ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು
ಸಹಾಯ ಮಾಡಿ, ಇಲ್ಲದಿದ್ದರೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ದರ್ಶನ್
ನಾನು ದರ್ಶನ್ ಅವರನ್ನು ಉದ್ದೇಶಿಸಿ, ರಾಘವೇಂದ್ರನಿಗೆ ಹೇಳಿ ಹುಡುಗನನ್ನು (ರೇಣುಕಾಸ್ವಾಮಿ) ಕರೆಸಿದ್ದು ಪವನ್ ಎಂದು ಹೇಳಿದಾಗ, ದರ್ಶನ್ ‘ಈ ವಿಷಯ ನನಗೆ ಗೊತ್ತಿತ್ತು. ನಾನೇ ಪವನ್ಗೆ ಹೇಳಿ ಕರೆಸಿದ್ದೆ’ ಎಂದು ಹೇಳಿದರು. ಮತ್ತೆ ಮೌನ.
ಆ ಸಮಯದಲ್ಲಿ ಅಲ್ಲೇ ನಿಂತಿದ್ದ ವಿನಯ್, ‘ನಾನು ಇಬ್ಬರನ್ನು ಸರೆಂಡರ್ ಮಾಡಿಸುತ್ತೇನೆ. ಅದಕ್ಕೆ 10 ಲಕ್ಷ ಖರ್ಚು ಆಗುತ್ತದೆ ಎಂದು ಹೇಳಿದರು. ಆಗ ದರ್ಶನ್, ತಮ್ಮ ರೂಂಗೆ ಹೋಗಿ ಒಂದು ಕಪ್ಪು ಬಣ್ಣದ ಬ್ಯಾಗನ್ನು ತಂದು ನನ್ನ ಕೈಗೆ ಕೊಟ್ಟರು. 10 ಲಕ್ಷ ರೂಪಾಯಿಯನ್ನು ವಿನಯ್ ಅವರಿಗೆ ಕೊಟ್ಟರು. ನನಗೆ ಕೊಟ್ಟ ಕಪ್ಪು ಬಣ್ಣದ ಬ್ಯಾಗನ್ನು ನಾನು ತೆರೆದು ನೋಡಿದಾಗ, ಅದರಲ್ಲಿ ಇನ್ನೊಂದು ಕವರ್ ಇತ್ತು. ಅದನ್ನೂ ತೆರೆದು ನೋಡಿದಾಗ, ಅದರಲ್ಲಿ 500 ರೂ. ಮುಖಬೆಲೆಯ ಕಟ್ಟುಗಳು ಇದ್ದವು. ಎಣಿಕೆ ಮಾಡಿದಾಗ ಒಟ್ಟು 60 ಕಟ್ಟುಗಳು ಇದ್ದವು. ಒಂದೊಂದು ಕಟ್ಟು ತಲಾ 50,000 ರೂ.ನಂತೆ ಕಂಡಿತ್ತು.
ಆ ಸಮಯದಲ್ಲಿ ನನ್ನ ಪಕ್ಕದಲ್ಲಿ ಇದ್ದ ನಾಗರಾಜು ಆ ನನ್ನನ್ನು ಉದ್ದೇಶಿಸಿ ‘ಗುರು ರಾಘವೇಂದ್ರನಿಗೆ 5 ಲಕ್ಷ ರೂಪಾಯಿ ಕೊಟ್ಟು ಬಿಡೋಣ’ ಎಂದರು. ನಂತರ ದರ್ಶನ್ ತಮ್ಮ ರೂಂಗೆ ಹೋಗಿ 5 ಲಕ್ಷ ರೂಪಾಯಿ ತಂದು ಕೊಟ್ಟರು. ಆಸಮಯದಲ್ಲಿ ನಾನು, ನಾಗರಾಜ್, ದೀಪಕ್, ವಿನಯ್ ಹಾಲ್ನಲ್ಲಿ ಇದ್ದೆವು. ಬಾಗಿಲ ಬಳಿ ಇದ್ದ ಲಕ್ಷ್ಮಣ್ ಕೂಡ ಹಾಲ್ಗೆ ಬಂದರು.
