Andolana originals

ಕೇರಳಕ್ಕೆ ನೂರಾರು ಟಿಪ್ಪರ್‌ಗಳಲ್ಲಿ ರಾಜ್ಯದ ಸಂಪತ್ತು ಸಾಗಣೆ

ಮಹೇಂದ್ರ ಹಸಗೂಲಿ

ಕಡಿವಾಣ ಹಾಕದಿದ್ದರೆ ರೈತಸಂಘ, ಕನ್ನಡಪರ ಸಂಘಟನೆಗಳು, ಜನಸಾಮಾನ್ಯರಿಂದ ಉಗ್ರ ಹೋರಾಟದ ಎಚ್ಚರಿಕೆ 

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಕೇರಳ ನೋಂದಣಿಯ ಟಿಪ್ಪರ್‌ಗಳ ಸಂಚಾರ ಹೆಚ್ಚಿದ್ದು ಗಣಿಗಾರಿಕೆಯಲ್ಲಿ ಕೇರಳಿಗರ ಹಸ್ತಕ್ಷೇಪ ಹೆಚ್ಚಾಗುವ ಜತೆಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ರಾಜಾರೋಷವಾಗಿ ಗುಂಡ್ಲುಪೇಟೆಯಿಂದ ಬಿಳಿಕಲ್ಲು, ಕರಿಕಲ್ಲು, ಕೆಂಪುಮಣ್ಣು ಸಾಗಣೆಯಾಗುತ್ತಿದ್ದರೂ ಗಣಿ ಇಲಾಖೆ, ಆರ್‌ಟಿಒ, ಪೊಲೀಸ್ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ ಎಂಬ ಆರೋಪ ಕೇಳಿಬರುತ್ತಿದೆ.

ತಾಲ್ಲೂಕಿನ ಕೂತನೂರು ಗುಡ್ಡ, ಹಿರಿಕಾಟಿ, ರಂಗೂಪುರ, ಅರೇಪುರ, ತೆರಕಣಾಂಬಿ, ಮಡಹಳ್ಳಿ ಸುತ್ತಮುತ್ತ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಕೇರಳ ಮೂಲದ ೧೮, ೨೦ ಚಕ್ರಗಳ ಟಿಪ್ಪರ್, ಕಂಟೇನರ್‌ನಂತಹ ವಾಹನಗಳ ಸಂಚಾರದಿಂದ ತಾಲ್ಲೂಕಿನ ಸ್ಥಳೀಯ ಟಿಪ್ಪರ್ ಮಾಲೀಕರಿಗೆ ಅವಕಾಶವಿಲ್ಲವಾಗಿದೆ. ಚಿಕ್ಕ ಟಿಪ್ಪರ್‌ನಲ್ಲಿ ಮೂರು ಬಾರಿ ಸಂಚರಿಸುವ ಬದಲು ಒಮ್ಮೆ ಇಪ್ಪತ್ತು ಚಕ್ರಗಳ ಲಾರಿಯಲ್ಲಿ ಸಾಗಿಸಬಹುದು ಎಂಬ ದುರಾಸೆ ಗಣಿ ಮಾಲೀಕರಲ್ಲಿ ತುಂಬಿದೆ ಎಂಬುದು ಸಾರ್ವಜನಿಕರ ಆರೋಪ.

ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಎಷ್ಟು ಪ್ರಮಾಣದಲ್ಲಿ ರಾಜಧನ ಕಟ್ಟುತ್ತಾರೆ? ಎಷ್ಟು ವಂಚಿಸುತ್ತಿದ್ದಾರೆ? ಯಾವ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಗಣಿ ಇಲಾಖೆ ಕ್ರಮ ವಹಿಸದೆ ಮೌನವಾಗಿದೆ ಎನ್ನುವುದು ಹಲವರ ಆರೋಪ.

ರಾಜಾರೋಷವಾಗಿ ಕೇರಳಕ್ಕೆ ಕಂಟೇನರ್, ಟಿಪ್ಪರ್‌ಗಳಲ್ಲಿ ಕಲ್ಲು, ಮಣ್ಣು ಸಾಗಣೆಯಾಗುವುದರ ಹಿಂದೆ ಕೇರಳ ರಾಜಕಾರಣಿಗಳ ಕೈವಾಡವಿರಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಕುವ ಮೂಲಕ ತಾಲ್ಲೂಕಿನಿಂದ ಕಲ್ಲು, ಮಣ್ಣು ಸಾಗಣೆ ಮಾಡಲಾಗುತ್ತಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಆರೋಪಿಸಿದ್ದಾರೆ.

”  ಗಣಿಗಾರಿಕೆಯಿಂದ ಬೆಟ್ಟಗುಡ್ಡ ಸಂಪೂರ್ಣ ನಾಶವಾಗುತ್ತಿದ್ದು, ನಮ್ಮ ರಾಜ್ಯದ ಸಂಪತ್ತನ್ನು ರಕ್ಷಿಸಿಕೊಳ್ಳುವ ಹಕ್ಕು ನಮ್ಮೆಲ್ಲರ ಮೇಲಿದೆ. ಜನರೇ ರೊಚ್ಚಿಗೆದ್ದು ಅಕ್ರಮ ದಂಧೆಕೋರರಿಗೆ ಬುದ್ಧಿ ಕಲಿಸಬೇಕಿದೆ. ಕೇರಳಕ್ಕೆ ನಮ್ಮ ಸಂಪತ್ತು ಲೂಟಿಯಾಗುತ್ತಿದ್ದು, ನಮ್ಮವರೇ ಕೇರಳದವರೊಡನೆ ಶಾಮೀಲಾಗಿ ಮಾರಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಶೀಘ್ರವೇ ಉಗ್ರ ಹೋರಾಟ ಕೈಗೊಳ್ಳಲಾಗುವುದು.”

-ಹೊನ್ನೂರು ಪ್ರಕಾಶ್, ರೈತ ಮುಖಂಡ 

” ಈ ಬಗ್ಗೆ ಆರ್‌ಟಿಒ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಕ್ರಮವಾಗಿ ಹಾಗೂ ದಾಖಲಾತಿ ಇಲ್ಲದೆ ಓವರ್ ಲೋಡ್ ಹಾಗೂ ವ್ಯಾಪ್ತಿಗೆ ಒಳಪಡದ ರಸ್ತೆಯಲ್ಲಿ ಸಂಚರಿಸಿದರೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು.”

ಶ್ರೀರೂಪ, ಜಿಲ್ಲಾಧಿಕಾರಿ

” ಗುಂಡ್ಲುಪೇಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆದರೆ ಇದಕ್ಕೆ ಕಡಿವಾಣ ಬೀಳಲಿದೆ. ಆದರೂ ಈ ವಿಚಾರದಲ್ಲಿ ಆರ್‌ಟಿಇಒ, ಗಣಿ, ಭೂ ವಿಜ್ಞಾನ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ನಾವು ನಂಬರ್‌ಪ್ಲೇಟ್ ಇಲ್ಲದಿದ್ದರೆ ಹಾಗೂ ಅತಿ ವೇಗದ ಚಾಲನೆ ಮಾಡಿದರೆ ಮಾತ್ರ ಕ್ರಮ ಕೈಗೊಳ್ಳಬಹುದು.”

ಮುತ್ತುರಾಜ್, ಡಿವೈಎಸ್‌ಪಿ

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

18 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

19 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

1 day ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

1 day ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

1 day ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

1 day ago