Andolana originals

ಗ್ರಾಮೀಣ ಪ್ರತಿಭೆ ನಿತಿಲ್ ಈಗ ಚಲನಚಿತ್ರ ನಾಯಕ ನಟ

ಮಂಜು ಕೋಟೆ

ಕೋಟೆ: ಯುವಕನ ಪ್ರತಿಭೆ ಗುರುತಿಸಿ ಅವಕಾಶ ನೀಡಿರುವ ಕಾಲಘಟ್ಟ ಚಿತ್ರತಂಡ; ಜೂ.೧೯ರಂದು ಚಿತ್ರ ಬಿಡುಗಡೆ 

ಎಚ್.ಡಿ.ಕೋಟೆ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಪ್ರತಿಭೆ, ಪಾತ್ರೆ ವ್ಯಾಪಾರಿಯ ಮಗ ನಿತಿಲ್ ಚಲನಚಿತ್ರ ನಾಯಕನಟನಾಗಿ ಅಭಿನಯಿಸಿರುವ ‘ಕಾಲಘಟ್ಟ’ ಚಲನಚಿತ್ರ ಬಿಡುಗಡೆ ಗೊಳ್ಳುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತಸ ಮೂಡಿಸಿದೆ.

ತಾಲ್ಲೂಕಿನ ಗಿರಿಜನ ಪ್ರತಿಭೆ ರಾಜೇಶ್, ಸುನಾಮಿ ಕಿಟ್ಟಿ, ಗುಳಿಕಟ್ಟೆ ಸೂರ್ಯ ಕುಮಾರ್, ಅಮೃತ್ ಅವರುಗಳು ಈಗಾಗಲೇ ಚಲನಚಿತ್ರ ರಂಗಕ್ಕೆ ಪ್ರವೇಶಿಸಿ ನಾಯಕ ನಟನಾಗಿ ಹಾಗೂ ಖಳನಾಯಕರಾಗಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಪಟ್ಟಣದ ಹ್ಯಾಂಡ್‌ಪೋಸ್ಟ್ ಯರಹಳ್ಳಿ ಗ್ರಾಮದ ಪಾತ್ರೆ ವ್ಯಾಪಾರಿ ಬಡ ಕುಟುಂಬದ ಮಂಜುರಾವ್ ಮತ್ತು ದಿವ್ಯ ದಂಪತಿಯ ಪುತ್ರ ಎಚ್.ಎಂ.ನಿತಿಲ್ ‘ಕಾಲಘಟ್ಟ’ ಎಂಬ ಚಲನಚಿತ್ರದಲ್ಲಿ ನಾಯಕ ನಟ ನಾಗಿ ಅಭಿನಯಿಸಿದ್ದಾರೆ. ಅವರ ಜೊತೆ ನಾಯಕ ನಟಿಯಾಗಿ ಮೇಘನ ಖುಷಿ ಅಭಿನಯಿಸಿದ್ದಾರೆ.

೨೦೧೮ರಲ್ಲಿ ಮಲೇಶಿಯಾದ ಕೊಲಾಲಂಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದು ತಾಲ್ಲೂಕಿನಲ್ಲಿ ಗುರುತಿಸಿಕೊಂಡರು. ನಿತಿಲ್ ಅವರ ಸ್ವಭಾವ, ಗುಣ, ಪ್ರತಿಭೆಯನ್ನು ಗಮ ನಿಸಿದ ಕಾಲಘಟ್ಟ ಸಿನಿಮಾದ ನಿರ್ದೇಶಕ ರಾದ ಕೆ.ಪ್ರಕಾಶ ಅಂಬಳೆ, ಚಿತ್ರದ ನಿರ್ಮಾಪಕ ಚಿಕ್ಕೇಗೌಡ ತಳಗವಾದಿ ಅವರು ನಿತಿಲ್‌ಗೆ ಕಾಲಘಟ್ಟ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶ ಮಾಡಿಕೊಟ್ಟರು.

ಈ ಚಿತ್ರದಲ್ಲಿ ಹಿರಿಯ, ಕಿರಿಯ ನಟ- ನಟಿಯರು ಅಭಿನಯಿಸಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ಜೂ.೧೯ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಚಲನಚಿತ್ರ ನಾಯಕನಟನಾಗಿ ತಾಲ್ಲೂಕಿನ ಬಡ ಕುಟುಂಬದ ಯುವಕನಿಗೆ ಅವಕಾಶ ದೊರಕಿದ್ದರಿಂದ ತಾಲ್ಲೂ ಕಿನ ಸಂಘ-ಸಂಸ್ಥೆಗಳವರು, ಶಾಸಕರು, ರಾಜ್ಯದ ಇನ್ನಿತರ ಕಲಾವಿದರು ಸಂತಸ ವ್ಯಕ್ತಪಡಿಸಿ ಶುಭಕೋರಿ ಚಲನಚಿತ್ರದ ಪ್ರಚಾರ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಅನೇಕ ಪ್ರತಿಭೆಗಳಿಗೆ ಚಲನಚಿತ್ರ, ಧಾರಾವಾಹಿ, ಕಿರುಚಿತ್ರ,ರಿಯಾಲಿಟಿ ಶೋ ಮುಂತಾದ ಅನೇಕ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಿವೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆದಾಗ ಅವರ ಭವಿಷ್ಯವೂ ಉಜ್ವಲವಾಗುವ ಜತೆಗೆ ತಾಲ್ಲೂಕಿಗೂ ಹೆಮ್ಮೆಯ ಸಂಗತಿಯಾಗಲಿದೆ.

” ನಾನು ಪಾತ್ರೆ ವ್ಯಾಪಾರಿಯಾಗಿದ್ದು, ನನ್ನ ಮಗನಿಗೆ ಉತ್ತಮ ಕಥೆ ಇರುವ ‘ಕಾಲಘಟ್ಟ’ ಚಲನಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶವನ್ನು ಚಿತ್ರತಂಡದವರು ನೀಡಿರುವುದು ನಮಗೆ ಮತ್ತು ತಾಲ್ಲೂಕಿನ ಜನರಿಗೆ ಸಂತೋಷ ತಂದಿದೆ. ನನ್ನ ಮಗನ ಬೆಳವಣಿಗೆಗೆ ಎಲ್ಲರ ಸಹಕಾರ ಮುಖ್ಯವಾಗಿದೆ.”

-ಮಂಜು ರಾವ್, ಪಾತ್ರೆ ವ್ಯಾಪಾರಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

4 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

4 hours ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

4 hours ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

4 hours ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

4 hours ago

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು.  ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…

4 hours ago