ಹೊಡೆದು ಬಡಿದವರು ಸರೆಂಡರ್ ಆಗಲಿ ಎಂದು ಚಿತ್ರದುರ್ಗದ ಹುಡುಗರ ವಾದ
ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮನವೊಲಿಸಲು ಶತಪ್ರಯತ್ನ
15 ನಿಮಿಷಗಳ ನಂತರ ನಾನು ಪಿಎಸ್ಐ ವಿನಯ್ ಅವರಿಗೆ ಫೋನ್ ಮಾಡಿದಾಗ, ಫೋನ್ ರಿಸೀವ್ ಮಾಡಿದ ಅವರು ಏನು ಎಂದು ವಿಚಾರಿಸಿದರು. ಆಗ ನಾನು ನನಗೆ ಗೊತ್ತಿರುವ ಹುಡುಗರ ಕಡೆಯಿಂದ ಒಂದು ಘಟನೆ ನಡೆದಿದೆ. ಅದಕ್ಕೆ ಪರಿಹಾರ ಏನು ಎಂದು ಕೇಳಿದೆ. ಅವರು ಏನು ಘಟನೆ ಎಂದು ಕೇಳಿದರು. ಆಗ ನಾನು ಹಣದ ವ್ಯವಹಾರಕ್ಕೋಸ್ಕರ ನನಗೆ ಗೊತ್ತಿರುವ ಮೂವರ ಹುಡುಗರ ಮಧ್ಯೆ ಗಲಾಟೆಯಾಗಿದ್ದು, ಆ ಗಲಾಟೆಯಲ್ಲಿ ಒಬ್ಬನಿಗೆ ಹೊಡೆದು ಆತ ಸತ್ತುಹೋಗಿದ್ದಾನೆ. ಈಗ ಏನು ಮಾಡಬೇಕು ಎಂದು ಕೇಳಿದೆ.
ಹಲ್ಲೆ ಮಾಡಿದ್ದು ಯಾರು? ಯಾವ ಪೊಲೀಸ್ ಠಾಣೆ ಸರಹದ್ದು? ಪಿಎಸ್ಐ ವಿನಮ್ರಿಂದ ಪ್ರಶ್ನೆಗಳ
ಸುರಿಮಳೆ: ಆಗ ಪಿಎಸ್ಐ ವಿನಯ್ ಅವರು, ಯಾರು? ಎಲ್ಲಿ? ಯಾವ ಸ್ಥಳ? ಯಾವ ಪೊಲೀಸ್ ಠಾಣೆ ಸರಹದ್ದು? ಯಾವುದರಿಂದ ಹಲ್ಲೆ ಮಾಡಿದ್ದಾರೆ? ಒಂದೇ ಸಮನೆ ಹಲವಾರು ಪ್ರಶ್ನೆ ಕೇಳಿದರು. ಆಗ ನಾನು ನನಗೆ ಅಷ್ಟೊಂದು ವಿವರ ಗೊತ್ತಿಲ್ಲ, ಸತ್ತು ಹೋಗಿದ್ದಾನೆ ಎಂದು ಮಾತ್ರ ಗೊತ್ತು, ಅದಕ್ಕೆ ಏನಾದರು ಸಲಹೆ ನೀಡಿ ಎಂದು ಕೇಳಿದೆ. ಅದಕ್ಕೆ ಪಿಎಸ್ಐ ವಿನಯ್ ಅವರು, ‘ಸಂಪೂರ್ಣ ವಿವರ ನೀಡದೇ ಇದ್ದರೆ, ಏನೂ ಹೇಳಲು ಆಗುವುದಿಲ್ಲ. ಸಿಂಪಲ್ ಆಗಿ ಹೇಳಬೇಕು ಎಂದರೆ, ಘಟನೆ ಹಾಗೂ ಅಪರಾಧ ತೀವ್ರ ಸ್ವರೂಪದ್ದಾಗಿದ್ದು, ಕೂಡಲೇ ಹೋಗಿ ಘಟನೆ ನಡೆದ ಸರಹದ್ದಿನ ಪೊಲೀಸ್
ಠಾಣೆಗೆ ಸರೆಂಡರ್ ಆಗಬೇಕು ಎಂದು ತಿಳಿಸಿದರು.
ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದವರು ನೀವು, ನಿಮ್ಮಲ್ಲೇ ಒಬ್ಬರು ಸರೆಂಡರ್ ಆಗಬೇಕು: ಆಗ ನಾನು ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ಮತ್ತೆ ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿ, ಪಿಎಸ್ಐ ವಿನಯ್ ಅವರ ಕರೆಯನ್ನು ಕಟ್ ಮಾಡಿದೆ. ನಂತರ, ಆ ಹುಡುಗರು ಇದ್ದ ಸ್ಥಳಕ್ಕೆ ಬಂದು ನಾಗರಾಜ್ ಮತ್ತು ವಿನಯ್ ಅವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ನನಗೆ ಗೊತ್ತಿರುವ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದಾಗ, ಅವರು ಕೂಡಲೇ ಪೊಲೀಸರಿಗೆ ಸರೆಂಡರ್ ಆಗಲು ತಿಳಿಸಿದ್ದಾರೆ ಎಂದೆ. ಆಗ ನಾಗರಾಜ್ ಅವರು ರಾಘವೇಂದ್ರ ಜೊತೆಗೆ ಒಂದು ಬಾರಿ ಮಾತನಾಡುತ್ತೇನೆ ಎಂದು ಹೇಳಿ, ಆತನನ್ನು ನಾವು ಇರುವ ಕಡೆಗೆ ಕರೆದು ರಾಘವೇಂದ್ರ ಅವರನ್ನು ಉದ್ದೇಶಿಸಿ ನಿಮ್ಮಲ್ಲಿ ಒಬ್ಬರು ಸರೆಂಡರ್ ಆಗಲೇಬೇಕು. ಏಕೆಂದರೆ ನೀವು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆದುಕೊಂಡು ಬಂದಿದ್ದೀರಿ. ಇಲ್ಲದಿದ್ದರೆ ತೊಂದರೆಯಾಗುತ್ತದೆ. ಈ ಬಗ್ಗೆ ವಿಚಾರ ಮಾಡಿ ತಿಳಿದುಕೊಂಡಿದ್ದೇವೆ ಎಂದರು.
ನಾವು ಆತನನ್ನು ಮುಟ್ಟಿಲ್ಲ, ಹೊಡೆದಿಲ್ಲ. ಹೊಡೆದವರು ಸರೆಂಡರ್ ಆಗಲಿ:
ಅದಕ್ಕೆ ರಾಘವೇಂದ್ರ ‘ನಾವು ಆತನನ್ನು ಮುಟ್ಟಿಯೂ ಇಲ್ಲ, ಹೊಡೆದೂ ಇಲ್ಲ. ಯಾರು ಆತನನ್ನು ಹೊಡೆದು ಬಡಿದು ಮಾಡಿದ್ದಾರೆ, ಅವರೇ ಸರೆಂಡರ್ ಆಗಲಿ ಎಂದರಲ್ಲದೆ, ನನ್ನನ್ನು ಉದ್ದೇಶಿಸಿ ‘ಅಣ್ಣ ನೀವೇ ಹೇಳಿ, ನಾನೇನಾದರೂ ರೇಣುಕಾಸ್ವಾಮಿಗೆ ಹೊಡೆದಿದ್ದೀನ? ಎಂದು ಕೇಳಿದಾಗ, ನಾನು ಇಲ್ಲ ಎಂದೆ. ನಂತರ ನಾನು ಮತ್ತು ನಾಗರಾಜ್, ನಿಮಗೆ ಸ್ಟೇಷನ್ ಬೇಲ್ ಮಾಡಿಸುತ್ತೇವೆ, ನಿಮ್ಮ ಮನೆಗೆ ಬೇಕಾದಷ್ಟು ಹಣ ಕೊಡುತ್ತೇವೆ, ತಲೆಕೆಡಿಸಿಕೊಳ್ಳಬೇಡಿ ಎಂದು ರಾಘವೇಂದ್ರ ಅವರ ಮನ ಒಲಿಸಿದೆವು. ಅದಾದ 10 ನಿಮಿಷಗಳ ನಂತರ ಯೋಚನೆ ಮಾಡಿಕೊಂಡು ಬಂದ ರಾಘವೇಂದ್ರ ಸರೆಂಡರ್ ಆಗಲು ಒಪ್ಪಿದ.
