Andolana originals

ಪ್ರಕೃತಿ ಜತೆ ಸಹಬಾಳ್ವೆಯ ಸಂದೇಶ ಸಾರಿದ ತಿಮ್ಮಕ್ಕ

ಪರಿಸರ ರಮೇಶ್, ಶ್ರೀರಂಗಪಟ್ಟಣ

ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಹೆಸರು 

ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಪ್ರಖ್ಯಾತ ಪರಿಸರ ಪರಿಚಾರಕಿಯಾಗಿದ್ದು, ಮಕ್ಕಳಿಲ್ಲ ಎಂಬ ನೋವನ್ನು ಮರೆಯಲು ದಂಪತಿ, ೩೮೫ಕ್ಕೂ ಹೆಚ್ಚು ಆಲದ ಕೊನೆ (ಕೊಂಬೆ)ಗಳನ್ನು ನೆಟ್ಟು ನೀರುಣಿಸಿ ಬೆಳೆಸಿದರು. ತಿಮ್ಮಕ್ಕ – ಸಾಲುಮರದ ತಿಮ್ಮಕ್ಕ ಆಗಿ ಪ್ರಸಿದ್ಧಿ ಪಡೆದಿದ್ದು ಈಗ ಇತಿಹಾಸ.

ತಮ್ಮ ೪೦ನೇ ವಯಸ್ಸಿನಲ್ಲಿ ಗಂಡನೊಡನೆ ಸೇರಿ ಮರಗಳನ್ನು ಬೆಳೆಸಲು ಪ್ರಾರಂಭಿಸಿದ ತಿಮ್ಮಕ್ಕ, ಪತಿಯ ಅಕಾಲಿಕ ಮರಣದ ನಂತರವೂ ಛಲ ಬಿಡದೆ ಗಿಡಗಳನ್ನು ಪೋಷಿಸಿ ‘ವೃಕ್ಷಮಾತೆ’ ಎಂದೇ ಪ್ರಖ್ಯಾತಿ ಪಡೆದವರು.

ಸಾಲುಮರದ ತಿಮ್ಮಕ್ಕ ಎಂಬುದು ಕರ್ನಾಟಕದ ಅರಣ್ಯ ಸಂರಕ್ಷಣಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು. ಇವರು ತಮ್ಮ ಅಸಾಧಾರಣ ಪರಿಸರ ಪ್ರೀತಿ ಮತ್ತು ಸೇವೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅನಕ್ಷರಸ್ಥರಾಗಿದ್ದರೂ, ತಮ್ಮ ಬದುಕು ಮತ್ತು ಸಾಧನೆಯ ಮೂಲಕ ಪ್ರಕೃತಿಯ ಮಹತ್ವವನ್ನು ಸಾರಿದ್ದಾರೆ.

ಮರಗಳ ಮಹಾದೇವತೆ: ತಿಮ್ಮಕ್ಕ ಅವರ ಸೇವೆಯು ಕೇವಲ ಮರಗಳನ್ನು ನೆಡುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಪಕ್ಷಿಗಳಿಗೆ ಆಶ್ರಯ ನೀಡುವ ಮತ್ತು ಜನರಿಗೆ ಗಾಳಿ – ನೆರಳು ನೀಡುವ ಮಹತ್ವದ ಉದ್ದೇಶವೂ ಅವರಲ್ಲಿತ್ತು.

