Andolana originals

ಆ ಹುಡುಗ ಸತ್ತು ಹೋಗಿದ್ದಾನೆ…!!!

ಗಾಬರಿಯಿಂದ ಮಾಹಿತಿ ನೀಡಿದ ದರ್ಶನ್ ಕಾರು ಚಾಲಕ ಲಕ್ಷ್ಮಣ್‌ 

ದರ್ಶನ್‌ಗೆ ವಿಷಯ ತಿಳಿಸಿದ್ದೀರ ಎಂದಿದ್ದಕ್ಕೆ ‘ನಾನು ಹೇಳಿಲ್ಲ, ಹೇಳುವುದೂ ಇಲ್ಲ’ ಎಂದರು

ವಿಷಯ ಹೇಳುತ್ತಿದ್ದಂತೆ ನಾನು ಶೂಟ್ ಮಾಡಿಕೊಳ್ಳುತ್ತೇನೆ ಎಂದ ದರ್ಶನ್

ನಾನು ಮನೆಗೆ ಹೋಗುವ ಮಾರ್ಗ ಮಧ್ಯ ಲಕ್ಷ್ಮಣ್ ಅವರಿಗೆ ಕರೆ ಮಾಡಿ, ಆ ಹುಡುಗನಿಗೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ತರಿಸಿಕೊಟ್ಟಿದ್ದೀರಾ? ಆತ ಈಗ ಹೇಗಿದ್ದಾನೆ? ನೀವು ಈಗ ಎಲ್ಲಿದ್ದೀರಿ ಎಂದು ಕೇಳಿದಾಗ, ಲಕ್ಷ್ಮಣ್ ನಾನು ಆರ್.ಆರ್.ನಗರ ಗೇಟ್‌ ನಿಂದ ವಾಪಸ್ಸು ಶೆಡ್ ಕಡೆಗೆ ಹೋಗುತ್ತಿದ್ದೇನೆ ಎಂದರು. ಆ ಶೆಡ್ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ ಸ್ಥಳ). ಆಗ ನಾನು ಏಕೆ ಹೋಗುತ್ತಿದ್ದೀರಿ? ಏನಾಯಿತು? ಎಂದು ಲಕ್ಷ್ಮಣ್ ಗೆ ಕೇಳಿದಾಗ, ಅವರು ಆ ಹುಡುಗ ಸತ್ತುಹೋಗಿದ್ದಾನೆ ಎಂದರು.

ನನ್ನ ಮೈಂಡ್ ಕಂಪ್ಲೇಟ್ ಬ್ಲಾಂಕ್ ಆಯಿತು: 
ಆಗ ನನ್ನ ಮೈಂಡ್ ಕಂಪ್ಲಿಟ್ ಬ್ಲಾಂಕ್ ಆಯಿತು. ನಾನು ಮತ್ತೆ ಲಕ್ಷ್ಮಣ್‌ಗೆ ಏನಾಯಿತು ಸರಿಯಾಗಿ ಹೇಳಿ ಎಂದು ಕೇಳಿದಾಗ, ಲಕ್ಷ್ಮಣ್ ಆ ಹುಡುಗ ಸತ್ತು ಹೋಗಿದ್ದಾನೆ’ ಎಂದು ತಿಳಿಸಿದರು. ನಾನು ತಕ್ಷಣ ಕಾಲ್ ಕಟ್ ಮಾಡಿದೆ. ಮೈಂಡ್ ಬ್ಲಾಂಕ್ ಆಗಿತ್ತು, ಏನು ಮಾಡುವುದು ಎಂದು ನನಗೆ ತಿಳಿಯಲಿಲ್ಲ. ತಕ್ಷಣ ವಿನಯ್‌ಗೆ ಫೋನ್ ಮಾಡಿದೆ. ವಿನಯ್ ಫೋನ್ ರಿಸೀವ್ ಮಾಡಿದಾಗ, ಆ ಹುಡುಗ ಸತ್ತು ಹೋಗಿದ್ದಾನೆ. ಏನು ಇದೆಲ್ಲಾ ಎಂದು ಕೇಳಿದೆ. ಅದಕ್ಕೆ ವಿನಯ್, ‘ಹೌದು ಸರ್, ನನಗೆ ದೀಪಕ್ ಕಾಲ್ ಮಾಡಿ ತಿಳಿಸಿದ. ನಾವೆಲ್ಲರೂ ಅಲ್ಲಿಂದ ಹೊರಟ ನಂತರ ದೀಪಕ್ ಶೆಡ್‌ಗೆ ಹೋಗಿದ್ದನಂತೆ, ಆಗ ಈ ವಿಷಯ ತನಗೆ ತಿಳಿಸಿದ ಎಂದರು.