ದರ್ಶನ್ಗೆ ಯಾವುದಾದರು ತೊಂದರೆಯಾಗುತ್ತದೆಯೇ: ಆಗ ನಾನು ಮತ್ತೆ ಸೈಡ್ಗೆ ಬಂದು ಪಿಎಸ್ಐ ವಿನಯ್ ಅವರಿಗೆ ವಾಟ್ಸಪ್ ಕರೆ ಮಾಡಿ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ ಎಂಬವರು ಹಣಕಾಸಿನ ವಿಷಯ ವಾಗಿ ಒಬ್ಬ ವ್ಯಕ್ತಿಯನ್ನು ಚಿತ್ರ ದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಹೊಡೆದಿದ್ದಾರೆ, ಆತ ಸತ್ತುಹೋಗಿ ದ್ದಾನೆ. ಇದರಿಂದ ದರ್ಶನ್ ಗೆಯಾವುದಾದರು ತೊಂದರೆಯಾಗುತ್ತದೆಯೇ ಎಂದು ಕೇಳಿದೆ.
ಆಗ ಪಿಎಸ್ಐ ವಿನಯ್ ಅವರು ಸರಹದ್ದಿನ ಪೊಲೀಸ್ ಠಾಣೆಗೆ ಸರೆಂಡರ್ ಆದ ನಂತರ, ವ್ಯಕ್ತಿಯನ್ನು ವಿಚಾರಣೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ಮತ್ತೆ ಪೊಲೀಸರ ವಶಕ್ಕೆ ಪಡೆದು 3-4 ದಿನಗಳ ಕಾಲ ವಿಚಾರಣೆ ಮಾಡಿ ಮುಗಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ. ಅಲ್ಲಿಂದ ಅವರನ್ನು ಜೈಲಿಗೆ ಕಳುಹಿಸ ಲಾಗುತ್ತದೆ. 3-4 ತಿಂಗಳಲ್ಲಿ ಬೇಲ್ ಆಗುತ್ತದೆ ಎಂದು ಕಾನೂನಿನ ಪ್ರಕ್ರಿಯೆಯನ್ನು ನನಗೆ ವಿವರಿಸಿದರು.
ಠಾಣೆಗೆ ಸರೆಂಡರ್ ಆದರೆ ಹೊಡೆಯುತ್ತಾರಾ ಎಂದು ಪಿಎಸ್ಐ ವಿನಯ್ ಅವರನ್ನು ಕೇಳಿದಾಗ, ಅವರು ಎಲ್ಲ ಪ್ರಕರಣದಲ್ಲೂ ಹೊಡೆಯುವುದಿಲ್ಲ, ಅದು ಬೇರೆ ತರಹ ಇರುತ್ತದೆ. ನೀವು ಮೊದಲು ಆ ವ್ಯಕ್ತಿಗೆ ಸರೆಂಡರ್ ಆಗಲು ತಿಳಿಸಿ ಎಂದರಲ್ಲದೆ, ಘಟನೆ ಯಾವ ಠಾಣೆಯ ಸರಹದ್ದಿನಲ್ಲಿ ಘಟನೆ ನಡೆದಿದೆ ಎಂದು ನನ್ನನ್ನು ಕೇಳಿದರು. ನಾನು ತಿಳಿದುಕೊಂಡು ಹೇಳುತ್ತೇನೆ ಎಂದು ಹೇಳಿ ಕರೆಯನ್ನು ಕಟ್ ಮಾಡಿದೆ.