ಮಾತೃಸ್ಥಾನ: ತಿಮ್ಮಕ್ಕ ಅವರು ಬೆಳೆಸಿದ ಪ್ರತಿ ಸಸಿಯನ್ನೂ ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪ್ರಾರಂಭದಲ್ಲಿ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ಹೊತ್ತೊಯ್ದು ಹಾಕಿದ್ದಾರೆ. ಮೇಕೆ – ಕುರಿಗಳ ದಾಳಿಯನ್ನು ತಪ್ಪಿಸಿ ಬಹಳ ಜತನದಿಂದ ಕಾಪಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಿಮ್ಮಕ್ಕ ಅವರನ್ನು ಭೇಟಿ ಮಾಡಿ ಗೌರವಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರಸರಳತೆ, ದೃಢಸಂಕಲ್ಪ ಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ. ಪ್ರಸ್ತುತ ಇಂದು ಇವರ ಮಾದರಿ ಕೆಲಸವನ್ನು ನೋಡಿ ಸ್ಛೂರ್ತಿ ಪಡೆದು ನೂರಾರು ಜನ ಗಿಡ ಬೆಳೆಸುತ್ತಿದ್ದಾರೆ. ತಿಮ್ಮಕ್ಕ ಅವರ ಜೀವಿತಾವಧಿಯು ಪರಿಸರ ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಒಂದು ಮಹಾಕಾವ್ಯವಾಗಿದೆ. ಸಮಾಜ ಸೇವೆ ಪರಿಸರ ಸೇವೆ ಮಾಡುವವರನ್ನು ಅಪಶಕುನದ ಬೆಕ್ಕಿನ ರೀತಿ ನೋಡುವ ಇಂದಿನ ಸಮಾಜದಲ್ಲಿ ತಿಮ್ಮಕ್ಕ ಅವರ ಬದುಕು ಹಾಗೂ ಸೇವೆ ಮುಂದಿನ ಪೀಳಿಗೆಗೆ ಎಂದಿಗೂ ಹಸಿರಾದ ದಾರಿ ದೀಪವಾಗಿರುತ್ತದೆ.

” ಸಾಲುಮರದ ತಿಮ್ಮಕ್ಕ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಜೊತೆ ಸಹಬಾಳ್ವೆಯ ಮಹತ್ವವನ್ನು ಸಾರಿದ್ದಾರೆ. ಇವರ ಸರಳತೆ, ದೃಢಸಂಕಲ್ಪಮತ್ತು ಸೇವಾ ಮನೋಭಾವವು ಸಮಾಜದ ಎಲ್ಲರಿಗೂ ಸ್ಛೂರ್ತಿಯಾಗಿದೆ.”

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ: ಎಂಎಲ್‌ಸಿ ರಾಜೇಂದ್ರ ರಾಜಣ್ಣ

ಮೈಸೂರು: ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಎಂಎಲ್‌ಸಿ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಹೇಳಿದ್ದಾರೆ.…

45 mins ago

ಧರ್ಮಸ್ಥಳ ಬುರುಡೆ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಸಿಕ್ಕಿದ್ದ 7 ಅಸ್ಥಿಪಂಜರ ಎಫ್‌ಎಸ್‌ಎಲ್‌ಗೆ ರವಾನೆ

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ಬಂಗ್ಲೆಗುಡ್ಡದಲ್ಲಿ ಸಿಕ್ಕ 7 ಅಸ್ಥಿಪಂಜರಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ.…

1 hour ago

ಕೇರಳ ವಿಧಾನಸಭೆ ಚುನಾವಣೆ: ಶೋಭಾ ಕರಂದ್ಲಾಜೆಗೆ ಮಹತ್ವದ ಜವಾಬ್ದಾರಿ

ನವದೆಹಲಿ: ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ನಿತಿನ್‌ ನಬಿನ್‌ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿದ್ದಾರೆ.…

1 hour ago

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ ಘೋಷಣೆ

ಕೇಪ್‌ ಕೆನವೆರೆಲ್:‌ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್‌ ನಿವೃತ್ತರಾಗಿದ್ದಾರೆ.…

2 hours ago

ಹನೂರು| ಪಾದಯಾತ್ರೆ ಮಾಡುವ ವೇಳೆ ಚಿರತೆ ದಾಳಿ: ವ್ಯಕ್ತಿ ಸಾವು

ಮಹಾದೇಶ್‌ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

2 hours ago

ತೆಂಗಿನ ಮರದಿಂದ ಬಿದ್ದು ನರಳಾಡಿದ ಯುವಕನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಸ್ನೇಹಿತರು

ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…

2 hours ago