ಓದುಗರ ಪತ್ರ
೨೦೨೫-೨೬ರ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು, ಇದೇ ಏಪ್ರಿಲ್ ೧೧ರಿಂದ ಮೇ ೨೮ರವರೆಗೆ ಸರ್ಕಾರ ಬೇಸಿಗೆ ರಜೆಯನ್ನು ಮಕ್ಕಳಿಗೆ ನೀಡಿದೆ.
ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್, ಟೀವಿ ಹಾಗೂ ಕಂಪ್ಯೂಟರ್ಗಳು ಪ್ರತಿ ಮನೆ, ಮನಗಳನ್ನು ಆವರಿಸಿವೆ. ಮಕ್ಕಳು ರಜಾ ಅವಧಿಯಲ್ಲಿ ಇವುಗಳ ಮುಂದೆ ಕೂತು ಗೇಮ್‌ಗಳನ್ನು ಆಡುತ್ತಾ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಇದು ತಪ್ಪ ಬೇಕು. ರಜಾ ಅವಧಿಯಲ್ಲಿ ಮಕ್ಕಳಿಗೆ ಒಳಾಂಗಣ ಕ್ರೀಡೆಗಳಿಗಿಂತ ಹೊರಾಂಗಣ ಕ್ರೀಡೆ ಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಗಾಳಿಪಟ ಆಡಿಸುವುದು, ಗೋಲಿ, ಗಜಗ, ಚಿನ್ನಿದಾಂಡು, ಸಂಬಂಧಿಕರ ಊರುಗಳಿಗೆ ಸುತ್ತಾಟ, ಅಜ್ಜ ಅಜ್ಜಿಯ ರಿಂದ ಕಥೆ ಕಲಿಯುವುದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ, ಜಾತ್ರೆ ಹಾಗೂ ಉತ್ಸವಗಳಲ್ಲಿ ನಾಟಕವನ್ನು ನೋಡಿ ಸಂಭ್ರಮಿಸುವುದು…
ಈ ರೀತಿಯ ಹತ್ತು ಹಲವು ಕಾರ್ಯ ಚಟುವಟಿಕೆಗಳಲ್ಲಿ ಮಕ್ಕಳು ರಜಾ ಅವಧಿಯಲ್ಲಿ ಭಾಗಿಯಾದರೆ ಮಕ್ಕಳು ಒತ್ತಡ ರಹಿತವಾಗಿ, ಮೋಜಿನ ಜೊತೆ ರಜೆಯ ಮಜವನ್ನೂ ಅನುಭವಿಸಿದಂತಾಗುತ್ತದೆ. ಮಕ್ಕಳ ಚಿಂತನಾಲಹರಿ ಬದಲಾಗಿ ಅವರ ಜ್ಞಾನ ಮತ್ತಷ್ಟು ವಿಸ್ತಾರವಾಗುತ್ತದೆ. ಸ್ನೇಹ ಬಾಂಧವ್ಯ ಹೆಚ್ಚಾಗಿ ಮಕ್ಕಳ ಏಕಾಂಗಿತನ ದೂರವಾಗುತ್ತದೆ. ಇಷ್ಟೇ ಅಲ್ಲದೆ ಕೂಡು ಕುಟುಂಬದ ಜೊತೆ ಅನೇಕ ಸಂಬಂಧಿಕರ ಊರುಗಳಿಗೆ ಹೋಗುವುದರ ಪರಿಣಾಮ ವಿವಿಧ ಸ್ಥಳಗಳ ಪರಿಚಯ ಹಾಗೂ ವಿವಿಧ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳು ಮತ್ತು ಬದುಕಿನ ವೃತ್ತಿಗಳ ಅರಿವು ಮಕ್ಕಳಿಗೆ ಸಿಕ್ಕಂತಾಗುತ್ತದೆ. ಈ ರೀತಿ ಈ ಬಾರಿಯ ಬೇಸಿಗೆರಜಾ ಅವಧಿಯಲ್ಲಿ ಮಕ್ಕಳ ಮನಸ್ಸನ್ನು ಪ್ರ-ಲ್ಲಿತಗೊಳಿಸಲು ಪ್ರತಿಯೊಬ್ಬ ಪೋಷಕರೂ ಮುಂದಾಗಬೇಕಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್ ಪಾವತಿಗಳ ಮೇಲಿನ…
ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…
ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…
ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…
ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…
ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…