3-4 ಜನ ಸರೆಂಡರ್ ಆಗಲೇಬೇಕು, ಇಲ್ಲದಿದ್ದರೆ ತೊಂದರೆ:
ನಂತರ ನಾನು, ವಿನಯ್, ನಾಗರಾಜ್ ಅವರೊಂದಿಗೆ ರಾಘವೇಂದ್ರ ಅವರು ಇರುವ ಜಾಗಕ್ಕೆ ಬಂದು, ನಾನು ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ, ಯಾರು ಮಾಡಿದ್ದಾರೋ ಅವರು ಸರೆಂಡರ್ ಆಗಲೇಬೇಕು. 3-4 ತಿಂಗಳಲ್ಲಿ ಬೇಲ್ ಆಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ 3-4 ಜನ ಸರೆಂಡರ್ ಆಗಲೇಬೇಕು, ಇಲ್ಲದಿದ್ದರೆ ತೊಂದರೆ ಆಗುತ್ತದೆ ಎಂದು ಹೇಳಿದೆ. ಮುಂದುವರಿದು ವಿನಯ್, ನಾಗರಾಜ್ ಮತ್ತು ರಾಘವೇಂದ್ರ ಅವರಿಗೆ ಯಾರಿಗಾದರೂ ಇನ್ನಿಬ್ಬರಿಗೆ ಸರೆಂಡರ್ ಆಗಲು ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ಆಗ ವಿನಯ್, ‘ಆಯಿತು ಇಬ್ಬರನ್ನು ಸಿದ್ಧಪಡಿಸೋಣ, ಆದರೆ ಯಾವುದೇ ಕಾರಣಕ್ಕೂ ಆರ್.ಆರ್.ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಘಟನೆ ನಡೆದಿದೆ ಎಂದಾಗಬಾರದು’ ಎಂದು ಮತ್ತೆ ಖಡಾಖಂಡಿತವಾಗಿ ಹೇಳಿದರು. ಈ ವೇಳೆ ನಾಗರಾಜ್, ನಂದೀಶ್ ಎಲ್ಲಿ ಎಂದು ಹುಡುಕಾಡಿದರು. ಆದರೆ ಆಗ ನಂದೀಶ್ ಅಲ್ಲಿಗೆ ಬಂದಿರಲಿಲ್ಲ. ನಾನು ನಾಗರಾಜ್ ಅವರನ್ನು ಉದ್ದೇಶಿಸಿ ನಾನು ನಿಮಗೆ ಆಗಲೇ ಕಾಲ್ ಮಾಡಿದ್ದೆ, ಆದರೆ ನೀವು ಫೋನ್ ರಿಸೀವ್ ಮಾಡಲಿಲ್ಲ ಎಂದೆ. ಅದಕ್ಕೆ ಅವರು ಏನು ವಿಷಯ ಎಂದು ಕೇಳಿದರು. ಆಗ ನಾನು ದರ್ಶನ್ ಮನೆಗೆ ಹೋಗಿ ಅವರಿಗೆ ರೇಣುಕಾಸ್ವಾಮಿ ಮೃತಪಟ್ಟ ವಿಷಯವನ್ನು ತಿಳಿಸಿ ದಾಗ, ಅವರು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿ ದರು. ಆಗ ನನಗೆ ಭಯವಾಗಿ ಅದನ್ನು ಹಂಚಿಕೊಳ್ಳಲು ನಿಮಗೆ ಫೋನ್ ಮಾಡಿದ್ದೆ ಎಂದು ತಿಳಿಸಿದೆ. ಆಗ ನಾಗರಾಜ್, ‘ನನ್ನ ಮೊಬೈಲ್ನ್ನು ಕಾರಿನಲ್ಲಿ ಬಿಟ್ಟು ಬಿಟ್ಟಿದ್ದೆ, ಬೇಜಾರು ಮಾಡಿಕೊಳ್ಳಬೇಡಿ’ ಎಂದರು.
