ಓದುಗರ ಪತ್ರ
ಮೈಸೂರು ನಗರವು ‘ಸ್ವಚ್ಛ ನಗರಿ’, ‘ಸಾಂಸ್ಕೃತಿಕ ನಗರಿ’ ಮತ್ತು ‘ಪಾರಂಪರಿಕನಗರಿ’ ಎಂದೇ ಖ್ಯಾತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹೆಮ್ಮೆಯ ನಗರಿಯ ಸೌಂದರ್ಯಕ್ಕೆ ಖಾಲಿ ನಿವೇಶನಗಳ ಅಸಮರ್ಪಕ ನಿರ್ವಹಣೆಯು ಕಪ್ಪುಚುಕ್ಕೆಯಂತಾಗಿದೆ. ನಗರದಾದ್ಯಂತ ಇರುವ ಅನೇಕ ಖಾಲಿ ನಿವೇಶನಗಳಲ್ಲಿ ‘ಇದು ನಗರಪಾಲಿಕೆ ಆಸ್ತಿ’, ‘ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿ’ ಅಥವಾ ‘ಖಾಸಗಿ ವ್ಯಕ್ತಿಗಳ ಆಸ್ತಿ’ ಎಂದು ಬೋರ್ಡ್ ಹಾಕಿ ಸುಮ್ಮನೆ ಬಿಡಲಾಗಿದೆ.
ವರ್ಷಾನುಗಟ್ಟಲೆ ಈ ಜಗಗಳು ಖಾಲಿಯೇ ಬಿದ್ದಿರುವುದರಿಂದ ಅಲ್ಲಿ ಕಳೆಗಿಡಗಳು ಬೆಳೆದಿವೆ. ಇದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟು, ಅಕ್ಕಪಕ್ಕದ ನಿವಾಸಿಗಳ ಹಾಗೂ ರಸ್ತೆಬದಿ ಓಡಾಡುವವರ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಇನ್ನೊಂದು ಪ್ರಮುಖವಾದ ಸಮಸ್ಯೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ. ಅದೆಂದರೆ ಇಂದಿನ ದಿನಗಳಲ್ಲಿ ಬಹುತೇಕರ ಮನೆಗಳಲ್ಲಿ ಕಾರು ಇರುವುದು ಸರ್ವೆ ಸಾಮಾನ್ಯ.
ಮನೆಯಲ್ಲಿ ವಾಹನ ನಿಲುಗಡೆಗೆ ಜಗವಿಲ್ಲದೆ ಅನಿವಾರ್ಯವಾಗಿ ರಸ್ತೆಗಳ ಮೇಲೆಯೇ ಕಾರುಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ರಸ್ತೆಗಳು ಕಿರಿದಾಗಿ, ಇತರೆ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡುವುದು ಕಷ್ಟವಾಗಿದೆ. ಈ ಗಂಭೀರ ಸಮಸ್ಯೆಗೆ ಮೈಸೂರು ಮಹಾನಗರ ಪಾಲಿಕೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಕಾರ್ಯರೂಪಕ್ಕೆ ತರಬೇಕು.
ನಿವೇಶನಗಳಲ್ಲಿ ಮನೆ ನಿರ್ಮಿಸುವವರೆಗೆ ಅಥವಾ ಅಧಿಕೃತ ಕಾಮಗಾರಿ ಆರಂಭಿಸುವವರೆಗೆ, ಸಂಬಂಧಪಟ್ಟ ಮಾಲೀಕರು ಅಥವಾ ಪ್ರಾಽಕಾರಗಳು ತಮ್ಮ ಖಾಲಿ ನಿವೇಶನಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಕಳೆ ಗಿಡಗಳನ್ನು ತೆರವುಗೊಳಿಸಬೇಕು. ಇದರೊಂದಿಗೆ, ಪ್ರತಿ ನಿವೇಶನಕ್ಕೂ ಕಾಂಪೌಂಡ್ ನಿರ್ಮಿಸಿ, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಸ್ವಚ್ಛಗೊಳಿಸಿ, ಸುರಕ್ಷಿತಗೊಳಿಸಿದ ಈ ನಿವೇಶನಗಳನ್ನು ಹತ್ತಿರದ ನಿವಾಸಿಗಳ ಕಾರು ಹಾಗೂ ಇತರೆ ವಾಹನಗಳ ನಿಲುಗಡೆಗೆ ತಾತ್ಕಾಲಿಕವಾಗಿ ಬಳಸಿಕೊಳ್ಳಲು ಅವಕಾಶ ನೀಡಬೇಕು. ನಿವೇಶನದ ಅಳತೆಗೆ ತಕ್ಕಂತೆ ಎಷ್ಟು ವಾಹನಗಳನ್ನು ನಿಲ್ಲಿಸಬಹುದು ಎಂಬುದನ್ನು ನಿರ್ಧರಿಸಿ, ಕಾರು ಮಾಲೀಕರಿಂದ ತಿಂಗಳ ಬಾಡಿಗೆಯನ್ನು ಪಡೆಯಬಹುದು. ಈ ಬಗ್ಗೆ ಸ್ಥಳೀಯ ಆಡಳಿತ ಯೋಚಿಸ ಬೇಕಾಗಿದೆ.
– ಬಿ. ಗಣೇಶ, ಮೈಸೂರು
ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…
ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…
ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…