Andolana originals

ಕೆಟ್ಟುನಿಂತ ಬೀದಿ ದೀಪಗಳು ; ಕಗ್ಗತ್ತಲಲ್ಲಿ ರಸ್ತೆಗಳು

ಪ್ರಶಾಂತ್‌ ಎಸ್.‌

ಮೈಸೂರು : ಅಪಘಾತ,ಅನಾಹುತ ಸಂಭವಿಸದಿರಲಿ ಮತ್ತು ನಾಗರಿಕರ ಸಂಚಾರಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ರಾತ್ರಿ ವೇಳೆ ಉರಿಯುವಂತೆ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ನಾಚನಹಳ್ಳಿ ಪಾಳ್ಯದ ಸಮೀಪವಿರುವ ಟೋಲ್ ಗೇಟ್, ಶ್ರೀರಾಂಪುರ, ಶಿವಪುರ, ದೇವಯ್ಯ ನಹುಂಡಿ ರಸ್ತೆಗಳಲ್ಲಿ ವಿದ್ಯುತ್ ಕಂಬಗಳು ಇದ್ದರೂ ವಿದ್ಯುತ್ ಮಾತ್ರ ಇರುವುದಿಲ್ಲ. ಆಗಾಗೆ ಬೀದಿ ದೀಪಗಳು ಕೆಟ್ಟು ಹೋಗಿ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಜತೆಗೆ ರಾತ್ರಿ ವೇಳೆ ಸಂಚರಿಸಲು ಜನರು ಭಯ ಪಡುವಂತಾಗಿದೆ.

ಬೀದಿ ದೀಪಗಳಿಲ್ಲದೇ ಅಪಘಾತ ಹೆಚ್ಚಳ! :
ಇದು ಇಂದಿನ ಸಮಸ್ಯೆಯಲ್ಲ. ತಿಂಗಳುಗಳಿಂದಲೇ ಈ ಭಾಗದ ರಸ್ತೆಗಳ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೀದಿ ದೀಪಗಳು ಉರಿಯದ ಕಾರಣ ರಾತ್ರಿ ವೇಳೆ ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳತನ ಹೆಚ್ಚುತ್ತಿದೆ. ಆಗಾಗ್ಗೆ ಅಪಘಾತಗಳು, ಅನಾಹುತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಆಗಾಗ್ಗೆ ಕೆಡುವ ಬೀದಿ ದೀಪಗಳು
ಪ್ರತಿದಿನ ಸಾವಿರಾರು ಜನ ಈ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಕತ್ತಲಾಗುತ್ತಿದ್ದಂತೆ ಈ ಭಾಗದಲ್ಲಿ, ಅದರಲ್ಲೂ ಶ್ರೀರಾಂಪುರ ವರ್ತುಲ ರಸ್ತೆಯಿಂದ ಲಿಂಗಾಂಬುಧಿಪಾಳ್ಯ, ವಿವಿ ಬಡಾವಣೆ ಹಾಗೂ ದಟ್ಟಗಳ್ಳಿಯವರೆಗೂ ಬೀದಿ ದೀಪಗಳು ಉರಿಯದ ಕಾರಣ ಸಮಸ್ಯೆ ಎದುರಾಗಿದೆ. ಬೀದಿ ಬದಿಗಳಲ್ಲಿ ಇಂಡಕ್ಷನ್ ದೀಪಗಳನ್ನು ಅಳವಡಿಸಲಾಗಿದ್ದು, ಇದಕ್ಕಾಗಿ ಕೇಬಲ್‌ಗಳನ್ನು ಎಳೆದು ಸಂಪರ್ಕ ಕಲ್ಪಿಸಲಾಗಿದೆ. ದೂರವಾಣಿ ಕೇಬಲ್ ಅಳವಡಿಸುವವರು, ಒಳಚರಂಡಿ ದುರಸ್ತಿ ಮಾಡುವವರು ಪದೇ ಪದೇ ರಸ್ತೆಯನ್ನು ಅಗೆಯುವ ಸಂದರ್ಭದಲ್ಲಿ ಈ ಕೇಬಲ್ ಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುತ್ತಿವೆ.

ಕತ್ತಲಲ್ಲಿ ಓಡಾಡಲು ಭಯ
ಬೀದಿ ದೀಪಗಳಿಲ್ಲದ ಕಾರಣ ಸಾರ್ವಜನಿಕರು ಈ ಭಾಗದಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಇದು ಸರಗಳ್ಳತನ ಮೊದಲಾದ ದುಷ್ಕೃತ್ಯಗಳಿಗೆ ಎಡೆಮಾಡಿಕೊಡುತ್ತಿದೆ. ಕೆಲ ವಾರಗಳ ಹಿಂದೆ ನಗರಪಾಲಿಕೆ ಅಳವಡಿಸಿದ್ದ ಬೀದಿ ದೀಪಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಈ ಭಾಗದಲ್ಲಿರುವ ಒಟ್ಟು ದೀಪಗಳಲ್ಲಿ ಎಷ್ಟು ಉರಿಯುತ್ತಿವೆ? ಎಷ್ಟು ಹಾಳಾಗಿವೆ? ಎಂಬುದು ಲೆಕ್ಕೆಕೆ ಸಿಗದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಕೂಡಲೇ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿದೆ. ಒಂದೆರಡು ದೀಪಗಳು ಕೆಟ್ಟಿರಬಹುದು. ಅದನ್ನು ಕೂಡಲೇ ಸರಿಪಡಿಸಲಾಗುವುದು. ಬೇರೆ ಸಂಪರ್ಕಗಳನ್ನು ಸರಿಪಡಿಸುವ ಸಂದರ್ಭದಲ್ಲಿ ಬಹುಶಃ ವಿದ್ಯುತ್ ತಂತಿ ತುಂಡಾಗಿ ಈ ಸಮಸ್ಯೆ ಆಗಿರಬಹುದು. ಕೂಡಲೇ ಅದರ ಬಗ್ಗೆ ಗಮನಹರಿಸಲಾಗುವುದು. ಶೇಖ್ ತನ್ವೀರ್ ಆಸಿಫ್, ಆಯುಕ್ತ, ನಗರಪಾಲಿಕೆ

ಆಂದೋಲನ ಡೆಸ್ಕ್

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

3 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

3 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

3 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

13 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

15 hours ago