Andolana originals

ವೈಟ್ ಟಾಪಿಂಗ್: ಅ.೫ರೊಳಗೆ ಮೂರು ರಸ್ತೆ ಸಂಚಾರಕ್ಕೆ ಮುಕ್ತ

ಕೆ.ಬಿ.ರಮೇಶನಾಯಕ

ಮೊದಲ ಹಂತದ ಮೂರು ರಸ್ತೆಗಳಲ್ಲಿ ಎರಡು ಪೂರ್ಣ

ರಸ್ತೆ ಜತೆಗೆ ಫುಟ್‌ಪಾತ್, ಚರಂಡಿ ಕಾಮಗಾರಿಯೂ ಪೂರ್ಣ

ದಸರಾ ಬಳಿಕ ಉಳಿದ ರಸ್ತೆಗಳ ಕಾಮಗಾರಿ ಆರಂಭ 

ಮೈಸೂರು: ಪ್ರತಿವರ್ಷ ರಸ್ತೆ ಡಾಂಬರೀಕರಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿರುವುದನ್ನು ತಪ್ಪಿಸುವ ಜತೆಗೆ, ಆಗಿಂದಾಗ್ಗೆ ಮೂಲಸೌಕರ್ಯಕ್ಕೆ ರಸ್ತೆ ಅಗೆಯುವುದನ್ನು ತಡೆದು ಮುಂದಿನ ೩೦-೪೦ ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡಲು ನಗರದಲ್ಲಿ ೪೬.೮ ಕಿ.ಮೀ ಉದ್ದದ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಪ್ರಾರಂಭಿಸಿದ್ದ ಮೂರು ರಸ್ತೆಗಳು ಅ.೫ರೊಳಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ.

ಬಫರ್ ಜೋನ್ ಹೊರತುಪಡಿಸಿದರೆ ಉಳಿದಂತೆ ವೈಟ್ ಟಾಪಿಂಗ್ ರಸ್ತೆಯ ಜತೆಗೆ, ಫುಟ್‌ಪಾತ್,ಚರಂಡಿ ನಿರ್ಮಾಣ ಕಾಮಗಾರಿ ಕೂಡ ಮುಗಿದಿರುವುದರಿಂದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ದಸರಾ ಬಳಿಕ ಬೋಗಾದಿ ರಸ್ತೆ ಮಾರ್ಗ ಮಧ್ಯೆಯ ಸೇತುವೆ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ರಸ್ತೆಗಳು ವಿಶಾಲವಾಗಿದ್ದರೆ, ಹಳೆಯ ಬಡಾವಣೆಗಳ ರಸ್ತೆಗಳು ಕೂಡ ಬಾಳಿಕೆಯಲ್ಲಿವೆ. ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚಳ, ಡಾಂಬರೀಕರಣ ವೆಚ್ಚ ಕೂಡ ಹೆಚ್ಚುತ್ತಿದ್ದರಿಂದ ೨೦೧೩-೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಗನ್‌ಹೌಸ್‌ನಿಂದ ಹಾರ್ಡಿಂಜ್ ವೃತ್ತ, ಚಾಮರಾಜ ಜೋಡಿ ರಸ್ತೆ, ಕೆ.ಆರ್.ವೃತ್ತದಿಂದ ಬನ್ನಿಮಂಟಪದವರೆಗೆ ವೈಟ್ ಟಾಪಿಂಗ್ ರಸ್ತೆಯನ್ನಾಗಿ ಪರಿವರ್ತಿಸಲಾಗಿತ್ತು. ಹೀಗಾಗಿ, ನಗರದ ಹಲವಾರು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಲೋಕೋಪಯೋಗಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.

