ರೇಣು ಪ್ರಿಯದರ್ಶಿನಿ ಎಂ
ಚಾತಕ ಪಕ್ಷಿ ಮಳೆಯ ಮೊದಲ ಹನಿಗಾಗಿ ಬಾಯಿ ತೆರೆದು ಆಗಸಕ್ಕೆ ಮುಖವೊಡ್ಡಿ ಕುಳಿತಿರುವುದೆಂದು ಜಾನಪದ ಕಥೆಗಳು ಹೇಳುತ್ತವೆ… ಈ ಪಕ್ಷಿಯು ಮೂಲತಃ ಆಫ್ರಿಕಾ ಮತ್ತು ಏಶಿಯ ಖಂಡಗಳ ನಿವಾಸಿ. ಸಾಮಾನ್ಯವಾಗಿ ವಲಸೆ ಹಕ್ಕಿಗಳು ಚಳಿಗಾಲದಲ್ಲಿ ನಮ್ಮ ದೇಶಕ್ಕೆ ಬಂದರೆ ಈ ಪಕ್ಷಿ ಬೇಸಿಗೆಯ ಅತಿಥಿ. ತೆಳು ದೇಹದ, ಕಪ್ಪು-ಬಿಳುಪಿನ, ಮಧ್ಯಮ ಗಾತ್ರದ, ಕೋಗಿಲೆ ಜಾತಿಗೆ ಸೇರಿದ ಚಾತಕ ಹಕ್ಕಿಗೆ ತಲೆಯ ಮೇಲೆ ಕಿರೀಟದಂತೆ ಕಪ್ಪು ಜುಟ್ಟು. ಇದರ ಮೇಲ್ದೇಹ ಹೊಳೆಯುವ ಕಂದು ಮಿಶ್ರಿತ ಕಪ್ಪು ಹಾಗೂ ಕುತ್ತಿಗೆ, ಕೆಳಮೈ ಅಚ್ಚ ಬಿಳಿಯದ್ದು. ಕಪ್ಪು ಕೊಕ್ಕು, ಕಂದು ಕಣ್ಣು ಹೊಂದಿದ, ಬಲು ನಾಚಿಕೆ ಸ್ವಭಾವದ ಈ ಹಕ್ಕಿ ಹಾರುವಾಗ ಕಪ್ಪು ರೆಕ್ಕೆ ಮೇಲಿರುವ ಬಿಳಿಯ ಗುರುತು ವಿಶೇಷವಾಗಿ ಎದ್ದು ತೋರುತ್ತದೆ. ಇದರ ಕಪ್ಪಾದ ಸಪೂರ ಬಾಲದ ತುದಿ ಬಿಳಿಯಾದರೆ ಬಾಲದ ಅಡಿಯಲ್ಲಿ ಬಿಳುಪು ಪಟ್ಟಿಯಿದೆ.
ಕವಿ ಕಾಳಿದಾಸನ ‘‘ಮೇಘದೂತ’’ ಕೃತಿಯಲ್ಲಿ ಹೆಸರಿಸಲಾದ ಚಾತಕ ಪಕ್ಷಿ ಸಾಮಾನ್ಯವಾಗಿ ಕುರುಚಲು ಕಾಡು, ಬಯಲು, ಬಿದಿರು ಕಾಡು ಮತ್ತು ಒಣ ಪ್ರದೇಶದ ಮುಳ್ಳಿನ ಗಿಡಗಳಲ್ಲಿ ಅವಿತು ಕುಳಿತಿರುವುದನ್ನು ನೋಡಬಹುದು, ಆದರೆ ದಟ್ಟ ಕಾಡುಗಳಲ್ಲಿ ಮತ್ತು ಮರುಭೂಮಿಯಂತಹ ಅತಿ ಒಣ ಪ್ರದೇಶಗಳಲ್ಲಿ ಇರುವುದಿಲ್ಲ. ಸದಾ ಮರದ ಮೇಲೆೆುೀಂ ವಾಸಿಸುವ ಚಾತಕ ಹಕ್ಕಿ ಆಹಾರಕ್ಕಾಗಿ ನೆಲದ ಮೇಲೆ ಇಳಿಯುತ್ತದೆ. ಇವುಗಳು, ತಮ್ಮ ಅವಾಸ ಸ್ಥಾನಗಳಲ್ಲಿ ಸಿಗುವ ಹಲ್ಲಿ, ಮಿಡತೆ, ಜೀರುಂಡೆ, ಸಣ್ಣ ಹುಳು-ಹುಪ್ಪಟೆಗಳನ್ನು ತಿಂದರೂ ಕಂಬಳಿಹುಳುಗಳನ್ನು ಅತಿ ಅಕ್ಕರೆಯಿಂದ ಸವಿಯುವುದು ಕಂಡಾಗ ಸೋಜಿಗವೆನಿಸುವುದು. ಈ ಕಂಬಳಿ ಹುಳುಗಳನ್ನು ಮರದ ತೊಗಟೆಯ ನಡುವೆ ಇಲ್ಲವೇ ತರಗಲೆಗಳ ಸಂದಿನಿಂದ ಹೆಕ್ಕಿ, ಜೋರಾಗಿ ಕುಕ್ಕಿ, ಅದರ ಹೊಟ್ಟೆಯಲ್ಲಿನ ಕರುಳು ಒತ್ತಿ ಹೊರತೆಗೆದು, ನಂತರ ಗಾಳಿಯಲ್ಲಿ ಹಾರಿಸಿ ವಿನ್ಯಾಸವಾಗಿ ನುಂಗುವ ಪರಿ ಅದ್ಭುತ!!! ಸಾಧಾರಣವಾಗಿ ಒಂಟಿಯಾಗಿ ಕಾಣಿಸಿಕೊಳ್ಳುವ ಚಾತಕ ಹಕ್ಕಿ ಅಪಾಯದ ಮುನ್ಸೂಚನೆ ದೊರೆತಾಗ ಜೋರಾಗಿ ರೆಕ್ಕೆ ಬಡಿದು, ಆಹಾರ ದೊರೆತಾಗ ಜೋರಾಗಿ ಕೂಗಿ ಇತರ ಹಕ್ಕಿಗಳನ್ನು ಎಚ್ಚರಿಸುವುದು.
