ಎಸ್.ಎಸ್.ಭಟ್
ಅಧಿಕಾರಿಗಳಿಗೆ ಚಳಿ ಬಿಡಿಸಿದ ಗ್ರಾಮಸ್ಥರು; ಮಾರ್ಗ ಬದಲಾದರೆ ಜಮೀನಿಗೆ ನೀರಿನ ಕೊರತೆಯ ಆತಂಕ
ನಂಜನಗೂಡು: ರೈತರ ಜಮೀನಿಗೆ ನೀರು ಹರಿಯಲೆಂದು ಸರ್ಕಾರ ನಾಲೆಗಳನ್ನು ನಿರ್ಮಿಸಿದೆ. ಅದೇ ಸರ್ಕಾರದ ಅಧಿಕಾರಿಗಳು ಖಾಸಗಿ ಬಡಾವಣೆಯ ನಿರ್ಮಾಣದಾರರ ಆಮಿಷಕ್ಕೆ ಒಳಗಾಗಿ ಜಮೀನಿನ ಹಿತ ಮರೆತು ನಾಲೆಯ ಪಥವನ್ನೇ ಬದಲಾಯಿಸಲು ಹೊರಟಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು-ಹುಲ್ಲಹಳ್ಳಿ ರಸ್ತೆಯ ದೇಬೂರಿನಲ್ಲಿ ಹೊಸ ಬಡಾವಣೆ ನಿರ್ಮಾಣವಾಗುತ್ತಿದ್ದು, ಆ ಬಡಾವಣೆಯ ಅನುಕೂಲಕ್ಕಾಗಿ ೪೦ ವರ್ಷಗಳ ಹಿಂದೆ ನಿರ್ಮಿಸಿದ್ದ ಹಳೆಯ ನಾಲೆಯನ್ನು ಈಗ ಮುಚ್ಚಿ, ಅದಕ್ಕೆ ಬದಲಿಯಾಗಿ ಚಿಕ್ಕ ಕೊಳವೆ ಹಾಕುವ ಕಾಮಗಾರಿ ಭರದಿಂದ ನಡೆಯುತ್ತಿದೆ.
ನಾಲೆಯ ಮಾರ್ಗ ಬದಲಾದರೆ ರೈತರ ಜಮೀನಿಗೆ ನೀರಿನ ಆತಂಕ ಎದುರಾಗಲಿದೆ. ಅದನ್ನು ತಡೆಯಿರಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದರೂ ಪ್ರಯೋಜನವಾಗದಿದ್ದಾಗ ದೇಬೂರಿನ ಜನತೆ ತಹಸಿಲ್ದಾರರಿಗೆ ಈ ಕುರಿತು ದೂರು ನೀಡಿದ್ದಾರೆ. ನಾಲೆಯ ಪಥದ ಬದಲಾವಣೆಯಿಂದ ಆಗಬಹುದಾದ ಸಂಕಷ್ಟಗಳ ಬಗ್ಗೆ ಗ್ರಾಮಸ್ಥರು ತಹಸಿಲ್ದಾರ್ ಅವರಿಗೆ ವಿವರಿಸಿದರು.
ದೂರು ಆಲಿಸಿದ ತಹಸಿಲ್ದಾರ್ ಶಿವಕುಮಾರ್, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಸಮಸ್ಯೆ ಕುರಿತಂತೆ ಕಂದಾಯ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಂಟಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಮಧ್ಯೆ ನೀರಾವರಿ ಅಧಿಕಾರಿಗಳ ಅಂತರಂಗದ ಬೆಂಬಲದೊಂದಿಗೆ ಬಡಾವಣೆಯ ಮಾಲೀಕರು ಹಳೆಯ ನಾಲೆಯನ್ನು ಮುಚ್ಚಿ ಬದಲಿ ಮಾರ್ಗಕ್ಕೆ ಕೊಳವೆ ಜೋಡಿಸುವ ಕಾಮಗಾರಿ ಆರಂಭಿಸಿದ ಘಟನೆಯೂ ನಡೆದಿದೆ.
ಸೋಮವಾರ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಕಬಿನಿ ನಾಲಾ ಇಂಜಿನಿಯರ್ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡ ದೇಬೂರು ಗ್ರಾಮಸ್ಥರು, ಕೋಟ್ಯಂತರ ರೂ. ಮೌಲ್ಯದ ನಾಲಾ ಮಣ್ಣನ್ನು ಖಾಸಗಿ ರೆಸಾರ್ಟ್ ನಿರ್ಮಿಸಲು ಅಕ್ರಮವಾಗಿ ಸಾಗಿಸಿದ್ದೀರಿ. ಈಗ ಖಾಸಗಿ ಬಡಾವಣೆಯ ೪ ದಶಕಗಳ ಹಿಂದಿನ ನಾಲೆಯನ್ನೇ ಮುಚ್ಚುತ್ತಿದ್ದೀರಿ. ನೀವಿರುವುದು ಸರ್ಕಾರದ ಆಸ್ತಿ ಉಳಿಸಲೋ ಅಥವಾ ಅಕ್ರಮ ಹಣ ದೋಚಲೋ ಎಂದು ತರಾಟೆಗೆ ತೆಗೆದುಕೊಂಡರು.
ನಾಲೆ ಮುಚ್ಚುವ ಅಥವಾ ಬದಲಿಸುವ ಅಧಿಕಾರ ಯಾರಿಗಿದೆ?: ಇದರಿಂದಾಗಿ ಜಮೀನಿಗೆ ನೀರು ಹರಿಯದೆ ಆಗಬಹುದಾದ ನಷ್ಟಕ್ಕೆ ಯಾರು ಹೊಣೆ? ಯಾವ ಕಾರಣಕ್ಕೆ ನಾಲೆಯ ಪಥ ಬದಲಾಗುತ್ತಿದೆ ಎಂಬ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದ ನೀರಾವರಿ ನಿಗಮದ ಇಂಜಿನಿಯರ್ ದರ್ಶನ್ ಕಕ್ಕಾ ಬಿಕ್ಕಿಯಾಗಿ ವಾಪಸಾದರು.
” ನೀರಾವರಿ ನಾಲೆ ಸರ್ಕಾರಿ ಆಸ್ತಿ. ಅದನ್ನು ಮುಚ್ಚುವುದು ಕ್ರಿಮಿನಲ್ ಅಪರಾಧವಾಗಿದ್ದು, ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.”
– ಶಿವಕುಮಾರ್ ಕ್ಯಾಸನೂರ, ತಹಸಿಲ್ದಾರ್
ಮಂಡ್ಯ: ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಬಿ ಜೀ ರಾಮ್…
ಮಂಡ್ಯ: ಸಿರಿಧಾನ್ಯಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ…
ಕೊಡಗು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಕೊಡಗಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಇನ ಡೋರ್‌ನಲ್ಲಿ ಮಾತ್ರ ಹೆಚ್ಚಿನ ಸೌಂಡ್ ಬಳಸಲು ಅವಕಾಶವಿದೆ.…
ಬೆಂಗಳೂರು: ಅಶ್ಲೀಲ ಕಮೆಂಟ್ ಬಗ್ಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಸೀಮಂತ್…
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಕೋಗಿಲು ಲೇಟ್‍ನ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರು: ನನ್ನ ವಿರುದ್ಧ 17 ಕೇಸ್ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…