ಮೊದಲ ಹಂತದಲ್ಲಿ ೪೬.೮ ಕಿಮೀ ಉದ್ದದ ೧೨ ರಸ್ತೆಗಳ ವೈಟ್ ಟಾಪಿಂಗ್‌ಗೆ ೩೯೩.೮೫ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ಹೀಗಾಗಿ, ಕಳೆದ ಏಪ್ರಿಲ್ ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೂರು ರಸ್ತೆಗಳ ಕಾಮಗಾರಿ ಭರದಿಂದ ಸಾಗಿದ್ದರಿಂದ ಮುಗಿಯುವ ಹಂತಕ್ಕೆ ಬಂದಿದೆ.

ಮೂರು ರಸ್ತೆಗಳು ಮುಕ್ತ: ಮೂರು ರಸ್ತೆಗಳ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿರುವ ಪರಿಣಾಮ ಅ.೫ರೊಳಗೆ ಸಂಚಾರಕ್ಕೆ ಮುಕ್ತವಾಗಲಿದ್ದು, ಉಳಿದ ೯ ಕಾಮಗಾರಿಗಳನ್ನು ದಸರಾ ಮಹೋತ್ಸವ ಮುಗಿದ ಬಳಿಕ ಪ್ರಾರಂಭಿಸಲಾಗುತ್ತದೆ. ಅರಮನೆಯ ವೆಸ್ಟ್ ಗೇಟ್‌ನಿಂದ ಬೋಗಾದಿ ರಿಂಗ್ ರಸ್ತೆಗೆ ಸೇರುವ ೬ ಕಿಮೀ ಉದ್ದದ ಕಾಮಗಾರಿಯು ಮುಗಿಯುತ್ತಿದ್ದು, ಮುಡಾ ಕಚೇರಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಪೈಪ್‌ಲೇನ್ ಅಡ್ಡವಾಗಿರುವ ಭಾಗದ ಕೆಲಸ, ಗಂಗೋತ್ರಿ ಬಳಿ ಒಂದು ಸೇತುವೆಯ ಕಾಮಗಾರಿ ನಂತರ ಶುರು ಮಾಡಲಾಗುತ್ತದೆ. ಹಾರ್ಡಿಂಜ್ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಫೈವ್‌ಲೈಟ್ ವೃತ್ತ, ಸರ್ಕಾರಿ ಅತಿಥಿಗೃಹದ ಜಂಕ್ಷನ್, ಎಫ್ಟಿಎಸ್ ವೃತ್ತ, ಬನ್ನಿಮಂಟಪ ವೃತ್ತ, ಜೆಎಸ್‌ಎಸ್ ದಂತವೈದ್ಯಕೀಯ ಕಾಲೇಜು, ಮಣಿಪಾಲ್ ಜಂಕ್ಷನ್‌ವರೆಗಿನ ೫.೬೨ ಕಿಮೀ ಉದ್ದದ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಬಸವೇಶ್ವರ ವೃತ್ತದಿಂದ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನ, ನಂಜುಮಳಿಗೆ ವೃತ್ತ, ಸಿಲ್ಕ್ ಫ್ಯಾಕ್ಟರಿ ವೃತ್ತ, ಶ್ರೀರಾಂಪುರ, ಮಾನಂದವಾಡಿ ರಸ್ತೆಯನ್ನು ವೈಟ್ ಟಾಪಿಂಗ್ ಮಾಡುವ ೬.೪೦ ಕಿಮೀ ಉದ್ದದಲ್ಲಿ ಈಗ ೪.೯೯ ಕಿಮೀ ಮುಗಿಯುವ ಹಂತಕ್ಕೆ ಬಂದಿದೆ.

ದಸರಾ ಸಮೀಪಿಸಿದ್ದು, ಜನದಟ್ಟಣೆ ಉಂಟಾಗುವ ಕಾರಣ ಅಗ್ರಹಾರದಿಂದ ನಂಜುಮಳಿಗೆ ವೃತ್ತದವರೆಗೆ ಮಾತ್ರ ಅ.೨೫ರ ನಂತರ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ವೈಟ್‌ಟಾಪಿಂಗ್ ಕಾಮಗಾರಿ ಮುಗಿದಿರುವ ರಸ್ತೆಗಳನ್ನು ಅಧಿಕೃತವಾಗಿ ಮುಕ್ತಗೊಳಿಸಿಲ್ಲದಿದ್ದರೂ ಸಾರ್ವಜನಿಕರ ವಾಹನಗಳು ಓಡಾಡುತ್ತಿರುವುದನ್ನು ಕಾಣಬಹುದಾಗಿದೆ.

