Andolana originals

ಈ ಬಾರಿ ಅಂಬಾರಿ ಹೊರುವ ಸಾರಥಿ ಯಾರು.?

ಚಿರಂಜೀವಿ ಸಿ.ಹುಲ್ಲಹಳ್ಳಿ

ಮಹೇಂದ್ರ ಆನೆ ಹೊರಬಿದ್ದ ಬಳಿಕ ಸ್ಪರ್ಧೆ ಜೋರು: ಪ್ರಶಾಂತ್‌, ಧನಂಜಯ, ಸುಗ್ರೀವ, ಏಕಲವ್ಯ ನಡುವೆ ಪೈಪೋಟಿ

ಭಾನುವಾರ (ಅ.೧೧ರಂದು)ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಗುವುದರೊಂದಿಗೆ ಜಂಬೂಸವಾರಿಗೆ ದಿನಗಣನೆ ಆರಂಭವಾಗಲಿದೆ. ಆದರೆ, ಗಜಪಡೆಯನ್ನು ಮುನ್ನಡೆಸುವ ಸಾರಥಿ ಯಾರು ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.

ಆರು ಬಾರಿ ಅಂಬಾರಿ ಹೊತ್ತು ನಾಡಿನ ಜನಮನಗೆದ್ದಿದ್ದ ಅಭಿಮನ್ಯು ವಯೋ ನಿವೃತ್ತಿಗೊಂಡಿರುವ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ತುಂಬುವ ಸಮರ್ಥ ಸಾರಥಿಯ ಹುಡುಕಾಟ ಇನ್ನೂ ನಿಂತಿಲ್ಲ. ಮಹೇಂದ್ರ ಅಂಬಾರಿ ಆನೆಯ ರೇಸ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಶಾಂತ, ಧನಂಜಯ, ಸುಗ್ರೀವ, ಏಕಲವ್ಯ ಆನೆಗಳ ಹೆಸರು ಚರ್ಚೆಯಲ್ಲಿದೆ. ಸದ್ಯ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆಗೆ ನಿತ್ಯ ತಾಲೀಮು ನಡೆಸಲಾಗುತ್ತಿದೆ. ತಾಲೀಮು, ಸಾರ್ವಜನಿಕರೊಂದಿಗಿನ ಆನೆಗಳ ಒಡನಾಟವನ್ನು ಗಮನಿಸಿ ಆಯ್ಕೆ ಮಾಡಲಾಗುತ್ತದೆ.

ಪ್ರಶಾಂತ: ಸುಮಾರು ೫೪ ವರ್ಷ ವಯಸ್ಸಿನ ಪ್ರಶಾಂತ ಆನೆ ೧೮ ದಸರಾಗಳಲ್ಲಿ ಭಾಗವಹಿಸಿದೆ. ಜಂಬೂ ಸವಾರಿಗೆ ಸಜ್ಜಾಗುತ್ತಿರುವ ಗಜಪಡೆಯ ಹಿರಿಯ ಆನೆ ಪ್ರಶಾಂತ ಮರದ ಅಂಬಾರಿಯನ್ನು ಹೊತ್ತು ೧.೪೦ ನಿಮಿಷದಲ್ಲಿ ರಾಜಬೀದಿಯಲ್ಲಿ ನಿರಾಯಾಸವಾಗಿ ಹೆಜ್ಜೆ ಹಾಕಿದೆ. ಮರದ ಅಂಬಾರಿ, ಗಾದಿ, ನಮ್ದಾ ಹಾಗೂ ಮರಳಿನ ಮೂಟೆ ಸೇರಿ ಒಟ್ಟು ೧,೦೦೦ ಕೆ.ಜಿ ಭಾರವನ್ನು ಹೊತ್ತು ಸಾಗಿದ್ದಾನೆ.

ಧನಂಜಯ ಕೂಡ ಶಕ್ತಿಯುತ: ದುಬಾರೆ ಶಿಬಿರದ ಸುಮಾರು ೪೫ ವರ್ಷದ ಧನಂಜಯ ೮ ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಬಾರಿ ತಾಲೀಮಿನಲ್ಲಿ ಮರದ ಅಂಬಾರಿಯನ್ನು ೧ ಗಂಟೆ ೧೫ ನಿಮಿಷದಲ್ಲಿ ಹೊತ್ತು ಸಾಗಿದೆ. ಧನಂಜಯನಿಗೆ ಸುಮಾರು ೮೦೦ ಕೆ.ಜಿ. ಭಾರ ಹೊರಿಸಲಾಗಿತ್ತು.