ಜನವರಿ- ಮಾರ್ಚ್ ಸಮಯದಲ್ಲಿ ಮರಿ ಮಾಡುವ ಚಾತಕ ಪಕ್ಷಿ ಕೋಗಿಲೆ ಜಾತಿಯ ಹಕ್ಕಿಗಳಂತೆ ಇತರ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವ ಪರತಂತ್ರ ಹಕ್ಕಿ. ಇದು ತನ್ನ ಮೊಟ್ಟೆಯ ಬಣ್ಣ ಹೋಲುವ ಗೀಜಗಾರಲು ಹಕ್ಕಿಯ ಗೂಡಿನಲ್ಲಿ ಮೋಸದಿಂದ ಮೊಟ್ಟೆ ಇಡುವುದು. ಸಾಧಾರಣವಾಗಿ ಬೆಳಗಿನ ಹೊತ್ತಿನಲ್ಲಿ ಪೋಷಕ ಹಕ್ಕಿಗಳು ಗೂಡಿನ ಅಂಚಿಗೆ ಸರಿದಾಗ ಅವಸರದಿಂದ ಅದಕ್ಕೆ ತಿಳಿಯದಂತೆ ತುಸು ಮೇಲಿನಿಂದ ಮೊಟ್ಟೆ ಹಾಕಿ ಹಾರಿ ಹೋಗುತ್ತವೆ. ಇದರಿಂದ ಆತಿಥೇಯ ಹಕ್ಕಿಗಳ ಮೊಟ್ಟೆ ಬಿರುಕು ಬಿಟ್ಟು, ಇಲ್ಲವೇ ಒಡೆಯುವುದು. ಇದು ಅವುಗಳನ್ನು ಹಾಳು ಮಾಡುವ ಕುತಂತ್ರವೂ ಹೌದು. ಕೆಲವು ಬಾರಿ, ಗಂಡು ಹಕ್ಕಿ ಪೋಷಕರ ಗಮನ ಬೇರೆಡೆ ಸೆಳೆಯುತ್ತಿರುವಾಗ ಹೆಣ್ಣು ಹಕ್ಕಿ ಮೊಟ್ಟೆ ಇಡುವುದು ಕಂಡು ಬಂದಿದೆ. ವ್ಯತ್ಯಾಸ ತಿಳಿಯದ ಆತಿಥೇಯ ಹಕ್ಕಿ ಇವುಗಳಿಗೂ ಕಾವು ಕೊಟ್ಟು ಮರಿ ಮಾಡುವುದು. ಆಗತಾನೆ ಹುಟ್ಟಿದ ಚಾತಕ ಹಕ್ಕಿಗಳ ಮರಿಗಳು ಎಲ್ಲ ಆಹಾರವನ್ನು ಕಬಳಿಸಿ, ದಷ್ಟ-ಪುಷ್ಟವಾಗಿ ಬೆಳೆದು, ಬಾಡಿಗೆ ತಾಯಿಯ ಮಕ್ಕಳ ಆಹಾರವನ್ನು ತಿಂದು ತೇಗುತ್ತವೆ ಮತ್ತು ಅವುಗಳ ವಿನಾಶಕ್ಕೂ ಕಾರಣವಾಗುತ್ತವೆ. ಗೀಜಗಾರಲು ಹಕ್ಕಿಗಳು ಸಾಮೂಹಿಕ ಜೀವನ ನಡೆಸುವುದರಿಂದ ಚಾತಕ ಹಕ್ಕಿಗಳ ಮರಿಗಳನ್ನು ಗುಂಪಿನ ಎಲ್ಲ ಹಕ್ಕಿಗಳು ಸೇರಿ ಪೋಷಿಸುವುವು.
ತಂತ್ರವೊ- ಕುತಂತ್ರವೋ ಮರಿಗಳ ಪೋಷಣೆ ಮಾಡದ ಸೋಂಬೇರಿ ಚಾತಕ ಹಕ್ಕಿ ತನ್ನ ಮರಿಗಳನ್ನು ಬಾಡಿಗೆ ತಾಯಿಯ ನೆರವಿನಿಂದ ಬೇರೆ ಗೂಡಲ್ಲಿ ಬೆಳಸಿ ತಾನು ಪಲಾಯನವಾದ ಹೂಡುವ ತಂತ್ರ ನಿಬ್ಬೆರಗಾಗುವಂತಹದ್ದು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…