Andolana originals

ಜಿಪಂ, ತಾಪಂ ಕರಡು ಮೀಸಲಾತಿ ಪ್ರಕಟ; ಗರಿಗೆದರಿದ ರಾಜಕೀಯ

ಭೇರ್ಯ ಮಹೇಶ್

ಅವಳಿ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಚುನಾವಣಾ ಕಾವು ತೀವ್ರ

ಕೆ.ಆರ್.ನಗರ: ರಾಜ್ಯ ಸರ್ಕಾರವು ಜಿಪಂ, ತಾಪಂ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಚುನಾವಣಾ ಕಾವು  ತೀವ್ರಗೊಂಡಿದೆ. ದೀರ್ಘಕಾಲದ ಬಳಿಕನಡೆಯುತ್ತಿರುವ ಈ ಚುನಾವಣೆ ಬಗ್ಗೆ ಹಳ್ಳಿಗಳಗಲ್ಲಿ-ಗಲ್ಲಿಗಳಲ್ಲಿ, ಅರಳಿ ಕಟ್ಟೆಗಳ ಮೇಲೆ ರಾಜಕೀಯ ಚರ್ಚೆಗಳು ಬಿರುಸಿನಿಂದ ನಡೆಯುತ್ತಿವೆ.

ಗ್ರಾಮೀಣ ಭಾಗದಲ್ಲಿ ಸದ್ಯ ಕಂಡುಬರುತ್ತಿರುವ ಪ್ರಮುಖ ಚುನಾವಣಾ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಆಕಾಂಕ್ಷಿಗಳು ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಸೇರಿದಂತೆ ಮುಖಂಡರೊಟ್ಟಿಗೆ ಚರ್ಚೆಗಿಳಿದಿದ್ದಾರೆ.

ಜಿಪಂ ೭ ಕ್ಷೇತ್ರಗಳ ವಿವರ: ಗಂಧನಹಳ್ಳಿ ಕ್ಷೇತ್ರ: ಸಾಮಾನ್ಯ, ತಿಪ್ಪೂರು ಕ್ಷೇತ್ರ: ಪರಿಶಿಷ್ಟ ಜಾತಿ ಮಹಿಳೆ(ಎಸ್.ಸಿ.), ಹೆಬ್ಬಾಳು ಕ್ಷೇತ್ರ: ಹಿಂದುಳಿದ ’ಬಿ’ ವರ್ಗ, ಭೇರ್ಯ ಕ್ಷೇತ್ರ: ಸಾಮಾನ್ಯ, ಮಿರ್ಲೆ ಕ್ಷೇತ್ರ: ಸಾಮಾನ್ಯ ಮಹಿಳೆ, ಸಾಲಿಗ್ರಾಮ ಕ್ಷೇತ್ರ: ಸಾಮಾನ್ಯ ಮಹಿಳೆ, ಹೊಸೂರು ಕ್ಷೇತ್ರ: ಪರಿಶಿಷ್ಟ ಜಾತಿ (ಎಸ್.ಸಿ.) ಮೀಸಲು ಕ್ಷೇತ್ರ.

ತಾಪಂ ಕ್ಷೇತ್ರಗಳ ವಿವರ: ಕೆ.ಆರ್.ನಗರ  ತಾಪಂ ೯ ಕ್ಷೇತ್ರಗಳು: ಹೊಸ ಅಗ್ರಹಾರ: ಸಾಮಾನ್ಯ, ಗಂಧನಹಳ್ಳಿ: ಸಾಮಾನ್ಯ ಮಹಿಳೆ, ಹಂಪಾಪುರ: ಪರಿಶಿಷ್ಟ ಪಂಗಡ ಮಹಿಳೆ (ಎಸ್.ಟಿ.), ತಿಪ್ಪೂರು: ಸಾಮಾನ್ಯ, ಲಾಳಂದೇವನಹಳ್ಳಿ: ಪರಿಶಿಷ್ಟ ಜಾತಿ ಮಹಿಳೆ(ಎಸ್.ಸಿ.), ಡೋರ್ನ ಹಳ್ಳಿ: ಹಿಂದುಳಿದ ಅ.ವರ್ಗ, ಹೆಬ್ಬಾಳು: ಸಾಮಾನ್ಯ, ಕೆಸ್ತೂರು: ಹಿಂದುಳಿದ ಎ ವರ್ಗ ಮಹಿಳೆ, ಬ್ಯಾಡರಹಳ್ಳಿ: ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟಗೊಂಡಿದೆ.

