ನವೀನ್ ಡಿಸೋಜ
೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ
ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ಯುವಜನರಿಗೆ ನಿರುದ್ಯೋಗ ಅವಧಿಯಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯುವನಿಧಿ ಯೋಜನೆ ೩ ವರ್ಷ ಪೂರೈಸಿದ್ದು, ಕೊಡಗು ಜಿಲ್ಲೆಯಲ್ಲಿ ೨,೧೭೯ ಯುವಜನರಿಗೆ ೬.೩೦ ಕೋಟಿ ರೂ. ನೆರವು ಒದಗಿಸಲಾಗಿದೆ.
೨೦೨೬ರ ಆಗಸ್ಟ್ ಅಂತ್ಯದ ಅಂಕಿ-ಅಂಶಗಳ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಒಟ್ಟು ೨,೪೫೯ ನಿರುದ್ಯೋಗಿ ಯುವಕ-ಯುವತಿಯರು ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ೨,೧೭೯ ಫಲಾನುಭವಿಗಳಿಗೆ ಶೇ.೮೮.೦೬ರಷ್ಟು ಯಶಸ್ವಿಯಾಗಿ ಡಿಬಿಟಿ ಮೂಲಕ ಆರ್ಥಿಕ ನೆರವು ತಲುಪಿಸಲಾಗಿದೆ. ಒಟ್ಟಾರೆ ಫಲಾನುಭವಿಗಳ ಖಾತೆಗಳಿಗೆ ೬.೩೦ ಕೋಟಿ ರೂ. ವರ್ಗಾವಣೆಯಾಗಿರುವುದು ಯೋಜನೆಗೆ ಜಿಲ್ಲೆಯಲ್ಲಿ ದೊರೆತಿರುವ ಸ್ಪಂದನೆಗೆ ಸಾಕ್ಷಿಯಾಗಿದೆ.
ಯೋಜನೆಯಡಿ ಜಿಲ್ಲೆಯಲ್ಲಿ ೨,೧೪೮ ಪದವೀಧರ ಫಲಾನುಭವಿಗಳಿಗೆ ಒಟ್ಟು ೬.೨೬ ಕೋಟಿ ರೂ. ಆರ್ಥಿಕ ನೆರವು ಡಿಬಿಟಿ ಮೂಲಕ ಜಮೆಯಾಗಿದೆ. ಇದೇ ವೇಳೆ ೩೧ ಡಿಪ್ಲೊಮಾ ಪದವೀಧರ ಫಲಾನುಭವಿಗಳಿಗೆ ೪.೨೦ ಲಕ್ಷ ರೂ. ನೆರವು ನೀಡಲಾಗಿದೆ. ಹೀಗಾಗಿ ಪದವೀಧರ ಮತ್ತು ಡಿಪ್ಲೊಮಾ ಪದವೀಧರರು ಸೇರಿದಂತೆ ಒಟ್ಟು ೨,೧೭೯ ಮಂದಿಗೆ ೬.೩೦ ಕೋಟಿ ರೂ. ನೆರವು ದೊರೆತಿದೆ. ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡವರಲ್ಲಿ ಮಹಿಳೆಯರ ಪಾಲು ಗಮನಾರ್ಹವಾಗಿದೆ.
ಒಟ್ಟು ೨,೪೫೯ ನೋಂದಾಯಿತ ಅಭ್ಯರ್ಥಿಗಳ ಪೈಕಿ ೧,೪೨೭ ಮಹಿಳೆಯರು, ಅಂದರೆ ಶೇ.೫೮.೦೩ರಷ್ಟು ಮಂದಿ ಇದ್ದಾರೆ. ೧,೦೩೨ ಪುರುಷರು, ಅಂದರೆ ಶೇ.೪೧.೯೭ರಷ್ಟು ಮಂದಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ತಾಲ್ಲೂಕುವಾರು ಅಂಕಿ-ಅಂಶಗಳನ್ನು ಗಮನಿಸಿದಾಗ ಸೋಮವಾರಪೇಟೆ ತಾಲ್ಲೂಕು ಯುವನಿಧಿ ಯೋಜನೆಯ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ.