ಆ ರೀತಿ ಮಾತನಾಡಬೇಡಿ, ನಾವು ಏನಾದರೂ ಮಾಡುತ್ತೇವೆ:
ನಾವು ಮನೆಯಿಂದ ಹೊರಡುವ ಸಮಯದಲ್ಲಿ ದರ್ಶನ್ ನಮ್ಮನ್ನೆಲ್ಲ ಉದ್ದೇಶಿಸಿ, ‘ಸಹಾಯ ಮಾಡಿ, ಇಲ್ಲದಿದ್ದರೆ ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದರು. ಈ ಸಮಯದಲ್ಲಿ ಅವರು ನನ್ನ ಕತ್ತನ್ನು ಬಳಸಿ ಕೈ ಇಟ್ಟುಕೊಂಡಿದ್ದರು. ಆಗ ಲಕ್ಷ್ಮಣ್, ಆ ರೀತಿ ಮಾತನಾಡಬೇಡಿ, ನಾವು ಏನಾದರೂ ಮಾಡುತ್ತೇವೆ’ ಎಂದರು. ನಂತರ ನಾವೆಲ್ಲರೂ ಹಣವನ್ನು ತೆಗೆದುಕೊಂಡು ದರ್ಶನ್ ಮನೆಯಿಂದ ಹೊರ ಬಂದೆವು. ನಂತರ, ನಾನು ಕಪ್ಪು ಬಣ್ಣದ ಹಣದ ಬ್ಯಾಗನ್ನು ನನ್ನ ಸ್ಥಾರ್ಪಿಯೋ ಕಾರಿನ ಹಿಂದಿನ ಸೀಟಿನಲ್ಲಿ ಇಟ್ಟೆ. ಈ ವೇಳೆ ಲಕ್ಷ್ಮಣ್ ದರ್ಶನ್ ಮನೆಯ ಸಲ್ಲಾರ್ಗೆ ಹೋದರು. ವಿನಯ್ ಮತ್ತು ದೀಪಕ್ ಪ್ರತ್ಯೇಕವಾಗಿ ಅಲ್ಲಿಯೇ ನಿಂತಿದ್ದರು. ಆಗ ನಾಗರಾಜ ನನ್ನ ಬಳಿ ಬಂದು “ಏನ್ ಸರ್ ಇದು, ದರ್ಶನ್ ಈ ರೀತಿ ನೇಣು ಹಾಕಿಕೊಳ್ಳುತ್ತೇನೆ’ ಎನ್ನುತ್ತಿದ್ದಾರೆ ಎಂದಾಗ, ನನ್ನ ಮುಂದೆಯೂ ಇದೇ ರೀತಿ ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು ಎಂದೆ.
ದರ್ಶನ್ ಆತ್ಮಹತ್ಯೆ ಬಗ್ಗೆ ಹೇಳಿದಾಗ ನನ್ನ ತಲೆ ತಿರುಗಿತು:
ನಾಗರಾಜ್ ಅವರು, ‘ದರ್ಶನ್ ಅವರು ಆತ್ಮಹತ್ಯೆ ಬಗ್ಗೆ ಹೇಳಿದಾಗ ನನ್ನ ತಲೆ ತಿರುಗಿತು’ ಎಂದರು. ದರ್ಶನ್ ಅವರು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದಾಗ, ನಾನು ಕೂಡ ಸ್ಟನ್ ಆಗಿದ್ದೆ ಎಂದೆ. ಅಷ್ಟರಲ್ಲಿ ಲಕ್ಷ್ಮಣ್ ಕೂಡ ಅಲ್ಲಿಗೆ ಬಂದರು. ಆಗ ನಾನು ನಾಗರಾಜ್ ಅವರಿಗೆ, ನೀವು, ದೀಪಕ್ ಮತ್ತು ವಿನಯ್ ಶೆಡ್ಗೆ ಹೋಗಿ, ನಾನು ಮತ್ತು ಲಕ್ಷ್ಮಣ್ ಸ್ವಲ್ಪ ಕೆಲಸ ಇದೆ ಮುಗಿಸಿಕೊಂಡು ಬರುತ್ತೇವೆ ಎಂದು ಹೇಳಿದೆ. ಆಗ ಲಕ್ಷ್ಮಣ್ ‘ಏನು ಅಣ್ಣ’ ಎಂದು ಕೇಳಿದರು. ನಾನು ವಿನಯ್ ಅವರಿಗೆ ಅವರ ಜೀಪ್ನ ಕೀ ಕೊಡಲು ಎಂದೆ. ಕೋರಿಕೊಂಡೆ. ಅದೇ ವೇಳೆ ಅಲ್ಲಿ ಇಬ್ಬರು ಸೆಕ್ಯುರಿಟಿಗಳಿದ್ದು ಒಬ್ಬನ ಹೆಸರು ಅಮೀರ್, ಇನ್ನೊಬ್ಬ ಬಾಬು ಅಥವಾ ಬಾಬುಲ್ ಖಾನ್, ಆ ಇಬ್ಬರಲ್ಲಿ ಒಬ್ಬರಿಗೆ ನನ್ನ ಕಾರಿನ ಕೀಯನ್ನು ಕೊಟ್ಟೆ.
