ಬೆಂಗಳೂರು : ಹಾಲಿನ ದರ ಏರಿಕೆ ಕುರಿತು ರಾಜ್ಯದಲ್ಲಿ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ, ಟೀ ಸೇರಿದಂತೆ ತಿಂಡಿ-ತಿನಿಸುಗಳ ಬೆಲೆ ಮತ್ತೊಮ್ಮೆ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ.
ಹಾಲಿನ ದರ ಏರಿಕೆಯ ಪ್ರಮಾಣವೇ ಹೋಟೆಲ್‌ಗಳ ಮುಂದಿನ ನಿರ್ಧಾರಕ್ಕೆ ಪ್ರಮುಖ ಅಂಶವಾಗಲಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ. ಪ್ರತಿ ಲೀಟರ್‌ಗೆ ₹2–3ರಷ್ಟು ಮಾತ್ರ ಹಾಲಿನ ದರ ಹೆಚ್ಚಾದರೆ, ಅದರ ಹೊರೆ ಗ್ರಾಹಕರ ಮೇಲೆ ಹಾಕದೆ ಹೋಟೆಲ್‌ಗಳು ನಿರ್ವಹಿಸಬಹುದು. ಆದರೆ ₹4–5 ಅಥವಾ ಅದಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದರೆ ಕಾಫಿ, ಟೀ, ತಿಂಡಿ ಮತ್ತು ಊಟದ ದರ ಪರಿಷ್ಕರಿಸುವುದು ಅನಿವಾರ್ಯವಾಗಬಹುದು ಎಂಬುದು ಹೋಟೆಲ್ ಉದ್ಯಮದ ನಿಲುವು.
ಇದು ಹೋಟೆಲ್‌ಗಳ ಬೆಲೆ ಏರಿಕೆಯ ಮೊದಲ ಹಂತವಲ್ಲ. ಸೆಪ್ಟೆಂಬರ್ ಆರಂಭದಲ್ಲೇ ಬೆಂಗಳೂರಿನ ಕೆಲವು ಹೋಟೆಲ್‌ಗಳು ಮತ್ತು ಟೀ ಅಂಗಡಿಗಳಲ್ಲಿ ಕಾಫಿ-ಟೀ ದರವನ್ನು ₹2–3ರಷ್ಟು ಹೆಚ್ಚಿಸಿದ್ದವು. ಸಕ್ಕರೆ, ಬೆಲ್ಲ ಸೇರಿದಂತೆ ವಿವಿಧ ಕಚ್ಚಾ ವಸ್ತುಗಳ ಬೆಲೆ ಏರಿಕೆಯನ್ನು ಇದಕ್ಕೆ ಕಾರಣವಾಗಿ ಹೋಟೆಲ್ ಉದ್ಯಮದವರು ಉಲ್ಲೇಖಿಸಿದ್ದರು. ಕೆಲವು ಕಡೆ ₹20–30ರಷ್ಟಿದ್ದ ಕಾಫಿ ಅಥವಾ ಟೀ ₹22–33ರ ಮಟ್ಟಕ್ಕೆ ಏರಿದ್ದರೆ, ಸಣ್ಣ ಹೋಟೆಲ್‌ಗಳಲ್ಲಿ ₹15ರ ಪಾನೀಯ ₹16–18ರಷ್ಟಾಗಿದೆ ಎಂದು ವರದಿಯಾಗಿತ್ತು.
