Andolana originals

ಏ. 13ರಿಂದ ಚಿಕ್ಕರಸಿನಕೆರೆ ಕಾಲಭೈರವೇಶ್ವರ ಜಾತ್ರಾ ಮಹೋತವ

ರಥೋತ್ಸವಕ್ಕೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ; ಏ. ೧೫ರಂದು ಮಹಾರಥೋತ್ಸವ

  • ಅಣ್ಣೂರು ಸತೀಶ್

ಭಾರತೀನಗರ: ದಕ್ಷಿಣದ ಚಿಕ್ಕಕಾಶಿ ಎಂದೇ ಕರೆಸಿಕೊಳ್ಳುವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಏ. 13ರಿಂದ 20ರವರೆಗೆ ವಿಜೃಂಭ ಣೆಯಿಂದ ನಡೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಶ್ರೀ ಕಾಲಭೈರವೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರೀಕಾಲಭೈರವೇಶ್ವರ ಬಸವಪ್ಪನ ವರ ಪುಣ್ಯಕ್ಷೇತ್ರದಲ್ಲಿ ಏ. 15ರಂದು ಕಾಲ ಭೈರವೇಶ್ವರಸ್ವಾಮಿಯವರ ಮಹಾರಥೋತ್ಸವ ಹಾಗೂ ದೇವತೆಗಳ ಉತ್ಸವ ವಿಜೃಂಭಣೆಯಿಂದ ಜರುಗಲಿದೆ. ರಥೋತ್ಸವಕ್ಕೂ ಮುನ್ನ ಹಿರಿಯ ದಂಪತಿಗಳಿಗೆ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ದೇವತಾ ಕಾರ್ಯಕ್ರಮಗಳು: ಏ. 13ರ ಭಾನುವಾರ ಬೆಳಿಗ್ಗೆ ಹೋಮ-ಹವನ ಇತ್ಯಾದಿ ಪೂಜಾ ಕಾರ್ಯಗಳು ಜರುಗಲಿವೆ.

ಸಂಜೆ ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಹುಣ್ಣನದೊಡ್ಡಿ ಗ್ರಾಮಸ್ಥರಿಂದ ಕೊಂಡ ಬಂಡಿ ಉತ್ಸವ ನಡೆಯಲಿದೆ. ರಾತ್ರಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶ್ರೀ ಕಾರ್ಕಹಳ್ಳಿ ಬಸವೇಶ್ವರಸ್ವಾಮಿ, ಶ್ರೀ ಹೊನ್ನಾರತಿದೇವಿ ಅಮ್ಮನವರು, ಮುಟ್ಟನಹಳ್ಳಿ ಶ್ರೀಕಾಲಭೈರವೇಶ್ವರಸ್ವಾಮಿ, ದೊಡ್ಡ ಅರಸಿನಕೆರೆ, ಶ್ರೀಏಳೂರಮ್ಮ ಕಾಳಮ್ಮ ಹಾಗೂ ಬುಳ್ಳಿಕೆಂಪನದೊಡ್ಡಿ ಗ್ರಾಮದ ನಿಶಾನಿ ದೇವರುಗಳು, ಹುನಗನಹಳ್ಳಿ ಗ್ರಾಮಸ್ಥರಿಂದ ಕರಗದ ಉತ್ಸವ, ಗುರುದೇವರಹಳ್ಳಿ ಶ್ರೀಬಸವೇಶ್ವರಪೂಜೆ ಹಾಗೂ ಛತ್ರದಹೊಸಹಳ್ಳಿ ಗ್ರಾಮದವರಿಂದ ಛತ್ರಿ ಚಾಮರ ಹಾಗೂ ದೇವಾನುದೇವತೆಗಳ ಉತ್ಸವ ನೆರವೇರಲಿದೆ.

ಏ. 14ರ ಸೋಮವಾರ ಬೆಳಿಗ್ಗೆ 6.30ಕ್ಕೆ ಶ್ರೀ ಕಾಲಭೈರವೇಶ್ವರ ಅಗ್ನಿಕೊಂಡ ಆರತಿ, 11. 30ಕ್ಕೆ ಬೇಲೂರು ಕುಲದವರು ಹಾಗೂ ಬಾಣ ಸಮುದ್ರ,ಬೊಪ್ಪಸಮುದ್ರ, ಚಿಕ್ಕಮಾಳಿಗೆ ಕೊಪ್ಪಲು, ಕಾರ್ಕಹಳ್ಳಿ ಗ್ರಾಮದರಿಂದ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 6.30ಕ್ಕೆ ಮದ್ದೂರು ತಾಲ್ಲೂಕು, ಸಿ. ಎ. ಕೆರೆ ಹೋಬಳಿಯ ಸರ್ವ ಬಣಜಿಗ ಸಂಘದ ವತಿಯಿಂದ ಶ್ರೀ ವೀರಾಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ, ರಾತ್ರಿ 9 ಗಂಟೆಗೆ ನಾಟಕ ಪ್ರದರ್ಶನ, ಮಧ್ಯ ರಾತ್ರಿ 12 ಗಂಟೆಗೆ ಮನೆಮಂಚಮ್ಮ ದೇವತೆಗಳ ಕರಗ ಉತ್ಸವ ಮತ್ತು ಪೂಜಾ ಮೆರವಣಿಗೆ ನಡೆಯಲಿದೆ.