ಸಮಯದಲ್ಲಿ ನನ್ನ ಸ್ನೇಹಿತರಾದ ಕಾರ್ತಿಕ್ (ಚಾ. ಸಾ.108) ಎಂಬವರಿಗೆ ಕರೆ ಮಾಡಿ ಎಲ್ಲಿದ್ದೀರಾ ಎಂದು ಕೇಳಿದಾಗ, ಅವರು ‘ನಾನು ಬೆಂಗಳೂರು ವಿಮಾನ ನಿಲ್ದಾಣದ ಹತ್ತಿರ ಇದ್ದೇನೆ, ಏನು ಸಮಾಚಾರ’ ಎಂದು ಕೇಳಿದರು. ಆಗ ನಾನು ನನ್ನ ಕಾರು ದರ್ಶನ್ ಅವರ ಮನೆಯ ಮುಂದೆ ಇದ್ದು, ಅದರ ಕೀ ಸೆಕ್ಯುರಿಟಿ ಹತ್ತಿರ ಇದೆ. ಅದನ್ನು ಪಡೆದು ಕಾರಿನ ಸೀಟ್ ಮೇಲೆ ಕುಳಿತ ನಂತರ ನನಗೆ ಕರೆ ಮಾಡಿ ಎಂದೆ. ಆ ಸಮಯದಲ್ಲಿ ವಿನಯ್, ದೀಪಕ್ ಮತ್ತು ನಾಗರಾಜ್ ದರ್ಶನ್ ಮನೆಯಿಂದ ಶೆಡ್ ಕಡೆ ಹೊರಟರು. ಆಗ ಸಮಯ ರಾತ್ರಿ 9ರಿಂದ 10 ಗಂಟೆ ಆಗಿತ್ತು.
ಹೆಣ ಬಿಸಾಡಲು ಜಾಗ ಹುಡುಕಾಟದ ಚಿಂತೆ:
ನಾನು ಮತ್ತು ಲಕ್ಷ್ಮಣ್ ಅಲ್ಲೇ ನಿಂತಿದ್ದೆವು. ಲಕ್ಷ್ಮಣ್ ನನಗೆ ‘ಏನಣ್ಣ ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಅದನ್ನು ಕೇಳಿ ತನಗೆ ಗಾಬರಿಯಾಗಿತ್ತು’ ಎಂದು ಮತ್ತೆ ಹೇಳಿದರು. ಅದಕ್ಕೆ ನಾನು ಏನೂ ಆಗುವುದಿಲ್ಲ ಎಂದು ಸಮಾಧಾನ ಮಾಡಿ ವಿನಯ್ ಕೊಟ್ಟ ಜೀಪ್ನ ಕೀಯನ್ನು ಲಕ್ಷ್ಮಣ್ಗೆ ಕೊಟ್ಟು ಗಾಡಿ ತೆಗೆಯಲು ಹೇಳಿದೆ. ಅದರಂತೆ ಲಕ್ಷ್ಮಣ್ ಗಾಡಿಯನ್ನು ಸ್ಟಾರ್ಟ್ ಮಾಡಿದರು, ನಾನು ಅವರ ಪಕ್ಕದ ಸೀಟ್ನಲ್ಲಿ ಕುಳಿತೆ. ಪೆಟ್ರೋಲ್ ಕಡಿಮೆ ಇರುವುದು ನೋಡಿ, ‘ಇದರಲ್ಲಿ ಪೆಟ್ರೋಲ್ ಕಡಿಮೆ ಇದೆ’ ಎಂದರು. ಆಗ ನಾನು ನಡಿಯಿರಿ, ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ಹಾಕಿಸಿಕೊಂಡು ಹೋಗೋಣ ಎಂದೆ.
