿಂದೆ ನಮ್ಮ ತಂದೆ ಹಳ್ಳಿಕಾರ್ ತಳಿಯನ್ನು ಸಾಕುತ್ತಿದ್ದರು. ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
-ಬಿ.ಎಸ್.ಶಿವಕುಮಾರ್, ಕೃಷಿಕರು.
ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪಶು ವೈದ್ಯ ಆಸ್ಪತ್ರೆಗಳಲ್ಲಿ ಹಳ್ಳಿಕಾರ್ ತಳಿಯ ಕೃತಕ ಗರ್ಭಧಾರಣೆ ಇಂಜೆಕ್ಷನ್ ಲಭ್ಯವಿದೆ. ಸರ್ಕಾರವು ಪಶು ವೈದ್ಯ ಇಲಾಖೆಗೆ ಹಳ್ಳಿಕಾರ್ ತಳಿಯ ಲಭ್ಯತೆಗಾಗಿ ಸಹಕಾರ ನೀಡುತ್ತಿದೆ. ಈ ಭಾಗದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಡಾ.ಷಡಕ್ಷರಸ್ವಾಮಿ. ಉಪನಿರ್ದೇಶಕರು. ಪಶಯವೈದ್ಯ ಇಲಾಖೆ. ಮೈಸೂರು.
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…