ತಾಲ್ಲೂಕಿನಲ್ಲಿ ಒಟ್ಟು ೭೧೨ ಅಭ್ಯರ್ಥಿಗಳು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈ ಪೈಕಿ ೬೩೫ ಮಂದಿಗೆ ಡಿಬಿಟಿ ಮೂಲಕ ಆರ್ಥಿಕ ನೆರವು ತಲುಪಿದೆ. ಮಡಿಕೇರಿ ತಾಲ್ಲೂಕು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ೬೬೬ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ೫೮೭ ಅಭ್ಯರ್ಥಿಗಳು ಯೋಜನೆಯ ಪ್ರಯೋಜನ ಪಡೆದಿದ್ದಾರೆ.
ಸಾಮಾಜಿಕ ವರ್ಗವಾರು ನೋಂದಣಿಯಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಹಿಂದುಳಿದ ವರ್ಗಕ್ಕೆ ಸೇರಿದ ೧,೮೪೩ ಅಭ್ಯರ್ಥಿಗಳು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಇದು ಒಟ್ಟು ನೋಂದಣಿಯಲ್ಲಿ ದೊಡ್ಡ ಪಾಲಾಗಿದೆ. ಇದರೊಂದಿಗೆ ಪರಿಶಿಷ್ಟ ಜಾತಿಯ ೩೪೦, ಪರಿಶಿಷ್ಟ ಪಂಗಡದ ೯೫ ಹಾಗೂ ಸಾಮಾನ್ಯ ವರ್ಗದ ೧೮೧ ಅಭ್ಯರ್ಥಿಗಳು ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಯುವನಿಧಿ ಯೋಜನೆಯ ನಿಯಮಾವಳಿಯಂತೆ ನಿಗದಿತ ೨೪ ತಿಂಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ೧,೦೦೭ ಫಲಾನುಭವಿಗಳನ್ನು ೨೦೨೬ರ ಜುಲೈ ಅಂತ್ಯಕ್ಕೆ ಯೋಜನೆಯಿಂದ ಕೈಬಿಡಲಾಗಿದೆ. ಯೋಜನೆಯಡಿ ನೆರವು ಪಡೆಯುವ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಫಲಾನುಭವಿಗಳು ಯೋಜನೆಯಿಂದ ನಿರ್ಗಮಿಸಿದ್ದಾರೆ.
ಇದರ ಜತೆಗೆ, ಯೋಜನೆಯಡಿ ನೆರವು ಪಡೆಯುತ್ತಿದ್ದ ಆರು ಮಂದಿ ತಾವು ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆ ಸಲ್ಲಿಸಿ ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬಂದಿದ್ದಾರೆ. ಉದ್ಯೋಗ ದೊರೆತ ಬಳಿಕ ಸರ್ಕಾರದ ಆರ್ಥಿಕ ನೆರವನ್ನು ಮುಂದುವರಿಸದೆ ಯೋಜನೆಯಿಂದ ಹೊರಬಂದಿರುವುದು ಯುವನಿಧಿ ಯೋಜನೆಯ ಉದ್ದೇಶ ಈಡೇರುತ್ತಿರುವುದರ ಒಂದು ಸೂಚಕವಾಗಿದೆ.
” ಯುವನಿಧಿ ಯೋಜನೆಯ ನಿಯಮದಂತೆ ನಿರುದ್ಯೋಗಿಗಳು ಪ್ರತಿ ತಿಂಗಳ ೨೫ನೇ ತಾರೀಖಿನೊಳಗೆ ಸ್ವಯಂ ಘೋಷಣೆ ನೀಡಿದಲ್ಲಿ ಮಾತ್ರ ಡಿಬಿಟಿ ಪಾವತಿಯಾಗುತ್ತದೆ. ನಿರುದ್ಯೋಗಿಗಳು ಸ್ವಯಂ ಘೋಷಣೆ ನೀಡಬೇಕು. ಕೆಲವು ಅರ್ಜಿಗಳನ್ನು ಭೌತಿಕ ಪರಿಶೀಲನೆ ವೇಳೆ ತಿರಸ್ಕರಿಸಲಾಗಿದೆ.”
-ಮಂಜುನಾಥ್, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ
ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…
ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…
ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು…
ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…
ಕೆ.ಬಿ.ರಮೇಶನಾಯಕ ಮೊದಲ ಹಂತದ ಮೂರು ರಸ್ತೆಗಳಲ್ಲಿ ಎರಡು ಪೂರ್ಣ ರಸ್ತೆ ಜತೆಗೆ ಫುಟ್‌ಪಾತ್, ಚರಂಡಿ ಕಾಮಗಾರಿಯೂ ಪೂರ್ಣ ದಸರಾ ಬಳಿಕ…