ಹುಡುಗರನ್ನು ಸರೆಂಡರ್ ಮಾಡಿಸುತ್ತೇವೆ, ನೀವು ತಲೆಕೆಡಿಸಿಕೊಳ್ಳಬೇಡಿ:
ನಂತರ ನಾನು ವಿನಯ್, ದೀಪಕ್, ನಾಗರಾಜ್ ಮತ್ತು ಲಕ್ಷ್ಮಣ್ ಎಲ್ಲರೂ ಸೇರಿ ಈ ರೀತಿ ಒಬ್ಬ ವ್ಯಕ್ತಿಯನ್ನು ಸರೆಂಡರ್ ಮಾಡಿಸುತ್ತೇವೆ, ನೀವೇನು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಲು ದರ್ಶನ್ ಅವರ ಮನೆಗೆ ಹೋದೆವು. ನಾವೆಲ್ಲರೂ ಮನೆಯೊಳಗೆ ಹೋದಾಗ, ಹಾಲ್ನಲ್ಲಿ ಕುಳಿತಿದ್ದ ದರ್ಶನ್ ನಮ್ಮನ್ನೆಲ್ಲ
ನೋಡಿ ಏನಾಯಿತು ಎಂದು ಕೇಳಿದರು. ಆಗ ನಾಗರಾಜ್, ‘ನಾನು ಮೈಸೂರು ಕಡೆ ಹೊರಟಿದ್ದಾಗ ರೇಣುಕಾಸ್ವಾಮಿ ಸತ್ತುಹೋಗಿದ್ದಾನೆ ಎಂದು ನನಗೆ ಕರೆ ಬಂದಿದ್ದರಿಂದ ವಾಪಸ್ ಬಂದೆ ಎಂದರು. ವಿನಯ್ ಕೂಡ ‘ನನಗೂ ಏನು ಗೊತ್ತಿಲ್ಲ, ನಾನು ನಿಮ್ಮನ್ನು(ದರ್ಶನ್) ಬಿಟ್ಟು ಮನೆಗೆ ಹೋಗು ತ್ತಿರುವಾಗ, ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂದು ಶೆಡ್ ಕಡೆಯಿಂದ ಫೋನ್ ಬಂತು. ಆಗ ಟೋಯಿಂಗ್ ಗೆ ಹೋಗಿದ್ದ ದೀಪಕ್ ಮತ್ತು ನಾನು ವಾಪಸ್ಸು ಶೆಡ್ಗೆ ಬಂದು ನೋಡಿದಾಗ, ರೇಣುಕಾಸ್ವಾಮಿ ಮೃತ ಪಟ್ಟಿರುವುದು ಗೊತ್ತಾಯಿತು’ ಎಂದರು.
ಅಂದಾಜು 30 ಲಕ್ಷ ರೂಪಾಯಿ ಖರ್ಚಾಗುತ್ತದೆ: ಆಗ ನಾಗರಾಜ್, ‘ರಾಘವೇಂದ್ರನಿಗೆ ಸರೆಂಡರ್ ಆಗಲು ಒಪ್ಪಿಸಿದ್ದೇವೆ, ನೀವೇನು ತಲೆಕೆಡಿಸಿಕೊಳ್ಳಬೇಡಿ ಎಂದರು. ನಾನು, ನನಗೆ ಪರಿಚಯ ಇರುವ ಪಿಎಸ್ಐ ಒಬ್ಬರೊಂದಿಗೆ ಮಾತನಾಡಿದ್ದೇನೆ. ಅವರು ನನಗೆ ಕಾನೂನಿನ ಪ್ರಕ್ರಿಯೆ ಬಗ್ಗೆ ತಿಳಿಸಿದ್ದಾರೆ. ಏನಾದರು ಮಾಡೋಣ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ದರ್ಶನ್ಗೆ ಹೇಳಿದೆ. ನಂತರ ವಿನಯ್, ‘ನನ್ನ ಕಡೆಯಿಂದ ಇಬ್ಬರು ಹುಡು ಗರು ಸರೆಂಡರ್ ಆಗುತ್ತಾರೆ, ದೀಪಕ್ ಕಡೆಯಿಂದ ಹೇಳಿಸಿ ಇಬ್ಬರು ಹುಡುಗರನ್ನು ಅರೆಂಜ್ ಮಾಡಿ ರಾಘವೇಂದ್ರನೊಂದಿಗೆ ಸರೆಂಡರ್ ಮಾಡಿಸುತ್ತೇನೆ’ ಎಂದು ಹೇಳಿದರು. ಆಗ ನಾನು ದರ್ಶನ್ ಅವರಿಗೆ
ಇದಕ್ಕೆ ಸುಮಾರು ದುಡ್ಡು ಖರ್ಚಾಗುತ್ತದೆ, ಅಂದಾಜು 30 ಲಕ್ಷ ರೂಪಾಯಿ ಬೇಕಾಗುತ್ತದೆ. ಸರೆಂಡರ್ ಆದ ವರ ಮನೆಯ ಖರ್ಚಿಗೆ ಕೊಡಬೇಕು, ವಕೀಲರ ಫೀಜ್ಗೆ ಹಣ ಬೇಕು ಹಾಗೂ ಜೈಲಿನಲ್ಲಿ ಕೂಡ ಅವರಿಗೆ ಖರ್ಚು ಇರುತ್ತದೆ ಎಂದು ಹೇಳಿದೆ.