ಕೆಚ್ಚೆದೆಯ ಸುಗ್ರೀವ: ದುಬಾರೆ ಶಿಬಿರದ ೪೪ ವರ್ಷದ ಸುಗ್ರೀವ ಕಳೆದ ೫ ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಅನುಭವವುಳ್ಳ ಆನೆಯಾಗಿದೆ. ಮರದ ಅಂಬಾರಿ ತಾಲೀಮಿನಲ್ಲಿ ಪಾಲ್ಗೊಂಡಿರುವ ಈತ ೧ ಗಂಟೆ ೩೯ ನಿಮಿಷದಲ್ಲಿ ಅರಮನೆಯಿಂದ ಬನ್ನಿಮಂಟಪ ತಲುಪಿ ಸೈ ಎನಿಸಿಕೊಂಡಿದ್ದಾನೆ. ಈತನಿಗೆ ಮರದ ಅಂಬಾರಿ ಸೇರಿ ೭೦೦ ಕೆ.ಜಿ. ಭಾರ ಹೊರಿಸಲಾಗಿತ್ತು.

ಎಲ್ಲರ ನೆಚ್ಚಿನ ಏಕಲವ್ಯ: ಭೀಮನಕಟ್ಟೆ ಆನೆ ಶಿಬಿರದ ೪೧ ವರ್ಷದ ಏಕಲವ್ಯನಿಗೆ ಕೂಡ ಅಂಬಾರಿ ಹೊರುವ ತಾಲೀಮಿನ ಪ್ರಕ್ರಿಯೆ ನಡೆಸಲಾಗಿದೆ. ಈ ಆನೆಯು ೩ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಆತನು ಕೂಡ ಮರದ ಅಂಬಾರಿ, ಮರಳು ಮೂಟೆ ಸೇರಿದಂತೆ ೭೦೦ ಕೆ.ಜಿ. ತೂಕವನ್ನು ಹೊತ್ತು ೧ ಗಂಟೆ ೩೦ನಿಮಿಷಗಳಲ್ಲಿ ಬನ್ನಿಮಂಟಪ ತಲುಪಿ ಸೈ ಎನಿಸಿಕೊಂಡಿದ್ದಾನೆ.

” ಅಂಬಾರಿ ಹೊರುವ ಆನೆಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ತಾಲೀಮಿನ ಸಂದರ್ಭದಲ್ಲಿಪ್ರತಿಯೊಂದು ಆನೆಯ ನಡವಳಿಕೆ, ದೈಹಿಕ ಸಾಮರ್ಥ್ಯ, ಭಾರ ಹೊರುವ ಕ್ಷಮತೆ ಮತ್ತು ಜನಸಂದಣಿಯಲ್ಲಿ ಸಂಯಮದಿಂದ ಸಾಗುವ ಗುಣಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.”

-ರವಿಶಂಕರ್, ಸಿಎಫ್

 

 

ಆಂದೋಲನ ಡೆಸ್ಕ್

Recent Posts

ಮತ್ತೆ ಹುಯ್ಯುತ್ತಿರುವ ಪ್ರತಿಭಟನೆಯ ಸುರಿಮಳೆ

ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…

24 mins ago

ಕೆಚ್ಚೆದೆಯ ನೇಹಾ ಮತ್ತು ವಾತ್ಸಲ್ಯದ ಅಮ್ಮ

ಪಾತು ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ…

32 mins ago

ಪೆಟ್ರೋಲ್ ಬಂಕ್‌ನಲ್ಲಿ ನಿರ್ಮಾಣವಾದ ಮಿನಿ ಕೆರೆ!

ಮಂಜು ಕೋಟೆ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವ್ಯವಸ್ಥೆ ಎಂದು ಸಾರ್ವಜನಿಕರ ಆಕ್ರೋಶ  ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರ…

45 mins ago

ಜಿಪಂ, ತಾಪಂ ಕರಡು ಮೀಸಲಾತಿ ಪ್ರಕಟ; ಗರಿಗೆದರಿದ ರಾಜಕೀಯ

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಚುನಾವಣಾ ಕಾವು ತೀವ್ರ ಕೆ.ಆರ್.ನಗರ: ರಾಜ್ಯ ಸರ್ಕಾರವು ಜಿಪಂ, ತಾಪಂ ಕ್ಷೇತ್ರಗಳ…

51 mins ago

ಇಂದಿನಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭ

ನವೀನ್ ಡಿಸೋಜ ಮಡಿಕೇರಿ ದಸರಾಕ್ಕೆ ಕರಗಗಳೇ ಮುನ್ನುಡಿ ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ ಮಡಿಕೇರಿ: ಐತಿಹಾಸಿಕ ಮಡಿಕೇರಿ…

1 hour ago

ದಸರಾ ಸಂಭ್ರಮ ಶುರು

ಕೆ.ಬಿ.ರಮೇಶನಾಯಕ ಇಂದು ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ  ಕೊಪ್ಪಳದ ಗವಿಮಠ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ ವಿದುಷಿ ಡಾ.ಮೈಸೂರು ನಾಗಮಣಿ ಶ್ರೀನಾಥ್‌ಗೆ…

1 hour ago