Andolana originals

ನಳನಳಿಸಲಿವೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳು

ಎಚ್.ಎಸ್.ದಿನೇಶ್‌ಕುಮಾರ್

ದಸರಾದಲ್ಲಿ ಚಿತ್ತಾಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ 

 

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಫಲಪುಷ್ಪ ಪ್ರದರ್ಶನ ಕೂಡ ಒಂದು. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ವಿವಿಧ ಜಾತಿಯ ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲಿವೆ.

ನಾಡಹಬ್ಬ ದಸರಾ ಎಂದರೆ ಜನರಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಆಸಕ್ತಿ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಿಸಲು ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಆಗಮಿಸುತ್ತಾರೆ.

ಹೀಗಾಗಿ ದಸರಾ ಹಬ್ಬಕ್ಕೆ ಪೂರಕವಾಗಿ ಒಂದು ತಿಂಗಳುಮುಂಚಿತವಾಗಿಯೇ ಸರ್ವ ಸಿದ್ಧತೆಗಳನ್ನು ದಸರಾ ಉನ್ನತ ಸಮಿತಿ ಆರಂಭಿಸುತ್ತದೆ. ವಸ್ತು ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ಚಲನಚಿತ್ರ ಪ್ರದರ್ಶನ ಹೀಗೆ ಸಾಕಷ್ಟು ಕಾರ್ಯಕ್ರಮಗಳು ಮೈಸೂರಿನಲ್ಲಿ ಜರುಗುತ್ತವೆ. ಇವುಗಳ ಪೈಕಿ ಫಲಪುಷ್ಪ ಪ್ರದರ್ಶನ ಕೂಡ ಪ್ರಮುಖವಾದದ್ದು. ಈ ಹಿಂದೆ ಅರಮನೆ ಪಕ್ಕದಲ್ಲಿಯೇ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಾಡು ಮಾಡಲಾಗುತ್ತಿತ್ತು. ಜಾಗದ ಅಭಾವದಿಂದ ಕೆಲ ವರ್ಷಗಳಿಂದ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ನಗರದ ಪ್ರಮುಖ ಉದ್ದಿಮೆಗಳು, ವಿವಿಧ ಇಲಾಖೆಗಳು ಹಾಗೂ ಪ್ರಮುಖ ಸಂಘ ಸಂಸ್ಥೆಗಳು ಕೂಡ ತಮ್ಮ ಆವರಣದಲ್ಲಿ ಬೆಳೆಯಲಾಗಿರುವ ಅಲಂಕಾರಿಕ ಗಿಡಗಳು, ಹಣ್ಣು, ತರಕಾರಿಗಳ ಗಿಡಗಳನ್ನು ಪ್ರದರ್ಶಿಸಲಿವೆ.

ಇದರ ಜೊತೆಗೆ ತೋಟಗಾರಿಕೆ ಇಲಾಖೆಯೂ ವಸ್ತು ಪ್ರದರ್ಶನದಲ್ಲಿ ಅಲಂಕಾರಿಕ ಗಿಡಗಳನ್ನು ಪ್ರದರ್ಶಿಸಲಿದೆ. ಇದಕ್ಕಾಗಿ ಎರಡು ತಿಂಗಳು ಮುಂಚಿತವಾಗಿಯೇ ಸಿದ್ಧತೆ ನಡೆಸಿದ್ದು, ಕುಪ್ಪಣ್ಣ ಪಾರ್ಕ್ ಆವರಣ ಹಾಗೂ ಕೇಂದ್ರ ಸಸ್ಯಾಗಾರದ ಸುಮಾರು ಮೂರು ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ಪೋಷಣೆ ಮಾಡಲಾಗುತ್ತಿದೆ.

ದಸರಾ ಆರಂಭದ ವೇಳೆಗೆ ಅವು ಪ್ರದರ್ಶನಕ್ಕೆ ಸಿದ್ಧಗೊಳ್ಳಲಿವೆ. ಗಾರ್ಡನರ್‌ಗಳಾದ ಮಹದೇವು ಹಾಗೂ ಸಿದ್ದರಾಜು ನೇತೃತ್ವದಲ್ಲಿ ಸುಮಾರು ೧೦ ಸಿಬ್ಬಂದಿ ೧೫ ಸಾವಿರ ಸಸ್ಯಗಳನ್ನು ಪೋಷಿಸುತ್ತಿದ್ದಾರೆ. ಜೇನಿಯಾ, ತುರೇನಿಯಾ, ಕಲೆಂಡೋ, ಕಾಸ್‌ಮಸ್, ಡಯಂತಸ್, ಸಾಲ್ವೆ, ಸೇವಂತಿಗೆ, ಚೆಂಡುಮಲ್ಲಿಗೆ, ಸೆಲೇಷಿಯಾ, ಕೋಲಂಸೋ, ನೀಲ್‌ಬಾಲ್ ಸಮ್, ಡೇಲಿಯಾ, ಪಿಟೋನಿಯಾ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಭಿನ್ನ ತಳಿಯ ಸಸಿಗಳನ್ನು ಪೋಷಣೆ ಮಾಡಲಾಗುತ್ತಿದ್ದು, ದಸರಾ ವೇಳೆ ಅವುಗಳು ನೋಡುಗರನ್ನು ಸೆಳೆಯಲಿವೆ. ಇದಲ್ಲದೆ, ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಉದ್ದಿಮೆಗಳು ಕೂಡ ತಮ್ಮ ಆವರಣದಲ್ಲಿ ಸಿದ್ಧಗೊಳಿಸಿರುವ ಸುಮಾರು ೨೦ ಸಾವಿರಕ್ಕೂ ಹೆಚ್ಚು ಅಲಂಕಾರಿಕ ಗಿಡಗಳನ್ನು ಪ್ರದರ್ಶನದಲ್ಲಿ ಇಡಲಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಲಿವೆ.

ಆಂದೋಲನ ಡೆಸ್ಕ್

Recent Posts

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ

ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…

7 mins ago

ಮೈಸೂರಿನಲ್ಲಿ ನಾಳೆ ಇಂದ ಮೂರು ದಿನ ದೇಸಿ ಎಣ್ಣೆ ಮೇಳ : ಮೇಳೈಸಲಿದೆ ಸಾಂಪ್ರದಾಯಿಕ ಎಣ್ಣೆ

ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…

2 hours ago

ಬಿ-ಖಾತಾಗಳಿಗೂ ʼಎ-ಖಾತಾʼ ಭಾಗ್ಯ ; ಸಂಪುಟ ಸಭೆಯಲ್ಲಿ ನಿರ್ಣಯ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…

3 hours ago

ಮಂಡ್ಯದಲ್ಲಿ ಕೆಂಪೇಗೌಡರ ಬೃಹತ್‌ ಪ್ರತಿಮೆ : ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಕೆತ್ತನೆ ಜವಾಬ್ದಾರಿ

ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…

3 hours ago

ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಚಿಂತನೆ : ಸಂಸದ ಯದುವೀರ್‌

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…

4 hours ago

ಗೃಹಲಕ್ಷ್ಮಿ ಹಣ ಶೀಘ್ರ ಸಂದಾಯ : ಸಚಿವೆ ಹೆಬ್ಬಾಳಕರ್‌

ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…

4 hours ago