ಹುಣಸೂರು: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ನಂಜಾಪುರದಲ್ಲಿ ನಡೆದಿದೆ.
ನಂಜಾಪುರದ ವಸಂತಕುಮಾರ್ ಪುತ್ರ ರಂಜಿತ್ (32) ಮೃತರು. ಇವರಿಗೆ ತಂದೆ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.
ರಂಜಿತ್ ಕೆ.ಆರ್.ನಗರದಲ್ಲಿ ಶಾಖೆ ಹೊಂದಿರುವ ಖಾಸಗಿ ಮೈಕ್ರೋ ಫೈನಾನ್ ನಲ್ಲಿ ಮನೆ ನಿರ್ಮಾಣಕ್ಕಾಗಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸುಸ್ತಿಯಾಗಿದ್ದಾರೆ ಎಂದು ಎರಡು ಬಾರಿ ಮನೆಗೆ ಬೀಗ ಜಡಿದಿದ್ದರು. ಕೆಲ ದಿನಗಳ ಹಿಂದೆ 3 ಲಕ್ಷ ರೂ. ಸೇರಿದಂತೆ ಈವರೆಗೆ 8 ಲಕ್ಷ ರೂ. ಪಾವತಿಸಿದ್ದರು.
ಈ ಬಾರಿ ಮಳೆ ಕೊರತೆಯಿಂದ ಜಮೀನಿನಲ್ಲಿ ಬೆಳೆಯೂ ಕೈ ಹತ್ತಿರಲಿಲ್ಲ. ಮತ್ತೆ ಮೈಕ್ರೋ ಫೈನಾನ್ ನವರು ಬಂದು ಮನೆ ಬೀಗ ಹಾಕುತ್ತಾರೆ. ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಆತಂಕದಿಂದ ರಂಜಿತ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗಾಗ ಪತ್ನಿ ಹತ್ತಿರ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಬಿಳಿಕೆರೆ ಠಾಣಾ ಪೊಲೀಸರಿಗೆ ಪತಿ ರಂಜಿತ್ ಸಾವಿಗೆ ಮೈಕ್ರೋ ಫೈನಾನ್ಸ್‌ನವರ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ದೂರು ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…
ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…
ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…
ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…
ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…