ಓದುಗರ ಪತ್ರ
ವಿಶ್ವವಿಖ್ಯಾತ ಮೈಸೂರಿನ ದಸರಾದಲ್ಲಿ ಕಳೆದ ಬಾರಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸಾವಿರಾರು ರೂಪಾಯಿಗಳ ದರ ನಿಗದಿಪಡಿಸಿ ಗೋಲ್ಡನ್ ಪಾಸ್‌ಗಳನ್ನು ವಿತರಣೆ ಮಾಡಿದ್ದರು. ಪಾಸ್‌ಗಳನ್ನು ಪಡೆದಿದ್ದರೂ ಜಗ ಇಲ್ಲ ಬೇರೆ ಕಡೆ ಹೋಗಿ ಎಂದು ಹೇಳಿ ಪೊಲೀಸರು ಕಳುಹಿಸಿದ್ದರು ಎಂಬ ವಿಷಯ ತಿಳಿದ್ದದ್ದೆ. ಇಂತಹ ಘಟನೆಗಳನ್ನು ನೋಡಿದವರ ಮನಸ್ಸಿಗೆ ನೋವಾಗಿತ್ತು, ಆದರೆ ಪಾಸ್ ಪಡೆದವರಿಗೆ ಇನ್ನೇಷ್ಟು ನೋವಿವಾಗಿರುವುದಿಲ್ಲ? ದುಡ್ಡು ಕೊಟ್ಟು ಪಾಸ್ ಪಡೆದಿದ್ದರೂ ದಸರಾ ನೋಡದೆ ಹಿಂತಿರುಗಿದ ಅನೇಕರು ಅಧಿಕಾರಿಗಳ ವರ್ತನೆಗೆ ಬೇಸರಪಟ್ಟುಕೊಂಡಿದ್ದಾರೆ ಎಂದು ಹೇಳಬೇಕಾಗಿಲ್ಲ.
ಈ ಬಾರಿಯಾದರೂ ದಸರಾ ಮತ್ತು ದಸರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಬರುವವರಿಗೆ ಎಷ್ಟು ಆಸನದ ವ್ಯವಸ್ಥೆ ಇರುತ್ತದೇಯೋ ಅಷ್ಟೇ ಪಾಸ್‌ಗಳನ್ನು ವಿತರಣೆ ಮಾಡುವುದು ಮೈಸೂರು ಜಿಡಳಿತದ ಕರ್ತವ್ಯವಾಗಬೇಕಿದೆ. ಪಾಸ್ ಪಡೆದು ದಸರಾ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಸಿಗದೆ ವಂಚಿತರಾದರೆ ಅವರ ಹಣವನ್ನು ಹಿಂತಿರುಗಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು. ಇದು ಕಷ್ಟದ ಕೆಲಸವೆಂಬುದು ಗೊತ್ತು. ಹಾಗಾಗಿ ದುಡ್ಡುಕೊಟ್ಟು ಪಾಸ್ ಪಡೆದವರ ಹಿತ ಕಾಯುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ.
-ನಾಗೇಶ್, ಮೈಸೂರು
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…