ಸೌಮ್ಯ ಹೆಗ್ಗಡಹಳ್ಳಿ
ಆಧುನಿಕ ಸಂದರ್ಭದಲ್ಲಿ ಹೆಂಗಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಮುಟ್ಟಿನ ಸಮಸ್ಯೆಯೂ ಒಂದು. ಇದೇ ವೇಳೆಯಲ್ಲಿ ದೂರದೂರಿನ ಪ್ರಯಾಣಕ್ಕೆಂದೋ, ಶುಭ ಸವಾರಂಭಗಳಲ್ಲಿ ಭಾಗವಹಿಸಲೆಂದೋ ತಿಂಗಳ ಋತು ಚಕ್ರನ್ನು ಮುಂದೂಡಲು (ಎರಡ್ಮೂರು ದಿನಗಳಿಗೆ) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಇದು ಸರಿಯೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆಯೇ ಎಂಬುದರ ಬಗ್ಗೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ಲಲಿತಾ ಅವರು ಮಾತನಾಡಿದ್ದಾರೆ.
* ಮುಟ್ಟು ಮುಂದೂಡಲು ಮಾತ್ರೆಗಳ ಸೇವನೆ ಸೂಕ್ತವೇ?
ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಮಾತ್ರೆಗಳ ಬಳಕೆ ಮಾಡಬೇಕು. ಮುಟ್ಟಾಗುವ ೫ ದಿನಗಳ ಮುಂಚಿತವಾಗಿ ದಿನಕ್ಕೊಂದರಂತೆ ಮಾತ್ರೆಗಳನ್ನು ಬಳಸಬಹುದು. ಆದರೆ ಇದನ್ನೇ ಪುನರಾವರ್ತನೆ ಮಾಡುವುದು ಸರಿಯಲ್ಲ. ನಕಲಿ ಮಾತ್ರೆಗಳಿಂದ ದೂರವಿರಬೇಕು. ಕಡ್ಡಾಯವಾಗಿ ೧೦ ದಿನಗಳು ಮೀರಬಾರದು.
* ಈ ಬಗೆಯ ಮಾತ್ರೆ ಯಾರು ತೆಗೆದುಕೊಳ್ಳಬಹುದು?
ಇದಕ್ಕೆ ವಯಸ್ಸಿನ ಮೀತಿ ಇಲ್ಲ. ೧೮ ವರ್ಷ ಮೇಲ್ಪಟ್ಟವರು ತೆಗೆದುಕೊಳ್ಳಬಹುದು. ತೆಗೆದುಕೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಸೂಕ್ತ.
* ಈ ಮಾತ್ರೆಗಳನ್ನು ಯಾರು ತೆಗೆದುಕೊಳ್ಳಬಾರದು?
ಮಧುಮೇಹಿಗಳು, ಹೃದುಂ ಸಂಬಂಧಿ ಸಮಸ್ಯೆ ಉಳ್ಳವರು, ಹಲವು ಬಗೆಯ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬಾರದು. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಬಹಳಷ್ಟು ಎಚ್ಚರ ವಹಿಸುವುದು ಸೂಕ್ತ.
* ಮಾತ್ರೆಗಳ ಸೇವನೆಯಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು?
ಮುಟ್ಟು ತಡೆ ಮಾತ್ರೆಗಳನ್ನು ತೆಗೆದುಕೊಂಡು ಬಳಿಕ ಮುಟ್ಟಾದ ಸಂದರ್ಭಗಳಲ್ಲಿ ವಾಕರಿಕೆ, ಸುಸ್ತಾಗುವುದು, ಸಿಡುಕುವುದು ಸಹಜ. ಇದಕ್ಕೆ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳು ಕಾರಣ.
* ಸಾಮಾನ್ಯ ಮುಟ್ಟಿಗೂ ಮುಂದೂಡಲ್ಪಟ್ಟ ಮುಟ್ಟಿಗೂ ಏನು ವ್ಯತ್ಯಾಸ?
ಸಾಮಾನ್ಯ ಋತು ಚಕ್ರದ ದಿನಗಳಿಗೂ ಮುಂದೂಡಿ ಮುಟ್ಟಾದ ದಿನಗಳಿಗೂ ಬಹಷ್ಟು ವ್ಯತ್ಯಾಸವಿರುತ್ತದೆ. ಕೆಲವರಲ್ಲಿ ಅತಿಯಾದ ರಕ್ತಸ್ರಾವ ಕಾಡುವುದುಂಟು, ಮತ್ತಷ್ಟು ಮಂದಿಯಲ್ಲಿ ಕಡಿಮೆ ರಕ್ತಸ್ರಾವವೂ ಆಗುವುದುಂಟು. ಈ ಕಾರಣಕ್ಕಾಗಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ.
ಮಾತ್ರೆ ತೆಗೆದುಕೊಳ್ಳುವ ಮುನ್ನ ತಿಳಿದಿರಬೇಕಾದ ಅಂಶಗಳೇನು?
ಒಂದಷ್ಟು ಮಹಿಳೆಯರು ಸರಿಯಾದ ತಿಳುವಳಿಕೆ ಇಲ್ಲದೆ ಮುಟ್ಟು ಮುಂದೂಡುವ ಮಾತ್ರೆಗಳನ್ನು ಸೇವಿಸಿ ಅನಾರೋಗ್ಯಕ್ಕೀಡಾದ ಉದಾಹರಣೆಗಳು ಉಂಟು. ಈ ವಾತ್ರೆಗಳನ್ನು ಯಾವಾಗ ಹೇಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪ್ರತಿಯೊಬ್ಬರ ದೇಹ ಪ್ರಕೃತಿಯೂ ಬೇರೆ ಬೇರೆ ಇರುವುದರಿಂದ ಎಲ್ಲರಿಗೂ ಒಂದೇ ಸೂತ್ರ ಅನ್ವಯವಾಗುವುದಿಲ್ಲ.
ಲಕ್ನೋ: ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾದ…
ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ…
ಬೆಂಗಳೂರು: ಕಚೇರಿಯಲ್ಲಿ ಮಹಿಳೆಯರೊಂದಿಗೆ ರಾಮಚಂದ್ರರಾವ್ ಅನುಚಿತ ವರ್ತನೆ ಕುರಿತ ವೈರಲ್ ವಿಡಿಯೋಗಳು ಅಸಲಿ ಎಂದು ತನಿಖಾ ತಂಡ ದೃಢಪಡಿಸಿದೆ. ಸಮವಸ್ತ್ರದಲ್ಲಿಯೇ…
ನವದೆಹಲಿ: ಮಧ್ಯ ಏಷ್ಯಾದಲ್ಲಿ ಬಿಕ್ಕಟ್ಟು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜೊತೆ…
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.…
ಬೆಂಗಳೂರು: ಕರ್ನಾಟಕದ ಹಲವೆಡೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೀದರ್, ಕಲಬುರ್ಗಿ,…