ಅಲ್ಲಿಂದ ಬಿಬಿಎಂಪಿ ಕಚೇರಿಯ ಹತ್ತಿರ ಇದ್ದ ಪೆಟ್ರೋಲ್ ಬಂಕ್ಗೆ ಹೋಗಿ, ಅಲ್ಲಿ 500 ರೂ.ಗೆ ಪೆಟ್ರೋಲ್ ಹಾಕಿಸಿಕೊಂಡೆವು. ಅದಕ್ಕೆ ನನ್ನ ಮೊಬೈಲ್ ನಿಂದ ಸ್ಕ್ಯಾನ್ ಮಾಡಿ ಹಣ ಕಳಿಸಿದೆ. ನಂತರ ಬಂಕ್ ನಿಂದ ಹೊರಟ ನಾವು ಆರ್.ಆರ್.ನಗರ ಆರ್ಚ್ ಹತ್ತಿರ ಬಂದು ಸಿಗ್ನಲ್ನಲ್ಲಿ ನಿಂತ್ತಾಗ, ನಾನು ಲಕ್ಷ್ಮಣೆಗೆ ಗಾಡಿಯನ್ನು ಕೆಂಗೇರಿ ಕಡೆಗೆ ತಿರುಗಿಸಿ ಎಂದೆ. ಆದರೆ ಸಿಗ್ನಲ್ ಇನ್ನೂ 10 ಸೆಕೆಂಡ್ಗಳು ಇರುವಾಗಲೇ ನಾನು ಮತ್ತೆ ಲಕ್ಷ್ಮಣ್ಗೆ ಇಲ್ಲ, ಸಿಗ್ನಲ್ನ ಬಲಕ್ಕೆ ತಿರುಗಿಸಿ ಎಂದೆ ಅದರಂತೆ ಮುಂದುವರಿದು ನಾಯಂಡಹಳ್ಳಿ ಜಂಕ್ಷನ್ ಹತ್ತಿರ ಹೋದಾಗ, ನಾಗರಬಾವಿ ಕಡೆಗೆ ಹೋಗಲು ಎಡಕ್ಕೆ ಗಾಡಿ ತಿರುಗಿಸಿ ಎಂದೆ. ನಂತರ ಅದೇ ರೋಡ್ನಲ್ಲಿ ಹೋದಾಗ, ಮಾಳಗಾಳ ಎಂಬ ಸ್ಥಳ ಬರುತ್ತದೆ. ಅಲ್ಲಿಂದ ಮುಂದಕ್ಕೆ ಹೋಗುವಾಗ ನಿರ್ಜನ ಪ್ರದೇಶ ಯಾವುದು ಸಿಗುತ್ತದೆ ಎಂದು ಹುಡುಕುತ್ತಿದ್ದೆ. ಅದೇ ರೀತಿ ಮುಂದೆ ಹೋಗುತ್ತಾ ಯುನಿವರ್ಸಿಟಿ ಜಂಕ್ಷನ್ ಹಾದು ನೇರವಾಗಿ ಹೋಗುತ್ತಿದ್ದಾಗ ಲಕ್ಷ್ಮಣ್ ‘ಅಣ್ಣ ಎಲ್ಲಿಗೆ ಹೋಗುತ್ತಿರುವುದು ಹೇಳಿ’ ಎಂದು ಕೇಳಿದರು. ಅದಕ್ಕೆ ನಾನು ನೀವು ಗಾಡಿ ಓಡಿಸಿ ಹೇಳುತ್ತೇನೆ ಎಂದೆ.
