Andolana originals

ಫೆ.26, 27ಕ್ಕೆ ಕಡಬೂರಿನಲ್ಲಿ ಶಿವ, ಗಣೇಶ ದೇವಸ್ಥಾನ ಲೋಕಾರ್ಪಣೆ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಫೆ.೨೬ ಮತ್ತು ೨೭ರಂದು ನೂತನವಾಗಿ ನಿರ್ಮಾಣವಾಗಿರುವ ಶಿವ ಮತ್ತು ಗಣೇಶ ದೇವಾಲಯದ ಉದ್ಘಾಟನೆ ಹಾಗೂ ವಿಮಾನ ಗೋಪುರ ಮತ್ತು ಕಲಶಾರೋಹಣ ಮಹೋತ್ಸವ ನಡೆಯಲಿದ್ದು, ಸಮಾರಂಭವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.

ಫೆ.೨೬ರಂದು ಗುರುವಾರ ಸಂಜೆ ೪ ಗಂಟೆಗೆ ಕಳಸ ಪೂಜೆಯ ಮೂಲಕ ಹಾಲ್ಹರವಿ, ವೀರಗಾಸೆ, ಛತ್ರಿ-ಚಾಮರ, ನಂದಿ ಧ್ವಜ, ಮಂಗಳವಾದ್ಯಗಳ ಸಮೇತ ಗಂಗೆ ತಡಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ದೇವಸ್ಥಾನದ ಸ್ಥಳಕ್ಕೆ ತಲುಪಲಿದೆ. ನಂತರ ವಿವಿಧ ಪೂಜೆ, ಹೋಮ-ಹವನಗಳು ನೆರವೇರಲಿವೆ.

ಫೆ.೨೭ರಂದು ಶುಕ್ರವಾರ ಮುಂಜಾನೆ ೩.೩೦ರಿಂದ ೪.೨೦ರೊಳಗೆ ಶ್ರೀ ಶಿವಲಿಂಗ ಮತ್ತು ಗಣಪತಿ ಮೂರ್ತಿಗಳ ಶಿಲಾಯಂತ್ರದ ದೇವತಾ ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ವಿಮಾನ ಗೋಪುರದ ಕಳಶಾರೋಹಣ, ಮಹಾಬಲಿ, ಮಹಾಪೂರ್ಣಾಹುತಿ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ಕಬ್ಬಹಳ್ಳಿ ಶ್ರೀ ಜಂಗಮ ಮಠದ ಶ್ರೀ ಗುರುಸಿದ್ದಸ್ವಾಮಿಗಳವರು ನೆರವೇರಿಸಲಿದ್ದಾರೆ.

ಧಾರ್ಮಿಕ ಸಭೆ: ನಂತರ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮಿಗಳು, ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠಾಧ್ಯಕ್ಷರಾದ ಶ್ರೀ ಮಹಾಂತಸ್ವಾಮಿಗಳು, ಪಡಗೂರು ಅಡವಿ ಮಠಾಧ್ಯಕ್ಷರಾದ ಶ್ರೀ ಶಿವಲಿಂಗೇಂದ್ರ ಸ್ವಾಮಿಗಳು, ಸೋಮಹಳ್ಳಿಯ ವೀರಸಿಂಹಾಸನ ಶಿಲಾ ಮಠಾಧ್ಯಕ್ಷರಾದ ಶ್ರೀ ಸಿದ್ದಮಲ್ಲಸ್ವಾಮಿಗಳು, ವಿರಕ್ತ ಮಠದ ತೋಂಟದಾರ್ಯ ಸ್ವಾಮಿಗಳು, ಶ್ರೀ ಚನ್ನಬಸವಸ್ವಾಮಿಗಳು, ಶ್ರೀ ಸರ್ಪಭೂಷಣ ಸ್ವಾಮಿಗಳು, ಮತ್ತಿತರ ಸ್ಥಳೀಯ ಮಠಾಧೀಶರು ಭಾಗಿಯಾಗಲಿದ್ದಾರೆ.

” ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಹೆಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಇತರರು ಭಾಗಿಯಾಗಲಿದ್ದಾರೆ”

 

 

ಆಂದೋಲನ ಡೆಸ್ಕ್

Recent Posts

ಹೂ ಮಳೆಗಾಗಿ ಕಾದಿರುವ ಕಾಫಿ ಬೆಳೆಗಾರರು

ನವೀನ್ ಡಿಸೋಜ ಕೆಲವೆಡೆ ಸ್ಪಿಂಕ್ಲರ್ ಮೊರೆ ಹೋದ ಕೃಷಿಕರು; ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

19 mins ago

ಅವ್ಯವಸ್ಥೆಯಿಂದ ಕೂಡಿದ ಚರಂಡಿ ಕಾಮಗಾರಿ: ಆರೋಪ

ಮಂಜು ಕೋಟೆ ಕೋಟೆ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ ಎಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.…

27 mins ago

ನಾ.ದಿವಾಕರ ಅವರ ವಾರದ ಅಂಕಣ: ಎಳೆ ಪ್ರತಿಭೆಗೆ ಸಾಕ್ಷಿಯಾದ ರಂಗ ಪ್ರಯೋಗ

ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ.  ನಾ.ದಿವಾಕರ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು…

32 mins ago

ಶಂಕರಾಚಾರ್ಯರ ಬಂಧನಕ್ಕೆ ವೇದಿಕೆ ಸಿದ್ಧ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ…

37 mins ago

ಮೊಬೈಲ್ ಮಿತ ಬಳಕೆ; ವಿದ್ಯಾರ್ಥಿಗಳ ಬಯಕೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ…

1 hour ago

ಪರಿಹಾರ ಧನ ಪರಿಹಾರವಲ್ಲ..!

ಗಿರೀಶ್ ಹುಣಸೂರು ನೊಂದ ಕುಂಟುಂಬಗಳಿಗೆ ಲಕ್ಷ ಲಕ್ಷ ರೂ. ಪರಿಹಾರ ತಲುಪಿಸಿರುವ ರಾಜ್ಯ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ…

1 hour ago