Andolana originals

ಓದುಗರ ಪತ್ರ: ಈ ಸಾವು ಸರಿಯಲ್ಲ

ಹಲವು ವರ್ಷಗಳಿಂದ ಹುಡುಕಿದರೂ ಮದುವೆಯಾಗಲು ಹೆಣ್ಣುಸಿಗಲಿಲ್ಲವೆಂಬ ಜುಗುಪ್ಸೆಯಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಾವು ನ್ಯಾಯವಲ್ಲ.

ವೈವಾಹಿಕ ಜೀವನದ ಸಂಕಷ್ಟಗಳಿಂದ ನೊಂದು-ಬೆಂದು ಆತ್ಮಹತ್ಯೆ ದಾರಿ ಹಿಡಿಯುವ ವರ್ಗ ಒಂದೆಡೆಯಾದರೆ,ಮತ್ತೊಂದೆಡೆ ಮದುವೆಯಾಗುತ್ತಿಲ್ಲವಲ್ಲ ಎಂದು ಕೊರಗಿ ಸಾಯುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದುಆತಂಕಕ್ಕೆ ಕಾರಣವಾಗಿದೆ.‘ಮದುವೆಯಾಗುವವರೆಗೂ ಹುಚ್ಚು ಬಿಡೊಲ್ಲ, ಹುಚ್ಚು ಬಿಡುವವರೆಗೂ ಮದುವೆಯಾಗೊಲ್ಲಾ‘ ಅನ್ನುವ ಹಾಗೆ ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಯುವಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಹೆಣ್ಣು ಸಿಗುತ್ತಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ.

ಇದರಿಂದಾಗಿ ಯುವಕರಿಗೆ ಮದುವೆ ಎಂಬುದು ಆತ್ಮ ಹತ್ಯೆಗೆ ಹೊಸ ಮಾರ್ಗವೊಂದನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಇಂತಹ ಪ್ರಕರಣಗಳು ಗಂಭೀರವಾಗಿದ್ದು, ಇವುಗಳ ಬಗ್ಗೆ ಎಲ್ಲರೂ ಆಲೋಚಿಸಬೇಕಿದೆ.

-ಕೆ.ವಿ.ವಾಸು, ವಕೀಲರು, ವಿವೇಕಾನಂದ ನಗರ, ಮೈಸೂರು.

ಆಂದೋಲನ ಡೆಸ್ಕ್

Recent Posts

ಬಿಗಿ ಭದ್ರತೆಯಲ್ಲಿ ಹಾಸನಾಂಬಾ ದೇವಾಲಯಕ್ಕೆ ಒಡವೆಗಳ ರವಾನೆ

ಹಾಸನ: ಅಕ್ಟೋಬರ್.‌29ರಿಂದ ನವೆಂಬರ್.‌11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ…

16 hours ago

ಬ್ರೆಜಿಲ್‌ನಲ್ಲಿ ಲುಲಾಗೆ ಮತ್ತೆ ಜನಾದೇಶ; ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಬ್ರೆಜಿಲ್‌: ಬ್ರೆಜಿಲ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಲುಯಿಜ್‌ ಇನಾಸಿಯೊ ಲುಲಾ ಡ ಸಿಲ್ವಾ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಅಕ್ಟೋಬರ್‌ 25ರಂದು ನಡೆದ…

17 hours ago

ಪ್ರಮೋದಾದೇವಿ ಒಡೆಯರ್ ಪತ್ರಕ್ಕೆ ಸರ್ಕಾರದಿಂದ ಅಧಿಕೃತ ಉತ್ತರ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಪ್ರಮೋದಾದೇವಿ ಒಡೆಯರ್‌ ಅವರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಅಧಿಕೃತವಾಗಿ ಉತ್ತರ ನೀಡಲಾಗುವುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ…

17 hours ago

ದಸರಾ ಲೋಪಗಳನ್ನು ಸರಿಪಡಿಸಿಕೊಳ್ಳಿ

ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು…

21 hours ago

ಚರ್ಚೆಗೆ ಗ್ರಾಸವಾದ ಶಿವಮೊಗ್ಗ ಅಂಬಾರಿ ಆನೆ ರಂಪಾಟ

ಶಶಿ ಸಂಪಳ್ಳಿ ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ  ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು…

21 hours ago

ಗೋಲ್ಡನ್ ಎರಾ ಕಂಪೆನಿಯ ಸ್ಟಿಂಗ್ ಕತೆ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬಹುತೇಕ ನಿರ್ದೇಶಕರು ಒಂದೊಂದು ಸುಳಿಯಲ್ಲಿ ಸಿಲುಕಿದ್ದರು ವಿಮಾನ ರನ್ ವೇಯಲ್ಲಿ ಓಡುತ್ತಾ ಇದ್ದಕ್ಕಿದ್ದಂತೆ ಮೇಲಕ್ಕೆದ್ದಾಗ…

21 hours ago