Andolana originals

ಓದುಗರ ಪತ್ರ: ಕೆಪಿಎಸ್‌ಸಿ ಹಗರಣ; ಯುವಜನರ ಭವಿಷ್ಯಕ್ಕೆ ಕೊಳ್ಳಿ

ಕೆಪಿಎಸ್‌ಸಿ ಭ್ರಷ್ಟಾಚಾರದ ಕುರಿತು ಇತ್ತೀಚಿನ ಸುದ್ದಿ ಕಣ್ಣು ತೆರೆಸುವಂತಿದೆ. ದಕ್ಷ ಅಧಿಕಾರಿಗಳನ್ನು ಆರಿಸಬೇಕಾದ ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರೇ ಅಮಾನತ್ತುಗೊಂಡಿರುವುದು ಇಡೀ ವ್ಯವಸ್ಥೆಗೆ ಅಂಟಿದ ಕಪ್ಪು ಚುಕ್ಕೆ. ವರ್ಷಗಟ್ಟಲೆ ಹಗಲಿರುಳೂ ಶ್ರಮಿಸುವ ಲಕ್ಷಾಂತರ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯವನ್ನು ಇಂತಹ ಅಕ್ರಮಗಳು ಬಲಿ ತೆಗೆದುಕೊಳ್ಳುತ್ತಿವೆ. ಹಗರಣಗಳು ನಡೆದಾಗಲೆಲ್ಲ ಕೇವಲ ತೇಪೆ ಹಚ್ಚುವ ತನಿಖಾ ಸಮಿತಿಗಳನ್ನು ರಚಿಸಿ ಕೈತೊಳೆದುಕೊಳ್ಳುವ ಪರಿಪಾಠ ನಿಲ್ಲಬೇಕು. ಹಣ ಮತ್ತು ರಾಜಕೀಯ ಬಲ ಇರುವವರಿಗಷ್ಟೇ ಹುದ್ದೆಗಳು ಸಿಗುತ್ತವೆ ಎಂಬ ಭಾವನೆ ಮೂಡಿದರೆ, ಇಡೀ ಪ್ರಜಾಪ್ರಭುತ್ವದ ಮೇಲೆಯೇ ಜನರಿಗೆ ಜುಗುಪ್ಸೆ ಉಂಟಾಗುತ್ತದೆ. ಸರ್ಕಾರವು ರಾಜಕೀಯ ಹಿತಾಸಕ್ತಿ ಬದಿಗಿಟ್ಟು, ಯುಪಿಎಸ್‌ಸಿ ಮಾದರಿಯಲ್ಲಿ ಪಾರದರ್ಶಕ ಡಿಜಿಟಲ್ ಸುರಕ್ಷತೆ ಹಾಗೂ ಕಠಿಣ ಸುಧಾರಣೆಗಳನ್ನು ತರ ಬೇಕು. ಭ್ರಷ್ಟಾಚಾರದ ಮೂಲಕ ಬರುವ ಅಧಿಕಾರಿಗಳಿಂದ ಪ್ರಾಮಾಣಿಕ ಜನಸೇವೆ ಎಂದಿಗೂ ಅಸಾಧ್ಯ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

ಆಂದೋಲನ ಡೆಸ್ಕ್

Recent Posts

ದಾರಿ ತೋರಿದ ರಾಘವೇಂದ್ರ?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…

4 mins ago

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …

18 mins ago

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

31 mins ago

ಎಚ್.ಡಿ.ಕೋಟೆಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ

ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳು; ಪ್ರತಿನಿತ್ಯ ನೂರಾರು ಮಂದಿ ಭಾಗಿ ಎಚ್.ಡಿ.ಕೋಟೆ: ನವರಾತ್ರಿ ಉತ್ಸವ ಮತ್ತು…

42 mins ago

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ ದಾಳಿ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…

20 hours ago