Andolana originals

ಕಬಿನಿ ಹಿನ್ನೀರು ವ್ಯಾಪ್ತಿಯಲ್ಲಿ ಮನೆಗಳ ಮುಳುಗಡೆ

ಎಡೆಬಿಡದೆ ಸುರಿಯುತ್ತಿರುವ ಮಳೆ, ನದಿ ಪಾತ್ರದ ಜನರಿಗೆ ಕಾಳಜಿ ಕೇಂದ್ರ

     ಮಂಜು ಕೋಟೆ

ಎಚ್.ಡಿ.ಕೋಟೆ: ಕೇರಳದ ಗಡಿಯಲ್ಲಿ ಮತ್ತು ತಾಲ್ಲೂಕಿನಲ್ಲಿ ಭಾರಿ ಮಳೆಯ ಆರ್ಭಟ ದಿಂದ ಕಬಿನಿ ಜಲಾಶಯದ ಹಿನ್ನೀರಿನ ಮತ್ತು ನದಿಯಿಂದ ಮದ್ದೂರು ವ್ಯಾಪ್ತಿಯ ಅನೇಕ ಮನೆಗಳು, ಸೇತುವೆಗಳು, ಮುಳುಗಡೆ ಗೊಂಡು ಜನಸಾಮಾನ್ಯರು ಕಂಗಲಾಗಿದ್ದಾರೆ.

ಒಂದು ವಾರದಿಂದ ಸುರಿಯುತ್ತಿದ್ದ ಮಳೆಗಿಂತ ಬುಧವಾರ ಮತ್ತು ಗುರುವಾರ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ಕಬಿನಿ ಜಲಾ ಶಯಕ್ಕೆ ಒಳಹರಿವಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿರುವುದರಿಂದ ಕಬಿನಿ ಜಲಾಶಯದ ಹಿನ್ನೀರು ಪ್ರದೇಶ ವ್ಯಾಪ್ತಿಯಲ್ಲಿ ರುವ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯ ಮತ್ತೂರು, ಆನೆಮಾಳ, ತಿಮ್ಮನಹೊಸಳ್ಳಿ ಸೇರಿದಂತೆ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಸುಮಾರು 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಹಿನ್ನೀರು ವ್ಯಾಪ್ತಿಯಲ್ಲಿ ನದಿಯಿಂದ 70,000 ಕ್ಯೂಸೆಕ್ಸ್ ನೀರು ಹೊರ ಹೋಗು ತಿರುವುದರಿಂದ ಜಲಾಶಯದ ಮುಂಭಾ ಗದ ವ್ಯಾಪ್ತಿಯಲ್ಲಿರುವ ಮಾದಾ ಪುರ ಮತ್ತು ಹೊಂಬರಗಳಿ ಸಮೀಪದ ಕಬಿನಿ ಸೇತುವೆಗಳು ಮುಳುಗಡೆಗೊಂಡಿವೆ.

ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿ ಯಲ್ಲಿ ಜಲಾ ವೃತಗೊಂಡಿರುವ ಗ್ರಾಮಗಳಿಗೆ ತಹಸಿಲ್ದಾ‌ ಶ್ರೀನಿವಾಸ್‌ ಅವರ ಜೊತೆಗೂಡಿ ಅಧಿಕಾರಿ ಗಳ ತಂಡ ಗುರುವಾರ ಭೇಟಿ ನೀಡಿ ಜನರು ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಈ ಭಾಗದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವ ಜನಿಕರು ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕು, ಯಾರು ನದಿಯ ಬಳಿ ಹೋಗ ಬಾರದೆಂದು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣ ಅಧಿಕಾರಿ ಮಹೇಶ್, ಕಂದಾಯ ಅಧಿಕಾರಿ ಗಳಾದ ಯೋಗೇಂದ್ರಕುಮಾ‌ ಮುಳಗಾವಿ, ಗೌಸ್ ಮಹಮದ್‌ ಉಪಸ್ಥಿತರಿದ್ದರು.

ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, ಆದಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ನದಿ ಭಾಗದ ಅನೇಕ ಸೇತುವೆಗಳು ಮುಳುಗಡೆಗೊಂಡಿವೆ. ಹಿನ್ನೀರಿನ ವ್ಯಾಪ್ತಿಯಲ್ಲಿ ಅನೇಕ ಮನೆಗಳು ಮುಳುಗಡೆಗೊಂಡಿದ್ದು, ಸಾರ್ವಜನಿಕರು ನದಿಯ ಬಳಿ ಹೋಗಬಾರದು, ಸುರಕ್ಷಿತವಾದ ಸ್ಥಳಕ್ಕೆ ತೆರಳಬೇಕು. ಯಾವ ಕ್ಷಣದಲ್ಲಾದರೂ ಮತ್ತಷ್ಟು ನೀರು ಬರುವ ಸಾಧ್ಯತೆಗಳಿದೆ.
-ಚಂದ್ರಶೇಖರ್, ಇಇ, ಕಬಿನಿ ಜಲಾಶಯ

ಎಚ್.ಡಿ.ಕೋಟೆ ತಾಲ್ಲೂಕಿನ ಗಡಿಭಾಗದಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಜಲಾಶಯದ ಹಿನ್ನೀರಿನ ಭಾಗದಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ. ಅಲ್ಲಿಗೆ ಈಗಾಗಲೇ ಭೇಟಿ ನೀಡಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಹೋಗುವಂತೆ ತಿಳಿಸಲಾಗಿದೆ. ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿದೆ.

-ಶ್ರೀನಿವಾಸ್‌, ತಹಸಿಲ್ದಾ‌ರ್

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

6 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

7 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

7 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

8 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

8 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

12 hours ago