ಸೂಕ್ತ ಚಿಕಿತ್ಸೆಗಾಗಿ ರೋಗಿಗಳ ಪರದಾಟ; ವೈದ್ಯರ ನೇಮಕಕ್ಕೆ ಒತ್ತಾಯ
ಸೋಮವಾರಪೇಟೆ: ಪಟ್ಟಣದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡ ಸುಸಜ್ಜಿತವಾಗಿದ್ದರೂ ತಜ್ಞ ವೈದ್ಯರಿಲ್ಲದೆ ಸೂಕ್ತ ಚಿಕಿತ್ಸೆಗಾಗಿ ರೋಗಿಗಳು ಪರದಾಡು ವಂತಾಗಿದೆ.
ಸೋಮವಾರಪೇಟೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ನವೀಕರಣ ಕಾಮಗಾರಿಯು ೧. ೬೦ ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರ ಆಸ್ಪತ್ರೆ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸುತ್ತಿದೆ. ಆದರೆ ತಜ್ಞ ವೈದ್ಯರನ್ನು ನೇಮಿಸದಿರುವುದರಿಂದ ರೋಗಿಗಳು ಸಂಕಷ್ಟಕ್ಕೆ ಸಿಲುಕು ವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಳೆದ ವರ್ಷ ಜೂ. ೨೩ರಂದು ಈ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ, ಶಾಸಕ ಡಾ. ಮಂಥರ್‌ಗೌಡ ಅವರ ಬೇಡಿಕೆಯಂತೆ ಮುಂದಿನ ಒಂದು ತಿಂಗಳಲ್ಲೇ ತಜ್ಞ ವೈದ್ಯರನ್ನು ನೇಮಿಸುವ ಭರವಸೆ ನೀಡಿದ್ದರು. ಆದರೆ ಭರವಸೆ ಭರವಸೆಯಾಗಿಯೇ ಉಳಿ ದಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಈಗ ನಾಲ್ಕು ಮಂದಿ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦ ವರ್ಷಗಳಿಂದ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ ಈ ಆಸ್ಪತ್ರೆಯನ್ನು ನಂಬಿ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ. ೩೦೦ ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ತಾಲ್ಲೂಕಿನ ೫೮ ಗ್ರಾಮಗಳ ಜನರು ಅವಲಂಬಿಸಿದ್ದಾರೆ. ಪ್ರತಿನಿತ್ಯ ೨೦೦ ರಿಂದ ೩೦೦ ರೋಗಿಗಳು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ತಪಾಸಣೆ ಮಾಡಬೇಕಾದ ತಜ್ಞ ವೈದ್ಯರೇ ಇಲ್ಲಿಲ್ಲ. ಕಡ್ಡಾಯ ಗ್ರಾಮೀಣ ಸೇವೆಯ ನಿಬಂಧನೆ ಇರುವುದರಿಂದ ಎಂಬಿಬಿಎಸ್ ವೈದ್ಯರು ಮಾತ್ರ ಚಿಕಿತ್ಸೆ ನೀಡುತ್ತಿದ್ದಾರೆ.
ಶಸ್ತ್ರ ಚಿಕಿತ್ಸಾ ಘಟಕ, ಅಪಘಾತ ಹಾಗೂ ತುರ್ತು ಸೇವಾ ಘಟಕ, ಡಯಾಲಿಸಿಸ್ ಸೇವೆ, ಹೆರಿಗೆ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ೧೦ ಹಾಸಿಗೆಯುಳ್ಳ ತುರ್ತು ಚಿಕಿತ್ಸಾ ಘಟಕ, ಎಕ್ಸ್ ರೇ ಘಟಕ, ಹೈಟೆಕ್ ರಕ್ತ ಪರೀಕ್ಷಾ ಕೇಂದ್ರ ಇದೆ. ವೈದ್ಯರಿಗೆ ಸುಸಜ್ಜಿತ ವಸತಿ ಗೃಹವೂ ಇದೆ. ಆದರೆ, ವೈದ್ಯರು ಮಾತ್ರ ಈ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಮುಂದಾಗುತ್ತಿಲ್ಲ. ಬೇರೆಡೆಯಿಂದ ವರ್ಗಾವಣೆಯಾಗಿ ಬಂದವರು ಮತ್ತೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ೯೫ ಲಕ್ಷ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಿದೆ. ಈಗ ೬೦ ಲಕ್ಷ ರೂ. ವೆಚ್ಚದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಮುಕ್ತಾಯವಾಗಿದ್ದು, ಘಟಕ ಪ್ರಾರಂಭಕ್ಕೆ ಸಿದ್ಧತೆ ನಡೆದಿದೆ. ೩೦ ರೋಗಿಗಳಿಗೆ ಏಕಕಾಲದಲ್ಲಿ ಶುದ್ಧ ಆಮ್ಲಜನಕ ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಲಾಗಿದೆ. ಈಗ ೧. ೬೦ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆಸ್ಪತ್ರೆ ಚಾವಣಿ ರೂಫಿಂಗ್ ಆಗಿದೆ. ಅಪಘಾತ ವಿಭಾಗದ ಕಟ್ಟಡ, ಶೌಚಗೃಹಗಳ ಚರಂಡಿ ದುರಸ್ತಿ ಕೆಲಸ ನಡೆಯುತ್ತಿದೆ. ನೆಲಹಾಸು ಹಾಕಲಾಗುತ್ತಿದೆ,ಆಪರೇಷನ್ ಥಿಯೇಟರ್ ನವೀಕರಣಗೊಳಿಸಲಾಗಿದೆ.