ಸಾಲಿಗ್ರಾಮ ತಾಪಂ ೧೩ ಕ್ಷೇತ್ರಗಳು: ಭೇರ್ಯ: ಪರಿಶಿಷ್ಟ ಪಂಗಡ ಮಹಿಳೆ(ಎಸ್.ಟಿ.), ತಂದ್ರೆ : ಸಾಮಾನ್ಯ ಮಹಿಳೆ, ಮೇಲೂರು: ಸಾಮಾನ್ಯ ಮಹಿಳೆ, ಮಿರ್ಲೆ: ಹಿಂದುಳಿದ ಬಿ.ವರ್ಗ, ಮುಂಡೂರು: ಸಾಮಾನ್ಯ, ಹರದನಹಳ್ಳಿ: ಹಿಂದುಳಿದ ಅ.ವರ್ಗ, ಸಾಲಿಗ್ರಾಮ: ಪರಿಶಿಷ್ಟ ಜಾತಿ ಮಹಿಳೆ(ಎಸ್.ಸಿ.), ಲಕ್ಷ್ಮೀಪುರ : ಸಾಮಾನ್ಯ, ಹನಸೋಗೆ: ಸಾಮಾನ್ಯ ಮಹಿಳೆ, ಚೆನ್ನಂಗೆರೆ: ಪರಿಶಿಷ್ಟ ಜಾತಿ (ಎಸ್.ಸಿ.), ಮಾಯಿಗೌಡನಹಳ್ಳಿ : ಹಿಂದುಳಿದ ಅ.ವರ್ಗ, ಹಳಿಯೂರು: ಸಾಮಾನ್ಯ, ಕುಪ್ಪೆ: ಸಾಮಾನ್ಯ. ಕ್ಷೇತ್ರ ಬದಲಾವಣೆ ಮತ್ತು ಲೆಕ್ಕಾಚಾರ: ಹೊಸಮೀಸಲಾತಿ ಪಟ್ಟಿಯಿಂದಾಗಿ ಹಲವು ಮುಖಂಡರ ಕ್ಷೇತ್ರಗಳು ಕೈತಪ್ಪಿವೆ. ಹೀಗಾಗಿ ಆಕಾಂಕ್ಷಿಗಳು ಪಕ್ಕದ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದು, ರಾಜಕೀಯ ಮುಖಂಡರು ಜಾತಿ ಮತ್ತು ಮತದಾರರ ಸಂಖ್ಯೆಯ ಆಧಾರದ ಮೇಲೆ ಹೊಸ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.

ಮಹಿಳಾ ಅಭ್ಯರ್ಥಿಗಳ ಹುಡುಕಾಟ: ೭ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ, ರಾಜಕೀಯ ಮುಖಂಡರು ತಮ್ಮ ಕುಟುಂಬದ ಮಹಿಳೆಯರನ್ನು (ಪತ್ನಿ, ಮಗಳು ಅಥವಾ ಸೊಸೆ) ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕರಡು ಪಟ್ಟಿ ಪ್ರಕಟವಾದ ಬೆನ್ನಲ್ಲೇ ಮಹಿಳಾ ಅಭ್ಯರ್ಥಿಗಳ ಪರವಾಗಿ ಅವರ ಪತಿ ಅಥವಾ ಕುಟುಂಬಸ್ಥರು ಪ್ರಚಾರದ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಬರೋಬ್ಬರಿ ೧೦ ವರ್ಷಗಳ ಸುದೀರ್ಘ ಅವಧಿಯ ನಂತರ ಚುನಾವಣೆಗಳು ನಡೆಯುತ್ತಿ ರುವುದರಿಂದ, ಹೊಸ ಮೀಸಲಾತಿ ಪಟ್ಟಿಯಲ್ಲಿ ತಮ್ಮ ಕ್ಷೇತ್ರಗಳು ಯಾವ ವರ್ಗಕ್ಕೆ ಲಭ್ಯವಾಗಿವೆ ಎಂಬುದನ್ನು ಖಚಿತಪಡಿಸಿಕೊಂಡ ಆಕಾಂಕ್ಷಿಗಳು, ಈಗಾಗಲೇ ಮನೆ-ಮನೆ ಭೇಟಿ, ಸಭೆ- ಸಮಾರಂಭಗಳು ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಮತದಾರರನ್ನು ಸೆಳೆಯಲು ತಂತ್ರಗಳನ್ನು ರೂಪಿಸುತ್ತಿದ್ದಾರೆ.

