Andolana originals

ಇಂದು ಪೂವಮ್ಮ ಮಂಗಳೂರಿಗೆ ಆಗಮನ

ನವೀನ್ ಡಿಸೋಜ

ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಪೂವಮ್ಮ ಸಾಧನೆ

ಮಡಿಕೇರಿ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕೊಡಗು ಮೂಲದ ಮಾಚೆಟ್ಟಿರ ಪೂವಮ್ಮ ಅವರು ಚಿನ್ನದ ಪದಕ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ನಡೆದಿದ್ದ ಮಿಕ್ಸ್ ರಿಲೇಯಲ್ಲಿ ಬೆಳ್ಳಿ ಪಡೆದಿದ್ದ ಪೂವಮ್ಮ, ಇದೀಗ ಮಹಿಳೆಯರ ೪+೪೦೦ ಮೀ. ರಿಲೇಯಲ್ಲಿ ಅವರನ್ನು ಒಳಗೊಂಡ ಭಾರತ ತಂಡ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕದ ಸಾಧನೆ ಮಾಡಿದೆ.

೩ ನಿ. ೨೯ ಸೆ. ೬೯ ಮಿಲಿ ಸೆಕೆಂಡ್‌ನಲ್ಲಿ ರಿಲೇ ಪೂರೈಸಿ ಭಾರತ ಮೊದಲ ಸ್ಥಾನ ಗಳಿಸಿದೆ. ೨ನೇ ಸ್ಥಾನವನ್ನು ಬಹ್ರೇನ್ ಹಾಗೂ ೩ನೇ ಸ್ಥಾನವನ್ನು ಚೀನಾ ಪಡೆದುಕೊಂಡಿದೆ. ರಿಲೇಯಲ್ಲಿ ಭಾರತ ಮಹಿಳೆಯರ ತಂಡದ ಕಿರಣ್ ಅವರು ಓಟ ಪ್ರಾರಂಭಿಸಿದ್ದು, ಪೂವಮ್ಮ ಅವರಿಗೆ ರಿಲೇ ಬ್ಯಾಟನ್ ಹಸ್ತಾಂತರಿಸುವಾಗ ತಂಡ ೩ನೇ ಸ್ಥಾನದಲ್ಲಿತ್ತು. ಪೂವಮ್ಮ ಅವರು ವೇಗವಾಗಿ ಕ್ರಮಿಸಿ ಮೊದಲ ಸ್ಥಾನವನ್ನು ಪಡೆದು ತಂಡದ ಪ್ರಾಚಿ ಅವರಿಗೆ ಬ್ಯಾಟನ್ ಹಸ್ತಾಂತರಿಸಿದರು. ನಂತರ ವಿದ್ಯಾ ಅವರು ರಿಲೇ ಪೂರೈಸುವಾಗಲೂ ಮೊದಲನೇ ಸ್ಥಾನವನ್ನೇ ಕಾಯ್ದಿರಿಸಿಕೊಳ್ಳುವ ಮೂಲಕ ಭಾರತಕ್ಕೆ ಚಿನ್ನ ಲಭಿಸಿತು.

ಏಷ್ಯನ್ ಗೇಮ್ಸ್ ನಲ್ಲಿ ಪೂವಮ್ಮ ಅವರು ೨೦೧೪ರ ಮಹಿಳೆಯರ ರಿಲೇಯಲ್ಲಿ ಹಾಗೂ ೨೦೧೮ರ ಮಹಿಳೆಯರ ಹಾಗೂ ಮಿಕ್ಸ್ ರಿಲೇಯಲ್ಲಿ ಚಿನ್ನ ಪಡೆದಿದ್ದರು. ೨೦೧೪ರಲ್ಲಿ ೪೦೦ ಮೀ. ಓಟದಲ್ಲಿ ಕಂಚಿನ ಪದಕ ಪಡೆದಿದ್ದರು. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಬೆಳ್ಳಿ ಹಾಗೂ ಇದೀಗ ಚಿನ್ನ ಪಡೆದಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಗಳಿಸಿದ್ದು ೬ನೇ ಪದಕವಾಗಿದೆ.

ಕೂಡಗು ಜಿಲ್ಲೆಯ ಗೋಣಿಕೊಪ್ಪದ ರಾಜು ಗಣಪತಿ ಹಾಗೂ ಜಾನಕಿ ಅವರ ಪುತ್ರಿಯಾಗಿರುವ ಪೂವಮ್ಮ, ಮಂಗಳೂರಿನಲ್ಲಿ ಕೇರಳ ಮೂಲದ ಜಿತಿನ್ ಎಂಬವರನ್ನು ವಿವಾಹವಾಗಿ ನೆಲೆಸಿದ್ದಾರೆ. ಸಹೋದರ ಎಂ.ಆರ್.ಮಂಜು ಕೂಡ ಅಥ್ಲೀಟ್ ಆಗಿದ್ದಾರೆ. ಸದ್ಯ ಸ್ಪೋರ್ಟ್ಸ್ ಕೋಟಾದಲ್ಲಿ ಎಲ್‌ಐಸಿಯಲ್ಲಿ ಉದ್ಯೋಗದಲ್ಲಿರುವ ಮಂಜು ಉಡುಪಿಯಲ್ಲಿ ನೆಲೆಸಿದ್ದಾರೆ.

