ಮಹಾದೇಶ್ ಎಂ.ಗೌಡ
ಮ.ಬೆಟ್ಟದಲ್ಲಿ ಸಕಲ ಸಿದ್ಧತೆ; ೩೦೦ ಬಸ್‌ಗಳ ವ್ಯವಸ್ಥೆ, ಸಾವಿರಾರು ಜನರು ಆಗಮಿಸುವ ನಿರೀಕ್ಷೆ
ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಮಹಾಲಯಅಮಾವಾಸ್ಯೆಗೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೆ.೧೯ರಿಂದ ಮೂರು ದಿನಗಳ ಕಾಲ ನಡೆಯುವ ಮಹಾಲಯ ಅಮಾವಾಸ್ಯೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಸೆ.೧೯ರಂದು ಮಹಾಲಯ ಜಾತ್ರಾ ಮಹೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗ ಲಿವೆ. ಸೆ.೨೦ರಂದು ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ವಿಶೇಷ ಪೂಜೆ ಮತ್ತು ಉತ್ಸವಗಳು ಜರುಗಲಿವೆ. ಬೆಳಿಗ್ಗೆ ೧೦ ಗಂಟೆಗೆ ವಡ್ಡನಹಳ್ಳಿ ಗೌರಮ್ಮ, ಶಿವಣ್ಣ ಸಿದ್ದಗಂಗಮ್ಮ ಕುಟುಂಬದವರಿಂದ ವಿಶೇಷ ಸೇವೆ ಮತ್ತು ಉತ್ಸವಗಳು ಜರುಗಲಿವೆ. ರಾತ್ರಿ ೭ ಗಂಟೆಗೆ ಮೈಸೂರಿನ ನೇತ್ರಸಿಂಹ ರವರ ಕುಟುಂಬದವರಿಂದ ವಿಶೇಷ ಸೇವೆ ಮತ್ತು ಉತ್ಸವ ನಡೆಯಲಿದೆ.
ಸೆ.೨೧ರಂದು ಮಹಾಲಯ ಅಮಾವಾಸ್ಯೆ ವಿಶೇಷ ಉತ್ಸವಗಳು ಜರುಗಲಿವೆ. ಸೆ.೨೨ರಂದು ನವರಾತ್ರಿ ಉಯ್ಯಾಲೆ ಉತ್ಸವದ ವಿಶೇಷ ಪೂಜೆಗಳು ನಡೆಯಲಿವೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಕರ್ನಾಟಕ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಜನರು ಬೆಟ್ಟಕ್ಕೆ ಆಗಮಿಸುವುದರಿಂದ ಯಾವುದೇ ತೊಂದರೆ ಯಾಗದಂತೆ ಪ್ರಾಧಿಕಾರ ಈಗಾಗಲೇ ಸೂಕ್ತ ಕ್ರಮವಹಿಸಿದೆ.
ನೆರಳಿನ ವ್ಯವಸ್ಥೆ: ಸಾರ್ವಜನಿಕರಿಗೆ ಈಗಾಗಲೇ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ರಾಜಗೋಪುರ ಮುಂಭಾಗದ ಎಡ ಬದಿ ಹಾಗೂ ಬಲಬದಿಯಲ್ಲಿ ಶಾಮಿಯಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ದೇವಸ್ಥಾನದ ಮುಂಭಾಗದಲ್ಲಿರುವ ರಂಗಮಂದಿರದಲ್ಲಿಯೂ ವಾಸ್ತವ್ಯಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ.
