ಓದುಗರ ಪತ್ರ
ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ಜಾರಿಗೆ ತಂದಿರುವ ಸರ್ಕಾರದ ನಿರ್ಧಾರ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಅತ್ಯಂತ ಸ್ವಾಗತಾರ್ಹ.
ಇಲ್ಲಿಯವರೆಗೆ ರಾಜ್ಯದ ಸುಮಾರು ೬೦೦೦ಕ್ಕೂ ಹೆಚ್ಚು ಪಿಯು ಕಾಲೇಜುಗಳಲ್ಲಿ ಆಯಾ ಸಂಸ್ಥೆಗಳೇ ಪ್ರಶ್ನೆಪತ್ರಿಕೆ ಸಿದ್ಧಪಡಿಸುತ್ತಿದ್ದರಿಂದ ಕಠಿಣತೆ ಮತ್ತು ಮೌಲ್ಯಮಾಪನದಲ್ಲಿ ಶೇ. ೫೦ರಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಕೆಲವು ಖಾಸಗಿ ಕಾಲೇಜುಗಳು ಅತಿ ಸುಲಭ ಪ್ರಶ್ನೆಗಳನ್ನು ನೀಡಿ ಕೃತಕ ಫಲಿತಾಂಶ ತೋರಿಸುತ್ತಿದ್ದರೆ, ಗ್ರಾಮೀಣ ವಿದ್ಯಾರ್ಥಿಗಳು ಕಠಿಣ ಪ್ರಶ್ನೆಗಳಿಂದ ಹಿನ್ನಡೆ ಅನುಭವಿಸುತ್ತಿದ್ದರು.
ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಡಿಜಿಟಲ್ ಪ್ರಶ್ನೆಪತ್ರಿಕೆ ಪೂರೈಸುವುದರಿಂದ ಎಲ್ಲಾ ೭ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಮಾನ ನ್ಯಾಯ ದೊರೆಯಲಿದೆ. ಇದು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯ ಭಯ ಹೋಗಲಾಡಿಸಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಪೂರಕವಾಗಿದೆ. ಆದರೆ ಮೌಲ್ಯಮಾಪನ ಕಾಲೇಜು ಹಂತದ ನಡೆಯುವುದರಿಂದ ಅಂಕಗಳ ಏರುಪೇರು ತಡೆಯಲು ಮಂಡಳಿಯು ಕಟ್ಟುನಿಟ್ಟಿನ ಮಾದರಿ ಉತ್ತರ ಮತ್ತು ತಪಾಸಣಾ ವ್ಯವಸ್ಥೆಯನ್ನು ಜರಿಗೊಳಿಸುವುದು ಅತ್ಯಗತ್ಯ.
– ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಆಧಾರಸ್ತಂಭವಾಗಿದ್ದು, ಗ್ರಾಮೀಣ ಭಾಗದ ಬಡಜನತೆಯ ಮನೆ ಮನೆಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಲ್ಲಿ, ಇವರ ಪಾತ್ರ…
ಮೈಸೂರಿನ ಕೆಆರ್‌ಎಸ್ ರಸ್ತೆಯ ವೆಂಕಟರಮಣ ಸ್ವಾಮಿ ದೇವಸ್ಥಾನ ಎದುರಿನ ಸರ್ಕಾರಿ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯು ಮುಚ್ಚುವ ಹಂತಕ್ಕೆ…
ಸಹನ ಪುರುಷೋತ್ತಮ್ ಕೇವಲ ಮನರಂಜನೆಯ ಉತ್ಸವವಾಗದಿರಲಿ ದಸರೆ ಯಶಸ್ಸಿಗೆ ಶ್ರಮಿಸುವ ಕೈಗಳಿಗೆ ಗೌರವ ಸಿಗಬೇಕು ಮೈಸೂರು ದಸರಾ ಎಂದರೆ ಕೇವಲ…
ರಾಜರಾಂ ತಲ್ಲೂರು ಅಮೆರಿಕದ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಲಾಬಿ ಕಂಪೆನಿಗಳ ಬಳಕೆ ಅಮೆರಿಕದ ಆಡಳಿತ ವ್ಯವಸ್ಥೆ, ಸಂಸತ್ ಮತ್ತಿತರ…
ಮಂಜುಕೋಟೆ ದಲಿತ ಸಮುದಾಯದ ಆಕಾಂಕ್ಷಿಗಳಲ್ಲಿ ಅಸಮಾಧಾನ; ಬಿಸಿಎಂ ಎ ವರ್ಗದಲ್ಲಿ ಸಂತಸ ಎಚ್.ಡಿ. ಕೋಟೆ: ತಾಲ್ಲೂಕಿನ ಇತಿಹಾಸದಲ್ಲೇ ಪರಿಶಿಷ್ಟ ಜಾತಿಗೆ…