ಈ ಸಂಬಂಧ ‘ಆಂದೋಲನ’ದೊಂದಿಗೆ ಸಂತಸ ಹಂಚಿಕೊಂಡಿರುವ ಎಂ.ಆರ್.ಪೂವಮ್ಮ ಸಹೋದರ ಎಂ.ಆರ್. ಮಂಜು ಅವರು, ಬಹಳ ಖುಷಿಯಾಗುತ್ತಿದೆ. ೩ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡು ಮೂರರಲ್ಲೂ ಮೆಡಲ್ ಕೂಡ ಪಡೆದಿದ್ದಾರೆ. ಪೂವಮ್ಮಗೆ ೩೬ ವರ್ಷ ವಯಸ್ಸಾಗಿದೆ. ಅವಳೊಟ್ಟಿಗೆ ಓಡಿದವರು ೨೨, ೨೩ ವರ್ಷದವರು. ಈ ವಯಸ್ಸಿನಲ್ಲಿಯೂ ಸಾಧನೆ ಮಾಡಿರುವುದರಿಂದ ಖುಷಿಯಾಗುತ್ತಿದೆ ಎಂದರು.

” ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ನೀಡುವ ಪ್ರೋತ್ಸಾಹ ಸಾಕಾಗುತ್ತಿಲ್ಲ. ಬಹುಮಾನದ ವಿಚಾರದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶೇ.೭೦ರಷ್ಟು ವ್ಯತ್ಯಾಸ ಕಂಡುಬರುತ್ತದೆ. ನಮ್ಮ ಕರ್ನಾಟಕ ಕ್ರೀಡಾಪಟುಗಳಿಗೆ ಬಹುಮಾನ ಮೊತ್ತ ಹೆಚ್ಚಳ ಮಾಡಬೇಕು.”

-ಎಂ.ಆರ್.ಮಂಜು, ಅಥ್ಲೀಟ್ ಹಾಗೂ ಪೂವಮ್ಮ ಸಹೋದರ

ಪೂವಮ್ಮರ ಪ್ರಮುಖ ಸಾಧನೆಗಳು: 

ಭಾರತೀಯ ೪೪೦೦ ಮೀ. ರಿಲೇ ತಂಡಗಳ ಸದಸ್ಯರಾಗಿ ಪೂವಮ್ಮ ೨೦೧೬ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು

೨೦೧೪ ಮತ್ತು ೨೦೧೮ರ ಏಷ್ಯನ್ ಕ್ರೀಡಾಕೂಟ ಮತ್ತು ೨೦೧೩ ಮತ್ತು ೨೦೧೭ರ ಏಷ್ಯನ್ ಚಾಂಪಿಯನ್‌ಶಿಪ್ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರು

ವೈಯಕ್ತಿಕವಾಗಿ ೨೦೧೩ರಲ್ಲಿ ಬೆಳ್ಳಿ ಪದಕ ಮತ್ತು ೨೦೧೪ರಲ್ಲಿ ಕಂಚಿನ ಪದಕವನ್ನು ಪಡೆದಿದ್ದರು

ಅಥ್ಲೆಟಿಕ್ಸ್‌ಗೆ ನೀಡಿದ ಕೊಡುಗೆಗಳಿಗಾಗಿ ಅವರು ೨೦೧೫ರಲ್ಲಿ ‘ಅರ್ಜುನ ಪ್ರಶಸ್ತಿ’ಯನ್ನು ಪಡೆದಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

2 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

2 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

2 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

2 hours ago

ಪರಿಸರ ಸ್ನೇಹಿ ಸಮಾಜ ಮನೆಯಿಂದಲೇ ಆರಂಭವಾಗಲಿ

ಲೀಲಾ ಶಿವಕುಮಾರ್, ಪರಿಸರವಾದಿ ಸ್ವಚ್ಛ ನಗರಿ ಮೈಸೂರು ಮಾತ್ರವಲ್ಲ, ಇಡೀ ದೇಶವೇ ಇಂದು ಕಸದ ಸಮಸ್ಯೆಯನ್ನು ಎದುರಿಸುತ್ತಿದೆ. ರಸ್ತೆ, ಬಡಾವಣೆ,…

2 hours ago

ಮತ್ತೊಮ್ಮೆ ನ್ಯಾಯಾಲಯದತ್ತ ಮಲ್ಟಿಪ್ಲೆಕ್ಸ್ ಸಂಘಟನೆ, ಇತರರು

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಚಿತ್ರಮಂದಿರಗಳಲ್ಲಿ ಪ್ರವೇಶ ದರ ಗರಿಷ್ಟ ಮೊತ್ತ ೨೦೦ ರೂ. ಅಸಾಧ್ಯವೇ? ಕನ್ನಡ ಚಿತ್ರರಂಗ ಮತ್ತು…

3 hours ago