ಓದುಗರ ಪತ್ರ
ಇತ್ತೀಚೆಗೆ ಡೇಟಿಂಗ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಮೊಬೈಲ್‌ಗಳಲ್ಲಿ ಒಂದೇ ಕ್ಲಿಕ್‌ನಿಂದ ಅನ್ಯರೊಂದಿಗೆ ಪರಿಚಯ, ಸಂಭಾಷಣೆ ಹಾಗೂ ಸಂಬಂಧ ಬೆಳೆಸುವ ಅವಕಾಶ ಸಿಗುತ್ತಿದೆ. ಆದರೆ ಇದರ ಪರಿಣಾಮಗಳು ಬಹಳ ಗಂಭೀರವಾಗಿವೆ.
ಬಹುತೇಕ ಯುವಕರು ಈ ಆಪ್‌ಗಳಲ್ಲಿ ಅತಿಯಾಗಿ ತೊಡಗಿಸಿಕೊಂಡುನೈಜ ಜೀವನದಿಂದ ದೂರವಾಗುತ್ತಿದ್ದಾರೆ. ಸುಳ್ಳು ಪ್ರೊಫೈಲ್‌ಗಳು, ಮೋಸಗಳು, ಬ್ಲಾಕ್‌ಮೇಲ್‌ಗಳು ಹಾಗೂ ಆನ್‌ಲೈನ್ ಅಪರಾಧಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಡೇಟಿಂಗ್ ಆಪ್‌ಗಳ ಮೂಲಕ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಯುವಕರು- ಯುವತಿಯರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಹಲವಾರು ಯುವತಿ ಯರ ಶೋಷಣೆ ನಡೆಯುತ್ತಿದೆ.
ಈ ಆಪ್‌ಗಳು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಜೊತೆಗೆ ಏಕಾಂತ, ಆತಂಕ ಮತ್ತು ಮಾನಸಿಕ ಕ್ಷೋಭೆಯನ್ನು ಉಂಟು ಮಾಡಿ,ಯುವ ಸಮುದಾಯದಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನಂಬಿಕೆ ಮತ್ತು ಗೌರವದ ಬಾಂಧವ್ಯ ಹದಗೆಡುತ್ತಿದೆ. ಆದ್ದರಿಂದ ಸರ್ಕಾರವು ಡೇಟಿಂಗ್ ಆಪ್‌ಗಳನ್ನು (ಟೆಂಡರ್, ಬ್ಲೂಕಾಟ್ ಇತ್ಯಾದಿ) ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು, ಸಾಧ್ಯವಾದರೆ ಸಂಪೂರ್ಣ ನಿಷೇಧಿಸಬೇಕು. ಯುವ ಪೀಳಿಗೆಗೆ ಸುರಕ್ಷಿತ ಮತ್ತು ಸನ್ಮಾರ್ಗದ ದಾರಿ ತೋರುವುದು ಸರ್ಕಾರದ ಜವಾಬ್ದಾರಿ.
-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…