ಹೀಗಾಗಿ ಈಗ ಹಾಲಿನ ಬೆಲೆಯಲ್ಲೂ ದೊಡ್ಡ ಪ್ರಮಾಣದ ಏರಿಕೆ ನಡೆದರೆ, ಗ್ರಾಹಕರಿಗೆ ಒಂದೇ ತಿಂಗಳಲ್ಲಿ ಮತ್ತೊಂದು ಬೆಲೆ ಏರಿಕೆಯ ಹೊರೆ ಬೀಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಜಾಗತಿಕ ವಿದ್ಯಮಾನಗಳು ಹಾಗೂ ಗ್ಯಾಸ್ ಪೂರೈಕೆಯಲ್ಲಿ ಉಂಟಾದ ಅಭಾವದ ಸಂದರ್ಭದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳು ದರ ಪರಿಷ್ಕರಣೆ ಮಾಡಿದ್ದವು. ಈ ಹಿಂದೆ ಜಾಗತಿಕ ಸಂಘರ್ಷಗಳ ಸಂದರ್ಭದಲ್ಲಿ ವಾಣಿಜ್ಯ ಅಡುಗೆ ಅನಿಲ (LPG Gas) ಕೊರತೆ ಮತ್ತು ತೀವ್ರ ಬೆಲೆ ಏರಿಕೆಯಾದಾಗ ಹೋಟೆಲ್‌ಗಳು ತಿಂಡಿ, ಊಟ ಹಾಗೂ ಪಾನೀಯಗಳ ದರವನ್ನು ಹೆಚ್ಚಿಸಿದ್ದವು. ಆ ದರ ಏರಿಕೆ ಮುಂದುವರಿದಿರುವುದರಿಂದ, ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ಹೋಟೆಲ್ ಮಾಲೀಕರು ಇಷ್ಟಪಡುತ್ತಿಲ್ಲ. ಹೀಗಾಗಿ ಹಾಲಿನ ದರ ಏರಿಕೆಯನ್ನು ನಿಯಂತ್ರಿಸುವಂತೆ ಕೋರಿ ಹೋಟೆಲ್ ಸಂಘಟನೆಯು ಶೀಘ್ರದಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಕೆಲಸಗಾರರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಲಕ್ಷಾಂತರ ಜನರು ಹೋಟೆಲ್ ಟೀ-ಕಾಫಿಯನ್ನೇ ಅವಲಂಬಿಸಿದ್ದಾರೆ. ಹಾಲಿನ ದರ ಏರಿಕೆಯಾದರೆ ಹೋಟೆಲ್ ನಿರ್ವಹಣಾ ವೆಚ್ಚ ಹೆಚ್ಚಾಗುವುದರಿಂದ ಮಾಲೀಕರು ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗುತ್ತದೆ. ಈಗಾಗಲೇ ತರಕಾರಿ, ಅಡುಗೆ ಎಣ್ಣೆ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ತಂಗೆಟ್ಟಿರುವ ಜನಸಾಮಾನ್ಯರಿಗೆ, ಕಾಫಿ-ಟೀ ದರ ಏರಿಕೆಯಾದರೆ ದಿನನಿತ್ಯದ ಜೇಬಿನ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.
ಸಾಧ್ಯವಿರುವ ಹೊಸ ದರಗಳ ಅಂದಾಜು:
ಪ್ರಸ್ತುತ ₹10 ಇರುವ ಟೀ/ಕಾಫಿ → ₹12
ಪ್ರಸ್ತುತ ₹12 ಇರುವ ದರ → ₹15
ಪ್ರಸ್ತುತ ₹17 ಇರುವ ದರ → ₹20
ಪ್ರಸ್ತುತ ₹20 ಇರುವ ದರ → ₹22 ರಿಂದ ₹23
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಕೀಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳ ತನಿಖೆ ಮತ್ತಷ್ಟು ವಿಸ್ತರಿಸಿದ್ದು, ಪ್ರಶ್ನೆಪತ್ರಿಕೆ…
ಡಾ.ಪ್ರಮೀಳಾದೇವಿ ಬಿ.ಕೆ ಗಾಂಧೀಜಿಯ ನೆರಳಿ ನಂತಿದೂ ಅವರ ಚಿಂತನೆಗಳ, ಪ್ರಯೋಗ ಗಳನ್ನು ತಿದ್ದಿ ತೀಡಿದ ಪತ್ನಿ ಕಸ್ತೂರ ಬಾ. ಬಾಲ್ಯ…
ಬ್ಯಾರಿಸ್ಟರ್ ಎನ್ನಿಸಿಕೊಳ್ಳುವುದು ಸುಲಭವಾಗಿತ್ತು. ಆದರೆ ವಕೀಲಿ ವೃತ್ತಿಯನ್ನು ನಡೆಸುವುದು ಕಷ್ಟವಾಗಿತ್ತು. ನಾನು ಕಾನೂನುಗಳನ್ನೇನೋ ವ್ಯಾಸಂಗ ಮಾಡಿದ್ದೆ. ಅವುಗಳನ್ನು ಕಾರ್ಯ ರೂಪದಲ್ಲಿ…
ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…
ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…