ಹಾಕಿ ಮಾಂತ್ರಿಕ ಎಂದು ಕರೆಸಿಕೊಳ್ಳುತ್ತಿದ್ದ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ ಧ್ಯಾನ್‌ಚಂದ್ ಭಾರತೀಯ ಕ್ರೀಡಾರಂಗದ ಅನರ್ಥ್ಯ ರತ್ನ ಎಂದರೆ ತಪ್ಪಾಗಲಾರದು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿಯೇ ಅಂತಾರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಇಂತಹ ಮಹಾನ್ ಕ್ರೀಡಾಪಟುವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 29ರ ಧ್ಯಾನ್‌ಚಂದ್
ಜನ್ಮದಿನವನ್ನು ಸರ್ಕಾರ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇಂತಹ ಅರ್ಥಪೂರ್ಣ ದಿನವನ್ನು ಮಾಧ್ಯಮಗಳು ಮರೆತು ಹೋಗಿರುವುದು ಬೇಸರದ ಸಂಗತಿ. ಮಾಧ್ಯಮಗಳು ನಟ ದರ್ಶನ್ ಪ್ರಕರಣ, ರಾಜಕೀಯ ಮೇಲಾಟಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ತಳಕು ಹಾಕಿರುವ ಮುಡಾ ಹಗರಣದ ಸುದ್ದಿಗಳನ್ನೇ ದಿನವಿಡೀ ಬಿತ್ತರಿಸುವಲ್ಲಿ ಮುಳುಗಿ ಹೋಗಿದ್ದು, ರಾಷ್ಟ್ರೀಯ ಕ್ರೀಡಾ ದಿನವನ್ನೇ ಮರೆತುಬಿಟ್ಟಿವೆ. ಬೆಳಿಗ್ಗೆಯಿಂದ ಸಂಜೆಯವರೆಗೂ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕರೆದೊಯ್ದ ಸುದ್ದಿಯನ್ನೇ ಬಿತ್ತರಿಸಿದ ಮಾಧ್ಯಮಗಳು, ಪೊಲೀಸರೊಂದಿಗೆ ತಾವೂ ಪ್ರಯಾಣಿಸಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಬಿಟ್ಟು ಬಂದಿವೆ.
ಮಾಧ್ಯಮಗಳು ಮತ್ತು ದರ್ಶನ್ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿರಬಹುದು. ಹಾಗೆಂದ ಮಾತ್ರಕ್ಕೆ ಅದರ ಸೇಡು ತೀರಿಸಿಕೊಳ್ಳಲು ಪದೇ ಪದೇ ದರ್ಶನ್ ಪ್ರಕರಣದ ಸುದ್ದಿಯನ್ನೇ ಬಿತ್ತರಿಸಿ ವೀಕ್ಷಕರಿಗೆ ಬೇಸರ ತರುವುದು ಸರಿಯೇ?
ಭಾರತದಲ್ಲಿ ಕ್ರೀಡೆಗೆ ಅಷ್ಟಾಗಿ ಮಹತ್ವ ಸಿಗುತ್ತಿಲ್ಲ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಕೊಡುತ್ತಿದ್ದಾರೆಯೇ ವಿನಾ ಕ್ರೀಡಾಸಕ್ತಿ ಮೂಡಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಧ್ಯಾನ್‌ಚಂದ್‌ರಂತಹ ಕ್ರೀಡಾ ಸಾಧಕರ ಬಗ್ಗೆ ಸುದ್ದಿ ಬಿತ್ತರಿಸಿ ಜನರಲ್ಲಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ಇಂತಹ ಜವಾಬ್ದಾರಿಯನ್ನೇ ಮಾಧ್ಯಮಗಳು ಮರೆತದ್ದು ನಿಜಕ್ಕೂ ಬೇಸರದ ಸಂಗತಿ.
-ಕೆ.ಎಸ್.ಸುರೇಶ್, ಮುಖ್ಯ ಶಿಕ್ಷಕರು, ಸರಗೂರು.
ಕೊಡಗು: ಜಿಲ್ಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರ ಆದೇಶ ನೀಡಿರುವ…
ಅದು ೨೦೦೬ರ ಸಮಯ. ಮೈಸೂರು ಈಗಿನಂತಿರಲಿಲ್ಲ. ಆದರೂ ಮೈಸೂರು ಇಂದಿಗಿಂತ ಹಿಂದೆಯೇನೂ ಇರಲಿಲ್ಲ. ಈಗಿನಷ್ಟೇ ಪ್ರವಾಸಿಗರು, ಹೂಡಿಕೆದಾರರನ್ನು ಆಕರ್ಷಿಸುತ್ತಿತ್ತು. ಮೈಸೂರಿನಲ್ಲಿ…
ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…
ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…
ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…
ಪಂಜು ಗಂಗೊಳ್ಳಿ ಅವರ ವಾರದ ಅಂಕಣ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…