ನಾಯಕ ಸಮುದಾಯದವರ ಅಸಮಾಧಾನ:  ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ೭ ಜಿಪಂ ಕ್ಷೇತ್ರಗಳ ಮೀಸಲಾತಿ ಪ್ರಕಟಿಸಲಾಗಿದ್ದು, ಈ ಪೈಕಿ ಪರಿಶಿಷ್ಟ ಪಂಗಡ (ಎಸ್.ಟಿ.) ನಾಯಕ ಸಮುದಾಯಕ್ಕೆ ಒಂದು ಸ್ಥಾನವನ್ನು ನಿಗದಿಪಡಿಸಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಪ್ರಬಲವಾಗಿರುವ ನಾಯಕ ಸಮುದಾಯ ಮುಖಂಡರುಗಳಲ್ಲಿ ಮೀಸಲಾತಿ ಘೋಷಣೆ ಬಗ್ಗೆ ತೀವ್ರ ಅಸಮಾಧಾನ ಉಂಟಾಗಿದ್ದು, ನಾಯಕ ಸಮುದಾಯದ ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ನಾಯಕ ಸಮುದಾಯಕ್ಕೆ ಜಿಪಂ ಕ್ಷೇತ್ರ ಮೀಸಲು ಮಾಡದಿದ್ದರೆ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಕೆಲ ಮುಖಂಡರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ ೧೯ರವರೆಗೆ ಕಾಲಾವಕಾಶ ಇರುವುದರಿಂದ, ಮೀಸಲಾತಿ ಬದಲಾವಣೆಗಾಗಿ ಕಾನೂನು ಮತ್ತು ರಾಜಕೀಯ ಹೋರಾಟಗಳೂ ತೆರೆಮರೆಯಲ್ಲಿ ನಡೆಯುತ್ತಿವೆ ಎನ್ನಲಾಗಿದೆ.

 

 

ಆಂದೋಲನ ಡೆಸ್ಕ್

Recent Posts

ಮತ್ತೆ ಹುಯ್ಯುತ್ತಿರುವ ಪ್ರತಿಭಟನೆಯ ಸುರಿಮಳೆ

ಕೆ.ನೀಲಾ ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು.…

24 mins ago

ಕೆಚ್ಚೆದೆಯ ನೇಹಾ ಮತ್ತು ವಾತ್ಸಲ್ಯದ ಅಮ್ಮ

ಪಾತು ಎಲ್ಲಾ ಭಿನ್ನಾಭಿಪ್ರಾಯಗಳಾಚೆಯೂ ಒಬ್ಬರ ಬದುಕಿನಲ್ಲಿ ಇನ್ನೊಬ್ಬರು ಆಸರೆಯಾಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈ ಘಟನೆ ಹಲವು ಕಾಲ ಜನಮಾನಸದಲ್ಲಿ ನಿಲ್ಲುತ್ತದೆ…

32 mins ago

ಪೆಟ್ರೋಲ್ ಬಂಕ್‌ನಲ್ಲಿ ನಿರ್ಮಾಣವಾದ ಮಿನಿ ಕೆರೆ!

ಮಂಜು ಕೋಟೆ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವ್ಯವಸ್ಥೆ ಎಂದು ಸಾರ್ವಜನಿಕರ ಆಕ್ರೋಶ  ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರ…

45 mins ago

ಈ ಬಾರಿ ಅಂಬಾರಿ ಹೊರುವ ಸಾರಥಿ ಯಾರು.?

ಚಿರಂಜೀವಿ ಸಿ.ಹುಲ್ಲಹಳ್ಳಿ ಮಹೇಂದ್ರ ಆನೆ ಹೊರಬಿದ್ದ ಬಳಿಕ ಸ್ಪರ್ಧೆ ಜೋರು: ಪ್ರಶಾಂತ್‌, ಧನಂಜಯ, ಸುಗ್ರೀವ, ಏಕಲವ್ಯ ನಡುವೆ ಪೈಪೋಟಿ ಭಾನುವಾರ…

57 mins ago

ಇಂದಿನಿಂದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಆರಂಭ

ನವೀನ್ ಡಿಸೋಜ ಮಡಿಕೇರಿ ದಸರಾಕ್ಕೆ ಕರಗಗಳೇ ಮುನ್ನುಡಿ ವಿಜಯದಶಮಿವರೆಗೆ ಮನೆಮನೆಗೆ ತೆರಳಿ ಆಶೀರ್ವಚನ ನೀಡುವ ಪರಂಪರೆ ಮಡಿಕೇರಿ: ಐತಿಹಾಸಿಕ ಮಡಿಕೇರಿ…

1 hour ago

ದಸರಾ ಸಂಭ್ರಮ ಶುರು

ಕೆ.ಬಿ.ರಮೇಶನಾಯಕ ಇಂದು ನಾಡಹಬ್ಬಕ್ಕೆ ವಿಧ್ಯುಕ್ತ ಚಾಲನೆ  ಕೊಪ್ಪಳದ ಗವಿಮಠ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟನೆ ವಿದುಷಿ ಡಾ.ಮೈಸೂರು ನಾಗಮಣಿ ಶ್ರೀನಾಥ್‌ಗೆ…

1 hour ago