Andolana originals

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ

ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ ಯಾವುದೂ ಇರುವುದಿಲ್ಲ. ಎಲ್ಲರೂ ಸಮಾನ ಅವಕಾಶ ತತ್ವಕ್ಕನುಗುಣವಾಗಿ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಾರೆ. ಈ ಸಮಾಜದಲ್ಲಿ ಮನುಷ್ಯ ಸಮಾಜದ ಕೇಂದ್ರ ಬಿಂದುವಾಗಿದ್ದು, ಸಮಾಜವು ವ್ಯಕ್ತಿಯ ವೈಯಕ್ತಿಕ ಹಿತಾಸಕ್ತಿಗೆ ಬದಲಾಗಿ ಸಾಂಕ ಹಿತಾಸಕ್ತಿಯನ್ನು ಗುರಿಯಲ್ಲಿಟ್ಟುಕೊಂಡು ನಡೆಯುತ್ತದೆ. ಸರ್ವೋದಯ ಸಮಾಜದಲ್ಲಿ ನೈತಿಕ ಮಾನವನ ನಿರ್ಮಾಣ ಸರ್ವೋದಯದ ಮುಖ್ಯ ಗುರಿಯಾಗಿದೆ.

ಮಹಾತ್ಮ ಗಾಂಧಿಜಿಯವರು ಭಾರತದ ಸ್ವಾತಂತ್ರ್ಯ ಚಳವಳಿಯ ಅಗ್ರಮಾನ್ಯ ನಾಯಕರು. ೧೯೧೯ರಿಂದ ೧೯೪೭ರವರೆಗಿನ ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕತ್ವವನ್ನು ಗಾಂಧಿಜಿ ವಹಿಸಿದ್ದರು. ಹೀಗಾಗಿ, ಆ ಕಾಲವನ್ನು ಗಾಂಧಿ ಯುಗ ಎಂದು ಕರೆಯಲಾಗಿದೆ. ಸಶಸ ಬಲದಿಂದ ರಾಜ್ಯ ಕಟ್ಟಿದ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಸತ್ಯಾಗ್ರಹ ಎಂಬ ಆತ್ಮಬಲದಿಂದ ಮಣಿಸಿದ ಧಿರೋತ್ತಮರು ಗಾಂಧಿಜಿ. ಅವರ ಜೀವನದ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಪೀಳಿಗೆ ಮುನ್ನಡೆಯಬೇಕಿದೆ.

ಸಂಜನ ಕೆ.ಎನ್., ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಕಲ್ಲಹಳ್ಳಿ, ಮಂಡ್ಯ(ದಕ್ಷಿಣ ವಲಯ)

 

ಗಾಂಧಿಜಿ ಆದರ್ಶಗಳ ಪ್ರಸ್ತುತತೆ ಹೆಚ್ಚಾಗಿದೆ: 

ನನ್ನ ದೃಷ್ಟಿಯಲ್ಲಿ ಗಾಂಧಿಜಿಯವರ ಮಹತ್ವ ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಲ್ಲ. ಅವರು ಸ್ವಚ್ಛತೆ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಅಸ್ಪೃಶ್ಯತೆ ನಿರ್ಮೂಲನೆ, ಧಾರ್ಮಿಕ ಸಾಮರಸ್ಯ ಹಾಗೂ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ಪ್ರತಿಯೊಬ್ಬರಿಗೂ ಆದರ್ಶವಾಗಿವೆ. ನಮಗೆ ಕಷ್ಟ ಬಂದಾಗಲೂ ಸತ್ಯದ ಮಾರ್ಗವನ್ನು ಬಿಡಬಾರದು ಎಂಬ ಪಾಠವನ್ನು ಅವರು ಕಲಿಸಿದ್ದಾರೆ. ಇಂದಿನ ಸಮಾಜದಲ್ಲಿ ಗಾಂಧೀಜಿಯವರ ಆದರ್ಶಗಳ ಅಗತ್ಯ ಇನ್ನಷ್ಟು ಹೆಚ್ಚಾಗಿದೆ. ನನ್ನ ಕಣ್ಣಲ್ಲಿ ಗಾಂಧಿಜಿ ಎಂದರೆ ಭಾರತದ ಹೆಮ್ಮೆ, ವಿಶ್ವದ ಶಾಂತಿಯ ಸಂಕೇತ ಮತ್ತು ಮಾನವೀಯ ಮೌಲ್ಯಗಳ ಶಾಶ್ವತ ಆದರ್ಶ. ಅವರ ಜೀವನ ಮತ್ತು ತತ್ವಗಳು ಎಂದೆಂದಿಗೂ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ದಾರಿದೀಪವಾಗಿವೆ.