• ಆರೋಪಿ ನಂ.1-ಪವಿತ್ರಾ ಗೌಡ: ದರ್ಶನ್ ಗೆಳತಿ ಹಾಗೂ ಎರಡನೇ ಪತ್ನಿ(ಪ್ರದೋಷ್ಗೆ 8
ವರ್ಷಗಳ ಪರಿಚಯ)
• ಆರೋಪಿ ನಂ.2-ದರ್ಶನ್: ಚಲನಚಿತ್ರ ನಾಯಕ ನಟ(ಪ್ರದೋಷ್ಗೆ 23 ವರ್ಷಗಳ ಪರಿಚಯ)
• ಆರೋಪಿ ನಂ.3-ಪವನ್: ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ(ಪ್ರದೋಷ್ಗೆ 7 ವರ್ಷಗಳ ಪರಿಚಯ)
• ಆರೋಪಿ ನಂ.4-ರಾಘವೇಂದ್ರ: ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ(ಪ್ರದೋಷ್ ಗೆ ಮೊದಲಿನಿಂದಲೂ ಪರಿಚಯ)
• ಆರೋಪಿ ನಂ.5-ನಂದೀಶ್: ದರ್ಶನ್ ಜೊತೆ
ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಶ್ರೀರಂಗಪಟ್ಟಣ ತಾಲ್ಲೂಕಿನ ಚಾಮಲಾಪುರದ ನಿವಾಸಿಯಾದ ಈತ ಪ್ರದೋಷ್ಗೆ 5 ವರ್ಷಗಳ
ಪರಿಚಯ
• ಆರೋಪಿ ನಂ.6-ಜಗದೀಶ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
• ಆರೋಪಿ ನಂ.7-ಅನುಕುಮಾರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
ಆರೋಪಿ ನಂ.8-ರವಿಶಂಕರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
• ಆರೋಪಿ ನಂ.9-ಧನರಾಜ್: ಪ್ರದೋಷ್ಗೆ 6 ವರ್ಷಗಳ ಪರಿಚಯ
• ಆರೋಪಿ ನಂ.10-ವಿನಯ್: ಪಬ್ ಮಾಲೀಕ
ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ 4 ವರ್ಷಗಳ ಪರಿಚಯ)
ಆರೋಪಿ ನಂ.11: ನಾಗರಾಜ್
-ಮೈಸೂರಿನಲ್ಲಿರುವ ದರ್ಶನ್ ಫಾರಂ ನೋಡಿ ಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ 18 ವರ್ಷಗಳ ಪರಿಚಯ) ಆರೋಪಿ ನಂ.12-ಲಕ್ಷಣ್: ದರ್ಶನ್ ಕಾರು
ಚಾಲಕ
• ಆರೋಪಿ ನಂ.13-ದೀಪಕ್: ಲೋನ್ ಕಟ್ಟದೇ ಇರುವ ವಾಹನಗಳನ್ನು ಜಪ್ತಿ ಮಾಡುವ ಟೀಂನಲ್ಲಿ ಕೆಲಸ (10ನೇ ಆರೋಪಿ ವಿನಯ್ ಮೂಲಕ ಪ್ರದೋಷ್ಗೆ 4 ವರ್ಷಗಳ ಪರಿಚಯ)
• ಆರೋಪಿ ನಂ.14: ಪ್ರದೋಷ್- ಐಟಿ ಕಂಪೆನಿ ಉದ್ಯೋಗಿ ಹಾಗೂ ದರ್ಶನ್ ಸ್ನೇಹಿತ (2003ರಿಂದ ಪರಿಚಯ)
ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…
ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’…
ಶೆಡ್ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…
ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…
ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…