ಆಂದೋಲನ ಪುರವಣಿ

ಯೋಗ ಕ್ಷೇಮ: ಅರಿವಳಿಕೆ ಬಗ್ಗೆ ಅರಿವಿರಲಿ

ಅ. ೧೬ರಂದು ವಿಶ್ವ ಅರಿವಳಿಕೆ ಆವಿಷ್ಕಾರ ದಿನ; ಶಸ್ತ್ರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅನಸ್ತೇಶಿಯಾಲಜಿಸ್ಟ್

– ಡಾ. ವೈದ್ಯನಾಥ್, ಅನಸ್ತೇಶಿಯಾಲಜಿಸ್ಟ್, ಮೈಸೂರು

೧೮೪೬ರ ಅ. ೧೬ರಂದು ಅರಿವಳಿಕೆ ಅಥವಾ ಅನಸ್ತೇಶಿಯವನ್ನು ಎಲ್ಲರಿಗೂ ನೀಡಬಹುದು ಎಂದು ಅಮೆರಿಕದ ಬೋಸ್ಟನ್ನಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು. ಅದರ ಅಂಗವಾಗಿ ಪ್ರತಿ ವರ್ಷ ಅ. ೧೬ರನ್ನು ವಿಶ್ವ ಅರವಳಿಕೆ ಆವಿಷ್ಕಾರ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.


ಶಸ್ತ್ರ ಚಿಕಿತ್ಸೆ ಸಾಮಾನ್ಯ ಎನ್ನುವಂತಾಗಿರುವ ಇಂದಿನ ದಿನಗಳಲ್ಲಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಅನಸ್ತೇಶಿಯಾ ಅಥವಾ ಅರಿವಳಿಕೆ ಇಂಜೆಕ್ಷನ್, ಅನಸ್ತೇಶಿಯಾಲಜಿಸ್ಟ್ (ಅರವಳಿಕೆ ತಜ್ಞ) ಬಗ್ಗೆ ತುಸುವಾದರೂ ತಿಳಿದುಕೊಂಡಿರುವುದು ಉತ್ತಮ.

ಯಾವುದೇ ಶಸ್ತ್ರ ಚಿಕಿತ್ಸೆಗೂ ಮುನ್ನ ರೋಗಿಗೆ ಅರವಳಿಕೆ ಮದ್ದು ನೀಡುವುದು ಸಾಮಾನ್ಯ. ಶಸ್ತ್ರ ಚಿಕಿತ್ಸೆ ವಿಧಾನ, ದೇಹದ ಭಾಗಗಳ ಆಧಾರದ ಮೇಲೆ ಅರಿವಳಿಕೆ ತಜ್ಞರು ತಪಾಸಣೆ ಅರವಳಿಕೆ ನೀಡುತ್ತಾರೆ. ಇದರಿಂದ ವಿಷಯ ತಜ್ಞ ವೈದ್ಯರು ಶಸ್ತ್ರ ಚಿಕಿತ್ಸೆ ಮುಂದುವರಿಸಲು ಸಹಾಯವಾಗುತ್ತದೆ.

ಶಸ್ತ್ರ ಚಿಕಿತ್ಸೆಯ ನಂತರವೂ ಅರಿವಳಿಕೆ ತಜ್ಞರು ರೋಗಿಯ ತಪಾಸಣೆ ನಡೆಸುವ ಮೂಲಕ ರೋಗಿಯ ಮೇಲ್ವಿಚಾರಣೆಯಲ್ಲಿಯೂ ಭಾಗಿಯಾಗಿರುತ್ತಾರೆ.

ಹೃದ್ರೋಗ ಸಂಬಂಧಿತ ಕ್ಯಾತ್ ಲ್ಯಾಬ್ ಪ್ರಕ್ರಿಯೆಗಳು, ಎಂಡೊಸ್ಕೋಪಿ, ಮಕ್ಕಳ ಎಂಆರ್‌ಐ ಸ್ಕ್ಯಾನ್, ಹೆರಿಗೆ ಸಂದರ್ಭಗಳಲ್ಲಿ ಅರವಳಿಗೆ ಮದ್ದು ಮತ್ತು ತಜ್ಞರ ಜವಾಬ್ದಾರಿ ಹೆಚ್ಚಿರುತ್ತದೆ.

ಅರಿವಳಿಕೆ  ನೀಡುವ ವಿಧಾನಗಳು

ಅರಿವಳಿಕೆ ತಜ್ಞ ವೈದ್ಯರು ಸಾಮಾನ್ಯವಾಗಿ ಎರಡು- ಮೂರು ರೀತಿಯ ಅರಿವಳಿಕೆ ಆರೈಕೆಯನ್ನು ಒದಗಿಸುತ್ತಾರೆ

ಸಂಪೂರ್ಣ ಅರಿವಳಿಕೆ

ಸಂಪೂರ್ಣ ಅರಿವಳಿಕೆಯನ್ನು ರಕ್ತ ನಾಳಗಳಿಗೆ ನೀಡಲಾಗುತ್ತದೆ. ಇದು ರೋಗಿಯನ್ನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತದೆ. ಇದನ್ನು ಕುತ್ತಿಗೆ ಅಥವಾ ಎದೆಯ ಭಾಗದ ಶಸ್ತ್ರಚಿಕಿತ್ಸೆ, ಮೆದುಳಿಗೆ ಸಂಬಂಧಿತ ಶಸ್ತ್ರ ಚಿಕಿತ್ಸೆ ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆಯ oತಹ ಸನ್ನಿವೇಶಗಳಲ್ಲಿ ಪ್ರಯೋಗಿಸಲಾಗುತ್ತದೆ.

ಪ್ರಾಂತೀಯ ಅರಿವಳಿಕೆ:

ಆಂಗ್ಲದಲ್ಲಿ ರೀಜನಲ್ ಅನಾಸ್ತೇಶಿಯ ಎನ್ನುವ ಈ ಪ್ರಕ್ರಿಯೆಯಲ್ಲಿ ಸೊಂಟದಿಂದ ಕೆಳಭಾಗ, ದೇಹದ ದೊಡ್ಡ ಭಾಗವನ್ನು ಮರಗಟ್ಟಲು ಅರವಳಿಗೆ ಪ್ರಯೋಗಿಸಲಾಗುತ್ತದೆ. ಈ ಇಂಜೆಕ್ಷನ್ ಅನ್ನು ಕ್ಯಾತಿಟರ್ ಎಂಬ ಸಣ್ಣ ಕೊಳವೆಯ ಮೂಲಕ ಬೆನ್ನು ಹುರಿಗೆ ನೀಡಲಾಗುತ್ತದೆ. ಇದರಿಂದ ರೋಗಿ ಎಚ್ಚರದಿಂದ ಇದ್ದರೂ ನಿಗದಿತ ಭಾಗದಲ್ಲಿ ನಡೆಸುವ ಶಸ್ತ್ರ ಚಿಕಿತ್ಸೆಯಿಂದ ನೋವಿನ ಅನುಭವ ಆಗುವುದಿಲ್ಲ. ಬೆನ್ನುಮೂಳೆಯ ಬ್ಲಾಕ್‌ಗಳು ಮತ್ತು ಎಪಿಡ್ಯೂರಲ್‌ಗಳನ್ನು ಒಳಗೊಂಡಂತೆ ಈ ರೀತಿಯ ಅರಿವಳಿಕೆಯನ್ನು ಹೆಚ್ಚಾಗಿ ಹೆರಿಗೆಯ ಸಮಯದಲ್ಲಿ ಮತ್ತು ಕಾಲು ಅಥವಾ ಹೊಟ್ಟೆಯ ಶಸ್ತ್ರಚಿಕಿತ್ಸೆ ವೇಳೆ ಬಳಸಲಾಗುತ್ತದೆ.

ಸ್ಥಳೀಯ ಅರಿವಳಿಕೆ
ಆಂಗ್ಲ ಭಾಷೆಯಲ್ಲಿ ಲೋಕಲ್ ಅನಾಸ್ತೇಶಿಯ ಎಂದು ಕರೆಯ ಲ್ಪಡುವ ಈ ಪ್ರಕ್ರಿಯೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ದೇಹದ ಒಂದು ಸಣ್ಣ ಪ್ರದೇಶವನ್ನು ಮಾತ್ರ ಮರಗಟ್ಟಿಸಲಾಗುತ್ತದೆ. ಉದಾಹರಣೆಗೆ ಕಣ್ಣಿನ ಕಟರಾಕ್ಟ್ ಶಸ್ತ್ರ ಚಿಕಿತ್ಸೆ,
ಸಣ್ಣ ಪುಟ್ಟ ಗೆಡ್ಡೆಗಳನ್ನು ತೆಗೆಯುವುದು, ಆಳವಾದ ಗಾಯಗಳನ್ನು ಹೊಲಿಯುವುದು ಅಥವಾ ಸಣ್ಣ ಪುಟ್ಟ ಗಂಟುಗಳು ನಿರ್ಮೂಲನೆ ಮುಂತಾದ ಕಾರ್ಯವಿಧಾನ ಗಳಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಅನಸ್ತೇಶಿಯಾ ತಜ್ಞರೊಂದಿಗೆ ಏನನ್ನೂ ಮುಚ್ಚಿಡಬೇಡಿ

– ಹೃದಯ ವೈಫಲ್ಯ, ಮಧುಮೇಹ ಅಥವಾ ಆಸ್ತವಾದಂತಹ ಯಾವುದೇ   ವೈದ್ಯಕೀಯ ಸಮಸ್ಯೆಗಳ ಬಗ್ಗೆ ನಿಮ್ಮ ಅರಿವಳಿಕೆ ತಜ್ಞ ವೈದ್ಯರಿಗೆ ತಿಳಿಸಲು ಮರೆಯದಿರಿ.