ದೊಡ್ಡ ಮೋರಿ, ನಿರ್ಜನ ಪ್ರದೇಶ; ಸುತ್ತಲೂ ಗಾಢ ಕತ್ತಲು:
ಸಮಯದಲ್ಲಿ ಮೃತದೇಹವನ್ನು ಎಲ್ಲಿ ಬಿಸಾಡುವುದು (dispose) ಎಂದು ಯೋಚನೆ ಮಾಡುತ್ತಿದ್ದೆ. ನನ್ನ ತಲೆಯಲ್ಲಿ ಆ ಶೆಡ್ನಿಂದ ಎಷ್ಟು ದೂರ ಸಾಧ್ಯ, ಅಷ್ಟು ದೂರ ದೇಹವನ್ನು ಹಾಕಿದರೆ ಒಳ್ಳೆಯದು ಎಂದು ಯೋಚನೆ ಮಾಡುತ್ತಿದ್ದೆ. ಅದೇ ರೀತಿ ಮುಂದುವರಿದು ನಾವು ಮಾಗಡಿ ರೋಡ್ ಜಂಕ್ಷನ್ವರೆಗೂ ಹೋದೆವು. ಆಗ ನಾನು ಲಕ್ಷ್ಮಣೆಗೆ ಇಲ್ಲಿಯೇ ಬಲತಿರುವು ತೆಗೆದುಕೊಳ್ಳಿ, ವಾಪಸ್ಸು ಹೋಗೋಣ ಎಂದೆ. ಅದರಂತೆ ಗಾಡಿಯನ್ನು ‘ಯೂ’ ಟರ್ನ್ ತೆಗೆದುಕೊಂಡು ಬರುವಾಗ ಎಡಬದಿಯಲ್ಲಿ ಒಂದು ದೊಡ್ಡ ಮೋರಿ ಹರಿಯುತ್ತಿತ್ತು. ಆ ಸ್ಥಳವನ್ನು ನಾನು ಗಮನಿಸಿದಾಗ ಅಲ್ಲಿ ಒಂದೂ ಬೀದಿ ಇರಲಿಲ್ಲ, ತುಂಬಾಕತ್ತಲು ಇದ್ದು, ಅದು ನಿರ್ಜನ ಪ್ರದೇಶವಾಗಿತ್ತು. ಆ ಮೋರಿಯ ಹತ್ತಿರ ಗಾಡಿಯನ್ನು ರಸ್ತೆಯ ಎಡಬದಿಗೆ ತೆಗೆದುಕೊಳ್ಳಲು ಲಕ್ಷ್ಮಣ್ಗೆ ಹೇಳಿದೆ. ಅಲ್ಲಿ ಒಂದು ಅಪಾರ್ಟ್ಮೆಂಟ್ ಇರುವುದು ಕಂಡಿತು. ಅದು Sattva Apartment ಎಂದು ಇತ್ತು.
ಏನ್ ಅಣ್ಣ ಆ ಜಾಗಕ್ಕೆ ಹೋಗಿದ್ದು ಏಕೆ?: ಅಪಾರ್ಟ್ಮೆಂಟ್ಗಿಂತ ಮುಂಚೆ ಒಂದು ರಸ್ತೆ ಇತ್ತು. ಅಲ್ಲಿ ನಮ್ಮ ಕಾರನ್ನು ಎಡಕ್ಕೆ ತಿರುಗಿಸಿ ಆ ರಸ್ತೆ ಹೇಗೆ ಹೋಗುತ್ತದೆಯೋ ಹಾಗೆ ಹೋದೆವು. ಅದು ಸಂಪೂರ್ಣವಾಗಿ ಕತ್ತಲಿನಿಂದ ಕೂಡಿತ್ತು; ಒಂದೂ ಬೀದಿ ದೀಪ ಇರಲಿಲ್ಲ.
ಅದೇ ರಸ್ತೆಯಲ್ಲಿ ಮುಂದಕ್ಕೆ ಹೋಗಿ ಬಲತಿರುವು ತೆಗೆದುಕೊಂಡು, ಮುಂದೆ ಹೋದಾಗ ಅಲ್ಲಿ ಒಂದು ಮರಗಳು ಇರುವ ತೋಪು ಕಂಡಿತು. ಅಲ್ಲಿ ಹಳೆಯ ವಾಹನಗಳನ್ನು ಸ್ಥಾಪ್ ಮಾಡಿ ಬಿಡಲಾಗಿತ್ತು. ಆ ಜಾಗವನ್ನು ನಾನು ನೋಡಿದಾಗ, ಅಲ್ಲಿಯೂ ಕೂಡ ಬೆಳಕು ಇರಲಿಲ್ಲ, ಕತ್ತಲಿನಿಂದ ಕೂಡಿತ್ತು.
ಆ ಜಾಗವನ್ನು ನೋಡಿದ ನಂತರ ನಾನು ಲಕ್ಷ್ಮಣ್ ಗಾಡಿಯನ್ನು ತಿರುಗಿಸಿ ಪಟ್ಟಣಗೆರೆ ಶೆಡ್ ಕಡೆಗೆ ಗಾಡಿಯನ್ನು ಓಡಿಸಿ ಎಂದು ಹೇಳಿದೆ. ಅದೇ ರೀತಿ ಲಕ್ಷ್ಮಣ್ ಅವರು ವಾಹನವನ್ನು ಚಾಲನೆ ಮಾಡಿಕೊಂಡು ನಾಯಂಡಳ್ಳಿ ಹತ್ತಿರ ಬಂದಾಗ, ಲಕ್ಷ್ಮಣ್ ಏನ್ ಅಣ್ಣ ಆ ಜಾಗಕ್ಕೆ ಹೋಗಿದ್ದು ಏಕೆ?’ ಎಂದು ಕೇಳಿದರು.