ಫುಟ್‌ಪಾತ್,ಚರಂಡಿ ಮುಕ್ತಾಯ: ಬಫ್ರ್ ವಲಯವನ್ನು ಹೊರತುಪಡಿಸಿ ಫುಟ್‌ಪಾತ್,ಚರಂಡಿ ಕಾಮಗಾರಿಯನ್ನು ಕೂಡ ಮುಗಿಸಲಾಗಿದೆ. ಮುಖ್ಯರಸ್ತೆಗಳಿಗೆ ಸೇರುವ ಅಡ್ಡ ರಸ್ತೆಗಳು, ಸಂಪರ್ಕ ರಸ್ತೆಗಳಿಗೆ ಮುಕ್ತಗೊಳಿಸಲಾಗುತ್ತದೆ. ಇದರಿಂದಾಗಿ ಹಲವು ತಿಂಗಳಿಂದ ಏಕಮುಖ ಸಂಚಾರ, ಬದಲಿ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವರಿಗೆ ಮುಕ್ತವಾಗಿ ಓಡಾಡಲು ಅವಕಾಶ ದೊರೆಯಲಿದೆ.

” ನಗರದ ೧೨ ರಸ್ತೆಗಳಲ್ಲಿ ಪ್ರಾರಂಭಿಸಿದ್ದ ವೈಟ್ ಟಾಪಿಂಗ್ ಕಾಮಗಾರಿಗಳಲ್ಲಿ ಮೂರು ರಸ್ತೆಗಳ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಅ.೫ರೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಹೊರಗಿನಿಂದ ವಾಹನಗಳು ಬರುವಂತಹ ಮಾನಂದವಾಡಿ ರಸ್ತೆ, ಮಣಿಪಾಲ್ ಜಂಕ್ಷನ್, ಬನ್ನಿಮಂಟಪದ ರಸ್ತೆ ಕಾಮಗಾರಿ ಮುಗಿಯುತ್ತಿರುವುದರಿಂದ ಜನರಿಗೆ ಅನುಕೂಲವಾಗಲಿದೆ. ದಸರಾ ಮುಗಿದ ಬಳಿಕ ಉಳಿದ ರಸ್ತೆಗಳ ಕಾಮಗಾರಿ ಆರಂಭಿಸುತ್ತೇವೆ.”

ಎಚ್.ಆರ್.ಪದ್ಮನಾಭ, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

7 mins ago

ಓದುಗರ ಪತ್ರ: ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ತಾತ್ಸಾರವೇಕೆ?

ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…

9 mins ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದತಿಗಿಂತ ‘ಶುದ್ಧೀಕರಣ’ ತುರ್ತು ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು…

10 mins ago

ಆರೋಗ್ಯಕರ ನಾಳೆಗಾಗಿ ಆಯುರ್ವೇದ – ಒಂದು ಆರೋಗ್ಯ, ಒಂದು ಭವಿಷ್ಯ

ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…

13 mins ago

ಡಾ.ಎಸ್.ಜೆ. ನಾಗಲೋಟಿಮಠ ಅವರ ಸ್ಛೂರ್ತಿದಾಯಕ ನಡವಳಿಕೆ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…

19 mins ago

ಯುವನಿಧಿ; ೨,೧೭೯ ಮಂದಿಗೆ ೬.೩೦ ಕೋಟಿ ರೂ. ನೆರವು

ನವೀನ್ ಡಿಸೋಜ ೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ  ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ…

24 mins ago