• ಪ್ರಶಾಂತ್ ಎಸ್.
ಇತ್ತೀಚೆಗೆ ಕುಟುಂಬದೊಳಗಿನ ಮಾನವ ಸಂಬಂಧಗಳ ಮೌಲ್ಯಗಳು ಕಡಿಮೆಯಾಗಿ ಹಿರಿಯ ಜೀವಗಳು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ಮುಪ್ಪಾಗುತ್ತಿದ್ದಂತೆ ಬಂಧು-ಬಾಂಧವರಿಂದ ದೂರ, ಸ್ವಂತ ಮಕ್ಕಳಿಂದ ತಾತ್ಸಾರ ಇವುಗಳ ನಡುವೆ ಹಿರಿಯರ ಬದುಕು ಅತಂತ್ರವಾಗುವುದಂತೂ ನಿಜ.
ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಿಮಾತ್ಯ ಜೀವನಶೈಲಿಗಳು ಅಳವಡಿಕೆ ಇಂದು ಕುಟುಂಬಗಳನ್ನು ಹೊಡೆಯುತ್ತಿದೆ ಎಂದರೆ ತಪ್ಪಾಗಲಾರದು. ಈ ಪದ್ಧತಿಗಳು ಅನೇಕ ವಯೋವೃದ್ಧರನ್ನು ಒಂಟಿ ಜೀವಿಗಳನ್ನಾಗಿಸಿದೆ.
ಹೀಗೆ ಕುಟುಂಬದಿಂದ ದೂರಾದ, ಮಕ್ಕಳ ಹಾರೈಕೆಯಿಂದ ವಂಚಿತರಾದ ಹಿರಿಯ ನೊಂದ ಜೀವಗಳಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಜೆಎಸ್ ಎಸ್ ಸಂಸ್ಥೆಯು ‘ಹಿರಿಯರ ಮನೆ’ಯನ್ನು ಆಗಸ್ಟ್ 11, 2000ರಂದು ಮೈಸೂರಿನಲ್ಲಿ ಆರಂಭಿಸಿತು.
ಇದರಲ್ಲಿ ಕುಟುಂಬದಿಂದ ಬೇರ್ಪಟ್ಟ ಹಿರಿಯರಿಗೆ ಉಚಿತ ವಸತಿ, ಬೋರ್ಡಿಂಗ್ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಜೆಎಸ್ ಎಸ್ ಹಿರಿಯರ ಮನೆ ಸುತ್ತೂರು ಶ್ರೀಕ್ಷೇತ್ರದ ಪ್ರಶಾಂತ ಪರಿಸರದಲ್ಲಿ ಎರಡು ಹಿರಿಯ ನಾಗರಿಕರ ಮನೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಉಚಿತವಾಗಿದೆ. ಇಲ್ಲಿ ಐವತ್ತು ಮಂದಿ ಆಶ್ರಯ ಪಡೆದುಕೊಂಡಿದ್ದು, ತಮ್ಮ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.
1090 ಹಿರಿಯರ ಸಹಾಯವಾಣಿ
ಜೆಎಸ್ ಎಸ್ ವೃದ್ಧಾಶ್ರಮ ಸಾಕಷ್ಟು ಸೌಲಭ್ಯಗಳನ್ನು ಈ ಮನೆಗಳಲ್ಲಿ ಹಿರಿಯರಿಗೆ ಕಲ್ಪಿಸಿದೆ. ಈ ವೃದ್ಧಾಶ್ರಮದಲ್ಲಿ ಹಿರಿಯರಿಗಾಗಿ ಉಚಿತ ವಸತಿ, ಗ್ರಂಥಾಲಯ, 24 ಗಂಟೆಗಳ ಕಾಲ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಮತ್ತು ಕೇಬಲ್ ಟಿವಿ ಸೌಲಭ್ಯ, ಸುಂದರವಾದ ಉದ್ಯಾನವನ, ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ, ಸಮತೋಲನ ಆಹಾರ, ಆಗಾಗ್ಗೆ ದಾದಿಯರಿಂದ ಭೇಟಿ, ಕ್ರೀಡಾ ಚಟುವಟಿಕೆಗಳು, ನಿಯಮಿತ ಭಜನೆ ಮತ್ತು ಧ್ಯಾನ, ಯೋಗ, ಪ್ರಾಣಾಯಾಮ ಮಾಡಿಸುವ ಜತೆಗೆ ಪ್ರಕೃತಿ ಚಿಕಿತ್ಸೆ ಸೌಲಭ್ಯಗಳು, ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಎಲ್ಲ ರಾಷ್ಟ್ರೀಯ ಮತ್ತು ಇತರ ಹಬ್ಬಗಳ ಆಚರಣೆ ಮಾಡುವ ಮೂಲಕ ಹಿರಿಯರು ಒಂದಿಷ್ಟು ಸುಂದರ ಕ್ಷಣೆಗಳನ್ನು ಅನುಭವಿಸಲು ಇಲ್ಲಿ ಅವಕಾಶ ನೀಡಲಾಗುತ್ತದೆ.
ಜೆಎಸ್ ಎಸ್ ಹಿರಿಯರ ಮನೆಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ: ಜೆಎಸ್ಎಸ್ ವೃದ್ಧಾಶ್ರಮ, ಅರವಿಂದನಗರ, ಮೈಸೂರು. ದೂರವಾಣಿ ಸಂಖ್ಯೆ: 0821-2548252 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿರ್ದೇಶಕರು, ಸಾಮಾನ್ಯ ಅಭಿವೃದ್ಧಿ ವಿಭಾಗ, ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು- 0821-2548206.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…