ನಿರಂತರ ದಾಸೋಹ: ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದವರು, ಅಧಿಕಾರಿ ವರ್ಗದ ವರಿಗೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಸಾರ್ವಜನಿಕರು ನೀಡಿರುವ ದವಸ-ಧಾನ್ಯ ಗಳು, ತರಕಾರಿಗಳನ್ನು ಶೇಖರಣೆ ಮಾಡಲಾಗಿದೆ. ಇದಲ್ಲದೆ ಈಗಾಗಲೇ ಸಂಗ್ರಹಣೆಯಾಗಿರುವ ಬೂದು ಗುಂಬಳಕಾಯಿಯಿಂದ ಮಜ್ಜಿಗೆ ಹುಳಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈ ಬಾರಿ ಮಧುಮೇಹಿಗಳಿಗೆ ಪ್ರತ್ಯೇಕ ಕೌಂಟರ್ ತೆರೆದು ಸಿರಿಧಾನ್ಯಗಳ ಬಿಸಿಬೇಳೆ ಬಾತ್, ಪೊಂಗಲ್ ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಹಿರಿಯ ನಾಗರಿಕರಿಗೆ ನೇರ ದರ್ಶನ : ಅತಿಥಿ ಗಣ್ಯ ರಿಗೆ, ವಿಶೇಷಚೇತನರಿಗೆ ಗೇಟ್ ನಂಬರ್ ೪ರಲ್ಲಿ, ೬೦ ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಎಡಭಾಗದ ಗೇಟ್, ಶಿಫಾರಸು ಪತ್ರ ತೆಗೆದುಕೊಂಡು ಬರುವವರಿಗೆ ಗೇಟ್ ನಂಬರ್ ೫ರಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿಯ ಮಹಾಲಯ ಅಮಾವಾಸ್ಯೆ ಶನಿವಾರ, ಭಾನುವಾರ ಹಾಗೂ ದಸರಾ ರಜೆ ಪ್ರಾರಂಭದ ದಿನಗಳಾಗಿರುವುದರಿಂದ ಲಕ್ಷಾಂತರ ಜನರು ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಈ ನಿಟ್ಟಿನಲ್ಲಿ ಜನರ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಪೊಲೀಸ್ ಪೇದೆಗಳು ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಕ್ರಮವಹಿಸಲಾಗಿದೆ ಎಂದು ಮ.ಬೆಟ್ಟ ವೃತ್ತ ನಿರೀಕ್ಷಕ ಜಗದೀಶ್ ತಿಳಿಸಿದರು. ೨ ಲಕ್ಷ ಲಾಡು ಸಂಗ್ರಹ: ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಜನರಿಗೆ ಈಗಾಗಲೇ ಪ್ರಾಧಿಕಾರದ ವತಿ ಯಿಂದ ೨ ಲಕ್ಷ ಲಾಡುಗಳನ್ನು ತಯಾರಿಸಿ ಸಂಗ್ರಹಿಸ ಲಾಗಿದೆ ಎಂದು ಲಾಡು ಘಟಕದ ಮೇಲುಸ್ತುವಾರಿ ಮಹದೇವಸ್ವಾಮಿ ತಿಳಿಸಿದರು.
” ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಬರುವ ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ. ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ, ಪ್ರತ್ಯೇಕ ದರ್ಶನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಧಿಕಾರದ ಜೊತೆ ಕೈಜೋಡಿಸಬೇಕು.”
– ಎ.ಇ.ರಘು, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
“ ೩೦೦ ಬಸ್‌ಗಳ ವ್ಯವಸ್ಥೆ: ೩ ದಿನಗಳ ಕಾಲ ನಡೆಯುವ ಮಹಾಲಯ ಅಮಾವಾಸ್ಯೆ ಜಾತ್ರೆಗೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವುದರಿಂದ ಬೆಂಗಳೂರು, ಮೈಸೂರು, ಕೊಳ್ಳೇ ಗಾಲ, ಮಂಡ್ಯ, ನಂಜನಗೂಡು ಇನ್ನಿತರ ಡಿಪೋಗಳಿಂದ ೩೦೦ ಬಸ್‌ಗಳ ಸಿದ್ಧತೆ ಮಾಡಿಕೊಳ್ಳ ಲಾಗಿದೆ.”
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…