Andolana originals

ಓದುಗರ ಪತ್ರ: ಬಸ್ ತಂಗುದಾಣ ದುರಸ್ತಿಗೊಳಿಸಿ

ನಂಜನಗೂಡು-ತಿ.ನರಸೀಪುರ ಮಾರ್ಗದಲ್ಲಿರುವ ಮುಳ್ಳೂರು ಗ್ರಾಮದ ಗೇಟ್ ಬಳಿ ಇರುವ ಬಸ್ ತಂಗುದಾಣವು ನಿರ್ವಹಣೆಯ ಕೊರತೆಯಿಂದಾಗಿ ಹದಗೆಟ್ಟು ಹೋಗಿದ್ದು, ಸಾರ್ವಜನಿಕರ ಉಪಯೋಗದಿಂದ ದೂರಾಗಿದೆ.

ಈ ತಂಗುದಾಣವನ್ನು ನಿರ್ಮಿಸಿ ಅನೇಕ ವರ್ಷಗಳೇ ಕಳೆದುಹೋಗಿದ್ದು, 3-4 ವರ್ಷಗಳ ಹಿಂದಷ್ಟೇ ಸುಣ್ಣ ಬಣ್ಣ ಬಳಿದು ದುರಸ್ತಿಗೊಳಿಸಲಾಗಿತ್ತು. ಆದರೆ ದುರಸ್ತಿಗೊಂಡ ಬಳಿಕವೂ ಸಂಬಂಧಪಟ್ಟವರು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಬಸ್ ತಂಗುದಾಣ ಮತ್ತೆ ಹಾಳಾಗಿದೆ. ಇದರ ಗೋಡೆಗಳು ಬಿರುಕುಬಿಟ್ಟಿದ್ದು, ಕುಸಿದು ಬೀಳುವ ಆತಂಕ ಸೃಷ್ಟಿಯಾಗಿದೆ. ಇನ್ನು ತಂಗುದಾಣದೊಳಗೆ ಗಿಡಗಂಟಿಗಳು ಬೆಳೆದುಕೊಂಡಿದ್ದು, ಮಳೆನೀರು ಜಿನುಗಿ ನಿಲ್ದಾಣ ಸಂಪೂರ್ಣ ಕೆಸರುಮಯವಾಗಿದೆ. ಅಲ್ಲದೆ ಕೆಲವರು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದಲ್ಲದೆ ಮದ್ಯದ ಬಾಟಲಿಗಳನ್ನೂ ಬೀಸಾಡುತ್ತಿದ್ದು, ದುರ್ವಾಸನೆ ಬೀರುತ್ತಿದೆ.

ತಂಗುದಾಣದ ಈ ಶೋಚನೀಯ ಪರಿಸ್ಥಿತಿಯಿಂದಾಗಿ ಪ್ರಯಾಣಿಕರು ಬಿಸಿಲು, ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟವರು ಕೂಡಲೇ ಈ ಬಸ್ ತಂಗುದಾಣವನ್ನು ದುರಸ್ತಿಗೊಳಿಸಬೇಕಿದೆ.
-ಎನ್.ಆರ್.ಚೇತನ್ ನಂಜನಗೂಡು.

ಆಂದೋಲನ ಡೆಸ್ಕ್

Recent Posts

ಇಂದು ಮೈಸೂರಿನಲ್ಲಿ ಜಾಗತಿಕ ಸೈಕಲ್ ಸವಾರಿ

ಸಿರಿ ಮೈಸೂರು ಹಿಂದೊಮ್ಮೆ ಕಾಲವೊಂದಿತ್ತು. ಆಗೆಲ್ಲಾ ರಸ್ತೆಯಲ್ಲಿ ಮೋಟಾರು ವಾಹನಗಳ ಸುಳಿವೇ ಇರುತ್ತಿರಲಿಲ್ಲ. ಬಹಳ ಶ್ರೀಮಂತರು ಮಾತ್ರ ಮೋಟಾರು ವಾಹನಗಳನ್ನು…

34 seconds ago

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

6 mins ago

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

14 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

15 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

15 hours ago