ತನೋಜ್ ಎನ್., ೯ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಹಾಲಹಳ್ಳಿ ಬಡಾವಣೆ, ಮಂಡ್ಯ 

ಉತ್ತಮ ಜೀವನ ಮೌಲ್ಯ ಕಲಿಸಿದ ಗಾಂಧೀಜಿ: ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವು ಸರಳತೆ, ವಿನಯ, ಸಹನೆ, ಕರುಣೆ ಮತ್ತು ಸೇವಾ ಮನೋಭಾವದಿಂದ ಕೂಡಿತ್ತು. ಅವರು ಕೇವಲ ರಾಜಕೀಯ ನಾಯಕರಾಗಿರದೇ ಸಮಾಜ ಸುಧಾರಕ, ಚಿಂತಕ, ಲೇಖಕ ಹಾಗೂ ಮಹಾನ್ ಮಾನವತಾವಾದಿಯಾಗಿದ್ದರು. ಅವರ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಯುವಜನತೆ ಅವರ ಜೀವನವನ್ನು ಮಾದರಿಯಾಗಿ ತೆಗೆದುಕೊಳ್ಳಬೇಕಾಗಿದೆ. ಮಹಾತ್ಮ ಗಾಂಧೀಜಿ ಅವರು ಭಾರತದ ಇತಿಹಾಸದಲ್ಲಿ ಅಜರಾಮರ ವ್ಯಕ್ತಿಯಾಗಿದ್ದಾರೆ. ಅವರು ನಮಗೆ ಸ್ವಾತಂತ್ರ್ಯವನ್ನು ಮಾತ್ರ ತಂದುಕೊಡಲಿಲ್ಲ. ಉತ್ತಮ ಜೀವನ ನಡೆಸುವ ಮೌಲ್ಯಗಳನ್ನು ಕಲಿಸಿದರು. ಅವರ ಜೀವನವು ಸತ್ಯ, ಅಹಿಂಸೆ, ತ್ಯಾಗ, ಶಿಸ್ತು, ಪ್ರಾಮಾಣಿಕತೆ ಮತ್ತು ದೇಶ ಪ್ರೇಮದ ಜೀವಂತ ಉದಾಹರಣೆಯಾಗಿದೆ. ಅವರು ತೋರಿಸಿದ ಮಾರ್ಗವು ಇಂದಿಗೂ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಪ್ರೇರಣೆಯಾಗಿದೆ.

ಅನುಷ ಆರ್., ೧೦ನೇ ತರಗತಿ, ಜೆಎಸ್‌ಎಸ್ ಪ್ರೌಢಶಾಲೆ, ರಾಘವೇಂದ್ರ ನಗರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

3 hours ago

ಓದುಗರ ಪತ್ರ: ದೀಪಾಲಂಕಾರ ಸಮಿತಿ ಕೆಲಸಕ್ಕೆ ಒಂದು ಸಲಾಂ

ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…

3 hours ago

ಓದುಗರ ಪತ್ರ: ‘ಈ ಮಾತು’ ಶೋಭೆ ತರುವುದೇ?

‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…

3 hours ago

ದಾರಿ ತೋರಿದ ರಾಘವೇಂದ್ರ?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…

3 hours ago

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …

3 hours ago

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

3 hours ago