ರಥೋತ್ಸವ, ಅನ್ನಸಂತರ್ಪಣೆ: ಏ. 15ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ ಮಹಾ ರಥೋತ್ಸವ ಹಾಗೂ ದೇವತೆಗಳ ಉತ್ಸವ ನಡೆಯಲಿದೆ. ಅರೆಕಲ್‌ದೊಡ್ಡಿ, ಬನ್ನಹಳ್ಳಿ, ಹೊನ್ನಾಯಕನಹಳ್ಳಿ ಹಾಗೂ ಕಾಡಂಕನಹಳ್ಳಿ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಏ. 16ರ ಬುಧವಾರ ಸಂಜೆ 5 ಗಂಟೆಗೆ ಚಿಕ್ಕರಸಿನಕೆರೆ, ಗುರುದೇವರಹಳ್ಳಿ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಯವರ ಓಕಳಿ ಸೇವೆ ಉತ್ಸವ ನಡೆಯಲಿದೆ. ಏ. 17ರ ಗುರುವಾರ ಸಂಜೆ 5 ಗಂಟೆಗೆ ಹುಣ್ಣನದೊಡ್ಡಿ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಓಕುಳಿ ಸೇವೆ ಉತ್ಸವ, ಏ. 18 ರ ಶುಕ್ರವಾರ ಛತ್ರದಹೊಸಹಳ್ಳಿ ಗ್ರಾಮದಲ್ಲಿ ಓಕುಳಿ ಸೇವೆ ಉತ್ಸವ ಹಾಗೂ ಏ. 20ರ ಭಾನುವಾರ ಶ್ರೀಚನ್ನಾಪ್ಪಜಿ ಸ್ವಾಮಿಯ ಸಿದ್ಧಬುಕ್ತಿ ಕಾರ್ಯಕ್ರಮ ನಡೆಯಲಿದೆ.

ದೇಗುಲದ ಇತಿಹಾಸ: ಹಿಂದೆ ಚಿಕ್ಕಅರಸಿ ಮತ್ತು ದೊಡ್ಡಅರಸಿ ಎಂಬ ಅಕ್ಕ-ತಂಗಿಯರಿದ್ದರು. ಇವರು ಎರಡು ಕೆರೆಗಳನ್ನು ಕಟ್ಟಿಸಿದರು. ನಂತರ ದಿನಗಳಲ್ಲಿ ಚಿಕ್ಕಅರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ಚಿಕ್ಕರಸಿನಕೆರೆ ಎಂತಲೂ, ದೊಡ್ಡರಸಿ ಬಳಿ ನಿರ್ಮಾಣವಾದ ಗ್ರಾಮವನ್ನು ದೊಡ್ಡರಸಿನಕೆರೆ ಎಂದು ನಾಮಕರಣ ಮಾಡಲಾಯಿತು ಎಂಬ ಪ್ರತೀತಿ ಇದೆ.

ಶ್ರೀ ಕಾಲಭೈರವೇಶ್ವರಸ್ವಾಮಿಯ ಬಸವ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಬಸವಪ್ಪನಿಗೆ ಜನರು ನೀಡುವ ಕಾಣಿಕೆಯಿಂದಲೇ ದೇವಸ್ಥಾನದ ಹಲವು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗಿದೆ. ಆದರೆ , ೨2016ರ ಮೇ 17ರಂದು ಕಾಲಭೈರವೇಶ್ವರ ದೇವರ ಬಸವಪ್ಪ ಸಾವನ್ನಪ್ಪಿತು. ಈಗ ದೇವರ ಹೆಸರಿಗೆ ಸಮರ್ಪಿಸಿರುವ ಹೊಸ ಬಸವ ಕೂಡ ಪ್ರಮುಖ ಆಕರ್ಷಣೆಯಾಗಿದೆ.

ಶ್ರೀ ಕಾಲಭೈರವೇಶ್ವರಸ್ವಾಮಿ ಚಿಕ್ಕರಸಿನಕೆರೆ ಕ್ಷೇತ್ರದಲ್ಲಿ ನೆಲೆ ನಿಂತಿದ್ದು, ಕ್ಷೇತ್ರವು ಅಭಿವೃದ್ಧಿ ಹೊಂದಿದೆ. ಆದಿಚುಂಚನಗಿರಿ ಕ್ಷೇತ್ರಕ್ಕೆ ಒಳಪಟ್ಟ ನಂತರ ಉತ್ತಮ ಅಭಿವೃದ್ಧಿಯಾಗಿ ಜನರ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಡಾ. ನಿರ್ಮಲಾನಂದನಾಥ ಸ್ವಾಮೀಜಿ

ದಕ್ಷಿಣದ ಚಿಕ್ಕಕಾಶಿ ಎಂದೇ ಪ್ರಸಿದ್ಧವಾಗಿರುವ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲು ಬರುವವರು ಶಿಸ್ತುಬದ್ಧವಾಗಿ ನಡೆದು ಕೊಳ್ಳುವುದರ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಯಜಮಾನ್ ಶಿವಲಿಂಗಯ್ಯ, ಅಧ್ಯಕ್ಷರು, ಕಾಲಭೈರವೇಶ್ವರ ಟ್ರಸ್ಟ್

ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರ ಪುಣ್ಯಕ್ಷೇತ್ರ ರಾಜ್ಯಾದ್ಯಂತ ಪ್ರಚಲಿತ ಗೊಂಡಿದ್ದು ಲಕ್ಷಾಂತರ ಭಕ್ತರನ್ನು ಹೊಂದಿದೆ. ಏ. 13 ರಿಂದ 20ರವರೆಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಪುಟ್ಟರಾಜು, ಯಜಮಾನರು, ಚಿಕ್ಕರಸಿನಕೆರೆ

 

ಆಂದೋಲನ ಡೆಸ್ಕ್

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

15 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

17 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

17 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

17 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

17 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

21 hours ago