– ನೀವು  ಯಾವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬ ವಾಹಿತಿಯನ್ನು ತಪ್ಪದೇ ಅರವಳಿಗೆ ತಜ್ಞರೊಂದಿಗೆ ಹಂಚಿಕೊಳ್ಳಿ. ಅಲರ್ಜಿ ಇದ್ದಲ್ಲಿ ತಪ್ಪದೇ ತಿಳಿಸಿ.

– ನೀವು ಅರಿವಳಿಕೆ ಇಂಜೆಕ್ಷನ್ ಪಡೆದು ತೊಂದರೆ ಅನುಭವಿಸಿದ್ದರೆ, ಈ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ತಜ್ಞರೊಂದಿಗೆ ಹಂಚಿಕೊಳ್ಳಿ.

– ಮೈಗ್ರೇನ್, ಬೆನ್ನು ನೋವು, ಕ್ಯಾನ್ಸರ್ ನೋವು ಅಥವಾ ಫೈಬ್ರೊವ್ಯಾಲ್ಗಿಯದಂತಹ ಸಮಸ್ಯೆಗಳು ಇದ್ದರೆ ತಕ್ಷಣ ಅರವಳಿಗೆ ತಜ್ಞರನ್ನು ಭೇಟಿಯಾಗುವುದು ಸೂಕ್ತ.

andolanait

Recent Posts

ದರ್ಶನ್‌ ಪತ್ನಿ ವಿರುದ್ಧ ಅಶ್ಲೀಲ ಕಮೆಂಟ್‌ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್‌ ಪ್ರಕರಣದ ತನಿಖೆ ಕೊನೆಯ ಹಂತಕ್ಕೆ ಬಂದು…

32 mins ago

ರಾಜ್ಯ ಸರ್ಕಾರ ವೇಣುಗೋಪಾಲ್‌ ಕಿವಿ ಹಿಂಡಬೇಕು: ಬಿ.ವೈ.ವಿಜಯೇಂದ್ರ

ಬೆಂಗಳೂರು: ಕೇರಳ ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಕಲಿಕೆ ಮಸೂದೆ ಜಾರಿಗೆ ಮುಂದಾಗಿರುವ ವಿಚಾರಕ್ಕೆ…

55 mins ago

ಶೀತದಲೆ ಹಿನ್ನೆಲೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯಾದ್ಯಂತ ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ಜಿಲ್ಲೆಗಳಲ್ಲಿ ಶೀತಗಾಳಿ, ಶೀತದ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಶೀತದಲೆ…

1 hour ago

‘ಸಾವಿನ ನಂತರವೂ ಜನಮಾನಸದಲ್ಲಿ ಉಳಿದ ವೀರಭದ್ರಪ್ಪ’

ಯಳಂದೂರು: ನುಡಿನಮನ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಬಣ್ಣನೆ  ಯಳಂದೂರು: ಜನರ ಪ್ರೀತಿ ಗಳಿಕೆಯೇ ಸಾರ್ಥಕಜೀವನವಾಗಿದ್ದು, ಮನುಕುಲವನ್ನು ಕೃತಾರ್ಥ ಮಾಡುವ ಕೆಲಸವನ್ನು…

5 hours ago

ಓದುಗರ ಪತ್ರ: ಮಹಿಳೆ ವಿವಸ ಪ್ರಕರಣ ತನಿಖೆಯಲ್ಲಿ ಪೂರ್ವಗ್ರಹ ಬೇಡ

ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯ ವಿವಸ ಪ್ರಕರಣ ಅತ್ಯಂತ ಅಮಾನವೀಯವಾದುದು. ಸಂತ್ರಸ್ತ ಮಹಿಳೆ ಬಿಜೆಪಿಯೋ, ಕಾಂಗ್ರೆಸ್ಸೋ ಎನ್ನುವುದು ನಂತರದ ವಿಚಾರ. ಮೊದಲಿಗೆ…

5 hours ago

ಓದುಗರ ಪತ್ರ: ಶಾಲೆ ಬಳಿಯೇ ಕಸದ ಗುಡ್ಡೆ!

ನಂಜನಗೂಡು ಬಜಾರ್ ರಸ್ತೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಇದೆ. ಇದನ್ನು ದಳವಾಯಿ ಶಾಲೆ…

5 hours ago