• ಆರೋಪಿ ನಂ.1-ಪವಿತ್ರಾ ಗೌಡ: ದರ್ಶನ್ ಗೆಳತಿ ಹಾಗೂ ಎರಡನೇ ಪತ್ನಿ(ಪ್ರದೋಷ್ಗೆ 8 ವರ್ಷಗಳ ಪರಿಚಯ)
• ಆರೋಪಿ ನಂ.2-ದರ್ಶನ್: ಚಲನಚಿತ್ರ ನಾಯಕ ನಟ(ಪ್ರದೋಷ್ಗೆ 23 ವರ್ಷಗಳ ಪರಿಚಯ)
• ಆರೋಪಿ ನಂ.3-ಪವನ್: ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ(ಪ್ರದೋಷ್ಗೆ 7 ವರ್ಷಗಳ ಪರಿಚಯ)
ಆರೋಪಿ ನಂ.4-ರಾಘವೇಂದ್ರ: ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ(ಪ್ರದೋಷ್ ಗೆ ಮೊದಲಿನಿಂದಲೂ ಪರಿಚಯ)
– ಆರೋಪಿ ನಂ.5-ನಂದೀಶ್: ದರ್ಶನ್ ಜೊತೆ
ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಶ್ರೀರಂಗಪಟ್ಟಣ ತಾಲ್ಲೂಕಿನ ಚಾಮಲಾಪುರದ ನಿವಾಸಿಯಾದ ಈತ ಪ್ರದೋಷ್ಗೆ 5 ವರ್ಷಗಳ ಪರಿಚಯ
• ಆರೋಪಿ ನಂ.6-ಜಗದೀಶ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
• ಆರೋಪಿ ನಂ.7-ಅನುಕುಮಾರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
ಆರೋಪಿ ನಂ.8-ರವಿಶಂಕರ್: ಚಿತ್ರದುರ್ಗದ ಹುಡುಗ, ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಕರೆತಂದಿದ್ದ ವ್ಯಕ್ತಿ
• ಆರೋಪಿ ನಂ.9-ಧನರಾಜ್: ಪ್ರದೋಷ್ಗೆ 6 ವರ್ಷಗಳ ಪರಿಚಯ
• ಆರೋಪಿ ನಂ.10-ವಿನಯ್: ಪಬ್ ಮಾಲೀಕ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ 4 ವರ್ಷಗಳ ಪರಿಚಯ)
ಆರೋಪಿ ನಂ.11: ನಾಗರಾಜ್ -ಮೈಸೂರಿನಲ್ಲಿರುವ ದರ್ಶನ್ ಫಾರಂ ನೋಡಿ ಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ದರ್ಶನ್ ಸ್ನೇಹಿತ(ಪ್ರದೋಷ್ಗೆ 18 ವರ್ಷಗಳ ಪರಿಚಯ) • ಆರೋಪಿ ನಂ.12-ಲಕ್ಷಣ್: ದರ್ಶನ್ ಕಾರು ಚಾಲಕ
• ಆರೋಪಿ ನಂ.13-ದೀಪಕ್: ಲೋನ್ ಕಟ್ಟದೇ ಇರುವ ವಾಹನಗಳನ್ನು ಜಪ್ತಿ ಮಾಡುವ ಟೀಂನಲ್ಲಿ ಕೆಲಸ (10ನೇ ಆರೋಪಿ ವಿನಯ್ ಮೂಲಕ ಪ್ರದೋಷ್ಗೆ 4 ವರ್ಷಗಳ ಪರಿಚಯ) ಆರೋಪಿ ನಂ.14: ಪ್ರದೋಷ್- ಐಟಿ ಕಂಪೆನಿ ಉದ್ಯೋಗಿ ಹಾಗೂ ದರ್ಶನ್ ಸ್ನೇಹಿತ (2003ರಿಂದ ಪರಿಚಯ)
ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…
ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…
ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್ ಗಾಂಧಿ ಹಾಗೂ ‘ಇಂಡಿಯಾ’…
ಶೆಡ್ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…
ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…
ಹೊಡೆದು ಬಡಿದವರು ಸರೆಂಡರ್ ಆಗಲಿ ಎಂದು ಚಿತ್ರದುರ್ಗದ ಹುಡುಗರ ವಾದ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮನವೊಲಿಸಲು…