Andolana originals

ಹರಾಜಾಗಿದ್ದ ನಿವೇಶನ ಮತ್ತೊಬ್ಬರಿಗೆ ಮಂಜೂರು

ಕೆ. ಬಿ. ರಮೇಶನಾಯಕ
ಮೈಸೂರು: ೫೦:೫೦ ಅನುಪಾತದಡಿ ನಿವೇಶನ ಹಂಚಿಕೆ ಹಗರಣದಿಂದ ದೊಡ್ಡ ಸದ್ದು ಮಾಡುತ್ತಿ ರುವ ಮುಡಾದಲ್ಲಿ ಒಂದಿಲ್ಲೊಂದು ಅಕ್ರಮ ಹೊರ ಬರುತ್ತಲೇ ಇದ್ದು, ಇ-ಹರಾಜಿನಲ್ಲಿ ಖರೀದಿಸಿದ್ದ ಮುಡಾ ಕ್ರಯಪತ್ರ ಮಾಡಿಕೊಟ್ಟಿ ದ್ದರೂ, ಮತ್ತೊಬ್ಬರಿಗೆ ಅದನ್ನೇ ಬದಲಿ ನಿವೇಶನ ವನ್ನಾಗಿಯೂ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮುಡಾ ಅಧಿಕಾರಿಗಳ ಕೈ ಚಳಕದಿಂದಾಗಿ ಇಂತಹದೊಂದು ಅಕ್ರಮ ನಡೆದಿದ್ದು, ಒಂದೇ ನಿವೇಶನಕ್ಕಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸಿದ್ದ ಮಾಲೀಕ ಹಾಗೂ ಬದಲಿ ನಿವೇಶನ ವನ್ನಾಗಿಯೂ ಪಡೆದುಕೊಂಡಿರುವ ನಿವೇಶನ ದಾರರು ಹೋರಾಟ ಮಾಡುವಂತಾಗಿದೆ.

ನಗರದ ದಟ್ಟಗಳ್ಳಿಯ ನಿವಾಸಿ ಟಿ. ಪಿ. ಸುಹಾಸ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಽಕಾರವು ನಿರ್ಮಿಸಿರುವ ಲಲಿತಾದ್ರಿಪುರ (ದಕ್ಷಿಣ) ಬಡಾವಣೆಯಲ್ಲಿ ಸಂಖ್ಯೆ ೧೨೮೦ರ ನಿವೇಶನವನ್ನು ೨೦೨೨ರ ಮಾರ್ಚ್ ೧೮ರಂದು ಮುಡಾ ಇ-ಹರಾಜಿ ನಲ್ಲಿ ಭಾಗವಹಿಸಿ ಖರೀದಿಸಿದ್ದರು.

ನಂತರ, ಮುಡಾಕ್ಕೆ ನಿವೇಶನದ ಮೊತ್ತ ೮೨. ೧೭ ಲಕ್ಷ ರೂ. ಪಾವತಿಸಿದ ಮೇಲೆ ೨೦೨೨ ಡಿ. ೨೬ ರಂದು ಕ್ರಯಪತ್ರ ಮಾಡಲಾಗಿದೆ. ಆಯುಕ್ತರು, ವಿಶೇಷ ತಹಸಿಲ್ದಾರ್ ಕ್ರಯಪತ್ರಕ್ಕೆ ಸಹಿ ಮಾಡಿದ ನಂತರ ನಿವೇಶನ ಖಾತಾ, ಕಂದಾಯ ಪತ್ರ ಪಡೆದುಕೊಂಡಿದ್ದಾರೆ.

