ಓದುಗರ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೨೦೨೬-೨೭ನೇ ಸಾಲಿನ ಬಜೆಟ್ ಪ್ರಗತಿಯ ದಿಕ್ಸೂಚಿಯಾಗಿದೆ. ರಾಜ್ಯದ ಬಜೆಟ್ ಗಾತ್ರ ೪,೪೮,೦೦೪ ಕೋಟಿ ರೂ. ಆಗಿದ್ದು, ಇದರಲ್ಲಿ ೩.೧೦ ಲಕ್ಷ ಕೋಟಿ ರೂ. ರಾಜಸ್ವ ವೆಚ್ಚಕ್ಕೆ ಹಾಗೂ ೭೩,೦೦೦ ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ವಿತ್ತೀಯ ಕೊರತೆಯನ್ನು ಜಿಎಸ್‌ಟಿಯ ಶೇ.೨೯ರಷ್ಟು ನಿಯಂತ್ರಣದಲ್ಲಿಡಲಾಗಿದೆ.
ಇದು ರಾಜ್ಯದ ಆರ್ಥಿಕ ಶಿಸ್ತನ್ನು ಪ್ರತಿಬಿಂಬಿಸುತ್ತದೆ. ಯುವಜನತೆಗೆ ಈ ಬಜೆಟ್ ಹೊಸ ಭರವಸೆ ನೀಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಸಂಚಾರ ದಟ್ಟಣೆ ನಿವಾರಿಸಲು ಸುರಂಗ ಮಾರ್ಗಕ್ಕೆ ೪೦,೦೦೦ ಕೋಟಿ ರೂ. ಮೀಸಲಿಡಲಾಗಿದೆ. ಮೆಟ್ರೋ ೩ನೇ ಹಂತದ ಕಾಮಗಾರಿಗೆ ಅನುದಾನ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಘೋಷಣೆ. ಪ್ರತಿ ಹಳ್ಳಿಯಲ್ಲೂ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಗುರಿ ಹೊಂದಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಗಳ ನವೀಕರಣಕ್ಕೆ ೨,೦೦೦ ಕೋಟಿ ರೂ. ಹಾಗೂ ಗ್ರಾಮೀಣ ಜನರಿಗೆ ಮನೆ ಬಾಗಿಲಿಗೆ ಚಿಕಿತ್ಸೆ ನೀಡಲು ೧೦೦ ಹೊಸ ಸಂಚಾರ ಕ್ಲಿನಿಕ್‌ಗಳನ್ನು ಆರಂಭಿಸುವುದು ; ಉತ್ತಮ ಯೋಜನೆ. ಈ ಬಜೆಟ್ ಕೃಷಿ,ಕೈಗಾರಿಕೆ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಕರ್ನಾಟಕವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವ ದಿಕ್ಸೂಚಿಯಾಗಿದೆ.
-ಎ. ಎಂ.ಅಂಜಲಿ, ಅರಸಿನಕೆರೆ ಗ್ರಾಮ, ಜಯಪುರ ಹೋಬಳಿ, ಮೈಸೂರು ತಾ.
ಚೆನ್ನೈ: ತಮಿಳು ನಟ ದಳಪತಿ ವಿಜಯ್ ವೈಯಕ್ತಿಕ ಜೀವನದಲ್ಲಿನ ಬಿರುಗಾಳಿ ಈಗ ನ್ಯಾಯಾಲಯದ ಅಂಗಳದಲ್ಲಿ ಹೊಸ ತಿರುವು ಪಡೆದುಕೊಂಡಿದೆ. 27…
ಟೆಹರಾನ್: ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿದಿದ್ದು, ಇಸ್ರೇಲ್ ನಡೆಸಿದ ಹೊಸ ಅಲೆಯ ವೈಮಾನಿಕ ದಾಳಿಗೆ ಟೆಹರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ…
ಮೈಸೂರು: ಮೈಸೂರು ತಾಲೂಕು ವರುಣಾ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿರುವ ದಂಡಿಮಾರಮ್ಮ ದೇವಾಲಯವನ್ನು ಸಿಎಂ ಸಿದ್ದರಾಮಯ್ಯ ಅವರಿಂದು ಉದ್ಘಾಟಿಸಿದರು. ದೇವಸ್ಥಾನಕ್ಕೆ ತೆರಳಿ…
ಮೈಸೂರು: ಗ್ರಾಹಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಿಬ್ಬಂದಿ ಸುರಕ್ಷತೆ ಮತ್ತು ಎಚ್ಚರಿಕೆಯ ಕೆಲಸ ಅತ್ಯಂತ ಮುಖ್ಯವಾಗಿದೆ…
ಮಂಡ್ಯ: ಎಲ್ಲರೂ ಸಾಮರಸ್ಯದಿಂದ ಮತ್ತು ಸಮಾನತೆಯಿಂದ ಬದುಕಬೇಕು ಮತ್ತು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು. ಇದರಿಂದ ಮಾದರಿ ಸಮಾಜ…
ಮೈಸೂರು: ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳ ಮಿತಿಯಲ್ಲೇ…