Andolana originals

ಪ್ರಾಂಶುಪಾಲರು, ವಾರ್ಡನ್, ಶಿಕ್ಷಕ ಅಮಾನತ್ತು

ತಗಡೂರು ವಸತಿ ಶಾಲೆಯ ಮಕ್ಕಳ ಪ್ರತಿಭಟನೆಗೆ ಸಂದ ಜಯ

ನಂಜನಗೂಡು: ತಾಲ್ಲೂಕಿನ ತಗಡೂರಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳ ನ್ಯಾಯಯುತವಾದ ಪ್ರತಿಭಟನೆಗೆ ಮಣಿದ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವಸತಿ ನಿಲಯದ ಪ್ರಾಂಶು ಪಾಲರಾದ ವಸಂತ ಕುಮಾರಿ, ವಸತಿ ನಿಲಯದ  ಪಾಲಕ ಮಹದೇವಪ್ಪ ಹಾಗೂ ಗಣಿತ ಉಪನ್ಯಾಸಕ ಮಂಜುನಾಥ ಅವರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದು, ಅತಿಥಿ ಉಪನ್ಯಾಸಕ ಗುರುಸ್ವಾಮಿಯವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನರ ಸ್ವಕ್ಷೇತ್ರ ವರುಣ ವ್ಯಾಪ್ತಿಯಲ್ಲಿನ ವಸತಿ ಶಾಲೆಯ ಮಕ್ಕಳೇ ಪ್ರಾಧ್ಯಾಪಕರು ಪ್ರಾಂಶುಪಾಲರ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಮೂವರನ್ನು ಅಮಾನತ್ತುಗೊಳಿಸಿದೆ.

ಉಪವಿಭಾಗಾಧಿಕಾರಿ ಆಶಪ್ಪ ಹಾಗೂ ತಹಸಿಲ್ದಾರ್ ಶಿವಕುಮಾರ ಕ್ಯಾಸನೂರು ಕಳಿಸಿದ ತುರ್ತು ವರದಿಯ ಮೇರೆಗೆ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕ ಕಾಂತರಾಜು, ತಗಡೂರಿನ ವಸತಿ ಶಾಲೆಯ ಪ್ರಾಂಶುಪಾಲರಾದ ವಸಂತ ಕುಮಾರಿ, ನಿಲಯ ಪಾಲಕ ಮಹದೇವಪ್ಪ, ಗಣಿತ ಶಿಕ್ಷಕ ಮಂಜುನಾಥ ಅವರನ್ನು ಅಮಾನತ್ತು ಗೊಳಿಸಿದ್ದಾರೆ.

ತಾತ್ಕಾಲಿಕವಾಗಿ ಶಾಲೆಯ ಹಿರಿಯ ಉಪನ್ಯಾಸಕರಿಗೆ ಅಧಿಕಾರ ವಹಿಸಿಕೊಳ್ಳುವಂತೆ ಸೋಮವಾರವೇ ಆದೇಶ ಹೊರಡಿಸಿದೆ. ಮಕ್ಕಳ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಒಳಗಾಗಿರುವ ಅತಿಥಿ ಉಪನ್ಯಾಸಕ ಗುರುಸ್ವಾಮಿಯವರನ್ನು ಶಾಲೆಯ ಕರ್ತವ್ಯ ಬಿಡುಗಡೆಗೊಳಿಸುವಂತೆ ಮೌಖಿಕ ಸೂಚನೆಯೂ ಹಿರಿಯ ಅಧಿಕಾರಿಗಳಿಂದ ಬಂದಿದೆ ಎನ್ನಲಾಗಿದೆ.

ಆಂದೋಲನ ಡೆಸ್ಕ್

Recent Posts

ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ

ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ…

4 hours ago

ಕೆಪಿಎಸ್‌ಸಿ ಅಕ್ರಮ | 1.52 ಕೋಟಿ ಹಣ ಪಾವತಿ ಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…

4 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ನೆರಳಿನಂತಿದ್ದ ಕಸ್ತೂರ ಬಾ

ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…

4 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗೊಂದಲಗೊಳಿಸುತಿದ್ದ ಹಲವು ಸಂದೇಹಗಳು

ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…

5 hours ago

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

24 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

1 day ago