ನಂತರ, ಸುಹಾಸ್ ನಿವೇಶನದ ದಾಖಲೆಗಳನ್ನು ಹಾಜರುಪಡಿಸಿ ಬ್ಯಾಂಕಿನಲ್ಲಿ ಸಾಲವನ್ನೂ ಪಡೆದಿ ದ್ದಾರೆ. ಈ ವೇಳೆ ಉದ್ಯೋಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ವಾಪಸ್ ಮೈಸೂರಿಗೆ ಬಂದು ನಿವೇಶನ ವನ್ನು ಶುಚಿಗೊಳಿಸಿ ಮನೆ ಕಟ್ಟುವ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದಾಗಲೇ ಅವರಿಗೆ ಅಚ್ಚರಿ ಕಾದಿತ್ತು. ಇದೇ ಸಂಖ್ಯೆಯ ನಿವೇಶನವನ್ನು ಮುಡಾ ಅಽಕಾರಿಗಳು ಡಾ. ಕುಮಾರ್ ಎಂಬವರಿಗೆ ಬದಲಿ ನಿವೇಶನವ ನ್ನಾಗಿ ಮಂಜೂರು ಮಾಡಿದ್ದಾರೆ.

ಡಾ. ಕುಮಾರ್ ಅವರಿಗೆ ಬೇರೆ ಜಾಗದಲ್ಲಿ ಬದಲಿ ನಿವೇಶನ ಮಂಜೂರು ಮಾಡಿಕೊಡ ಬೇಕಾದ ಅಧಿಕಾರಿಗಳು ೨೦೨೨ರಲ್ಲಿ ಇ-ಹರಾಜಿ ನಲ್ಲಿ ಮಾರಾಟ ಮಾಡಲಾಗಿರುವ ನಿವೇಶನ ಎಂಬುದನ್ನು ಪರಿಶೀಲಿಸದೆ ಕಣ್ಮುಚ್ಚಿ ಕೊಂಡು ೨೦೨೩ ಜೂನ್ ನಲ್ಲಿ ಬದಲಿ ನಿವೇಶನವನ್ನಾಗಿ ನೀಡಿರುವುದರಿಂದ ಈಗ ಇಬ್ಬರೂ ಸಮಸ್ಯೆ ಎದುರಿಸುವಂತಾಗಿದೆ. ಇ-ಹರಾಜಿನಲ್ಲಿ ಖರೀದಿಸಿರುವ ನಿವೇಶನವನ್ನು ತಮಗೆ ಬದಲಿ ನಿವೇಶನವಾಗಿ ಮಂಜೂರಾತಿ ಮಾಡಿಕೊಡಲಾಗಿದ್ದು, ಬೇರೆ ನಿವೇಶನ ಅಲಾಟ್ ಮೆಂಟ್ ಮಾಡಿಸುವಂತೆ ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಈ ವಿಚಾರಣೆಯು ನ್ಯಾಯಾಲಯದಲ್ಲಿ ಇದೆ.

ಬ್ಯಾಂಕಿಗೆ ೧೩ ಲಕ್ಷ ರೂ. ಬಡ್ಡಿ: ಇ-ಹರಾಜಿನಲ್ಲಿ ಖರೀದಿ ಮಾಡಲು ೮೨ ಲಕ್ಷ ರೂಪಾಯಿ ಪಾವತಿಸಿರುವ ಟಿ. ಪಿ. ಸುಹಾಸ್ ಅವರು ಎಚ್‌ಡಿಎ-ಸಿ ಬ್ಯಾಂಕಿಗೆ ನಿವೇಶನದ ದಾಖಲೆಗಳನ್ನು ಸಲ್ಲಿಸಿ ಸಾಲ ಪಡೆದುಕೊಂಡಿದ್ದಾರೆ. ಬ್ಯಾಂಕ್ ಸಾಲಕ್ಕೆ ಎರಡು ವರ್ಷಗಳಿಂದ ೧೩ ಲಕ್ಷ ರೂಪಾಯಿ ಬಡ್ಡಿ ಕಟ್ಟಿರುವ ಮಾಲೀಕರಿಗೆ ನಿವೇಶನದ ಗೊಂದಲ ದೊಡ್ಡ ಆತಂಕವನ್ನುಂಟು ಮಾಡಿ ಕೊಟ್ಟಿದೆ. ಡಾ. ಕುಮಾರ್ ಅವರು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ತಮಗೆ ಕ್ರಯಪತ್ರ ಮಾಡಿಕೊಟ್ಟಿದ್ದರೂ ಮನೆ ಕಟ್ಟಿಸಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ.

 

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

9 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

12 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

12 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

12 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

13 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

13 hours ago