ಆದರೆ ಮಕ್ಕಳ ತಜ್ಞರು, ಮೂಳೆತಜ್ಞ, ನೇತ್ರತಜ್ಞ, ರೇಡಿ ಯಾಲಜಿಸ್ಟ್, ಅರಿವಳಿಕೆ ತಜ್ಞರಿಲ್ಲದೆ, ಶಸ್ತ್ರಚಿಕಿತ್ಸಾ ಘಟಕದ ಸಲಕರಣೆಗಳು ತುಕ್ಕು ಹಿಡಿಯುತ್ತಿವೆ. ಬಡವರು ಕೆಲ ಚಿಕಿತ್ಸೆಗಳಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯನ್ನು ಅವಲಂಬಿಸ ಬೇಕಾಗಿದೆ.
ರೋಗಿಗಳು ವೈದ್ಯರನ್ನು ಭೇಟಿ ಮಾಡಲು ಗಂಟೆಗಟ್ಟಲೆ ಕಾಯಬೇಕು. ರೋಗಿಗಳ ಸಂಖ್ಯೆ ಹೆಚ್ಚಾದಂತೆ, ಇರುವ ವೈದ್ಯರು ಒತ್ತಡದಲ್ಲೇ ಕೆಲಸ ಮಾಡಬೇಕಾದ ಅನಿ ವಾರ್ಯತೆಯೂ ಇದೆ. ಕೆಲವೊಮ್ಮೆ ನರ್ಸ್‌ಗಳೇ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಿದೆ.
ಒಟ್ಟಿನಲ್ಲಿ ಸುಸಜ್ಜಿತ ಕಟ್ಟಡ, ಅಗತ್ಯ ಸಲಕರಣೆ, ಯಂತ್ರೋಪಕರಣ ಇದ್ದರೂ ಅಗತ್ಯ ಸಿಬ್ಬಂದಿ, ವೈದ್ಯರು ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ.
ಹತ್ತಾರು ಹುದ್ದೆ ಖಾಲಿ ಖಾಲಿ. . !
ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ತಜ್ಞ ವೈದ್ಯರ ಹುದ್ದೆಗಳು ೧೫, ಆದರೆ ಈಗ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ ೪ ಮಾತ್ರ. ೧೧ ಹುದ್ದೆಗಳು ಖಾಲಿಯಿದ್ದು, ವೈದ್ಯರ ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಪ್ರಥಮ ದರ್ಜೆ ಸಹಾಯಕರು ೨, ಟೈಪಿಸ್ಟ್, ರೆಕಾರ್ಡ್ ಕೀಪರ್, ಶುಶ್ರೂಷಾ ಅಽಕ್ಷಕರು ೧, ಕಿರಿಯ ಅರೋಗ್ಯ ಸಹಾಯಕಿಯರು ೪, ಪ್ರಯೋಗಶಾಲಾ ತಂತ್ರಜ್ಞ, ಜೂನಿಯರ್ ಫಾರ್ಮಸಿಸ್ಟ್, ಎಲೆಕ್ಟ್ರಿಷಿಯನ್, ಇಸಿಜಿ ತಂತ್ರಜ್ಞ, ವಾಹನ ಚಾಲಕ ಇವೆಲ್ಲ ಹುದ್ದೆಗಳೂ ಬಹಳ ವರ್ಷಗಳಿಂದ ಖಾಲಿ ಇವೆ. ಗ್ರೂಪ್ ಡಿ ೪೮ ಹುದ್ದೆಗಳು ಖಾಲಿ ಇವೆ. ಹೊರಗುತ್ತಿಗೆ ಆಧಾರದಲ್ಲಿ ೨೪ ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಬಡರೋಗಿಗಳು ತಾಲ್ಲೂಕು ಆಸ್ಪತ್ರೆಯಲ್ಲಿ ಎಂತಹ ಚಿಕಿತ್ಸೆ ನಿರೀಕ್ಷೆ ಮಾಡಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ.
ಆಸ್ಪತ್ರೆಗೆ ಹೋದರೆ ತಜ್ಞ ವೈದ್ಯರು ಸಿಗುವುದಿಲ್ಲ. ಸಿಬ್ಬಂದಿ ನಡುವೆ ಹೊಂದಾಣಿಕೆ ಕೊರತೆ ಇದೆ, ಕಚೇರಿಯಲ್ಲಿಯೂ ಸಿಬ್ಬಂದಿ ಇಲ್ಲ. ೨೦ ವರ್ಷಗಳಿಂದ ಆಸ್ಪತ್ರೆ ಅನಾಥವಾಗಿದೆ. ಬಹುತೇಕ ಮಾತ್ರೆ, ಔಷಧಗಳು ರೋಗಿಗಳಿಗೆ ಅಗತ್ಯವಿದ್ದಾಗ ಹೊರಗಿನ ಔಷಧಾಲಯಗಳಿಗೆ ಬರೆದು ಕೊಡುತ್ತಾರೆ. ಸಿ. ಬಿ. ಸುರೇಶ್ ಶೆಟ್ಟಿ, ಗ್ರಾಪಂ ಸದಸ್ಯ, ಚೌಡ್ಲು.
ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡಲಾಗಿದೆ. ಇರುವ ವೈದ್ಯರು ಒತ್ತಡದಲ್ಲೇ ಕಾರ್ಯನಿರ್ವಹಿಸುವಂತಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳನ್ನು ಸಕಾಲದಲ್ಲಿ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಡಾ. ಇಂದೂಧರ್, ತಾಲ್ಲೂಕು ಆರೋಗ್ಯಾಧಿಕಾರಿ, ಸೋಮವಾರಪೇಟೆ
ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…