ದರ್ಶನ್‌ಗೆ ವಿಷಯ ತಿಳಿಸಿದ್ದೀರಾ?: 
ಇದಾದ ನಂತರ ನಾನು ಮತ್ತೆ ಲಕ್ಷ್ಮಣ್ ಗೆ ಕರೆ ಮಾಡಿ ಈ ವಿಷಯವನ್ನು ದರ್ಶನ್ ಅವರಿಗೆ ತಿಳಿಸಿದ್ದೀರಾ ಎಂದು ಕೇಳಿದಾಗ, ಅವರು ‘ಇಲ್ಲ ನಾನು ಹೇಳಿಲ್ಲ, ಹೇಳುವುದೂ ಇಲ್ಲ’ ಎಂದರು. ಅದಕ್ಕೆ ನಾನು ಈ ವಿಷಯವನ್ನು ದರ್ಶನ್‌ ಗೆ ತಿಳಿಸದೇ ಇದ್ದರೆ ತಪ್ಪಾಗುತ್ತದೆ ಎಂದು ಹೇಳಿ, ನಾನೇ ನನ್ನ ಕಾರನ್ನು ತಿರುಗಿಸಿ ದರ್ಶನ್ ಗೆ ವಿಷಯವನ್ನು ತಿಳಿಸಲು ರಾತ್ರಿ 7 ಗಂಟೆ ಸುಮಾರಿಗೆ ಅವರ ಮನೆಯ ಕಡೆ ಹೊರಟೆ.
ನಾನು ದರ್ಶನ್ ಮನೆಗೆ ವಾಪಸ್ಸು ಬಂದಾಗ, ಪವನ್ ಅವರ ಮನೆಯ ಹೊರಗಡೆ ನಿಂತ್ತಿದ್ದ. ನಾನು ಅವರ ಮನೆಯ ಒಳಗಡೆ ಹೋದಾಗ, ದರ್ಶನ್ ಅವರ ಅಕ್ಕನ ಮಗ ಚಂದು ಹಾಲ್‌ನಲ್ಲಿ ಇದ್ದ. ಆಗ ನಾನು ಆತನನ್ನು ದರ್ಶನ್ ಎಲ್ಲಿದ್ದಾರೆ? ಎಂದು ಕೇಳಿದಾಗ, ಆತ ಮೇಲೆ ಅವರ ರೂಂನಲ್ಲಿ ಇದ್ದಾರೆ ಎಂದು ತಿಳಿಸಿದ. ಆಗ ನಾನು ಮೆಟ್ಟಿಲುಗಳನ್ನು ಹತ್ತಿಕೊಂಡು, ದರ್ಶನ್ ಅವರ ರೂಂನ ಹೋದಾಗ ರೂಂನ ಬಾಗಿಲು ಅರ್ಧಂಬರ್ಧ ಮುಚ್ಚಿತ್ತು. ಬಾಗಿಲನ್ನು ತಳ್ಳಿ ಒಳಗಡೆ ಹೋದಾಗ ದರ್ಶನ್, ‘ಏನು ಸಮಾಚಾರ, ಏತಕ್ಕೆ ಬಂದಿದ್ದೀರಿ ಪ್ರದೋಷ್” ಎಂದು ಕೇಳಿದರು. ಆಗ ನಾನು ಶೆಡ್‌ನಲ್ಲಿ ಒಬ್ಬ ಹುಡುಗನಿಗೆ ನೀವು ಹೊಡೆದಿರಲ್ಲ, ಆತ ಸತ್ತುಹೋಗಿದ್ದಾನೆ ಎಂದು ತಿಳಿಸಿದೆ. ಆಗ ದರ್ಶನ್ ಸಂಪೂರ್ಣವಾಗಿ ಶಾಕ್ ಆಗಿ ಯಾರು… ಯಾರು… ಎಂದು ನನ್ನನ್ನು ಪದೇ ಪದೇ ಕೇಳಿದರು. ಆಗ ನಾನು ಚಿತ್ರದುರ್ಗದಿಂದ ಕರೆದುಕೊಂಡು
ಬಂದಿದ್ದ ರೇಣುಕಾಸ್ವಾಮಿ. ಶೆಡ್‌ನಲ್ಲಿ ಇದ್ದ ವ್ಯಕ್ತಿ ಎಂದು ಹೇಳಿದೆ.

ತಲೆ ಮೇಲೆ ಕೈ ಇಟ್ಟುಕೊಂಡು ಕುಸಿದು ಮಂಚದ ಮೇಲೆ ಕುಳಿತ ದರ್ಶನ್: 
ಆಗ ದರ್ಶನ್ ತಲೆಯ ಮೇಲೆ ಕೈ ಇಟ್ಟುಕೊಂಡು ಕುಸಿದು ಮಂಚದ ಮೇಲೆ ಕುಳಿತುಕೊಂಡರು. ಆಗ ದರ್ಶನ್ ಸಂಪೂರ್ಣ ಗಾಬರಿಯಾಗಿದ್ದರು, ಆತಂಕದಲ್ಲಿದ್ದರು. ಪದೇ ಪದೇ ಯಾರು… ಯಾರು… ಎಂಬ ಪ್ರಶ್ನೆಯನ್ನೇ ಕೇಳುತ್ತಿದ್ದರು. ಎದುರಿಗೆ ನಿಂತುಕೊಂಡಿದ್ದ ನನ್ನ ಕೈಯನ್ನು ಹಿಡಿದುಕೊಂಡು ಪ್ರದೋಷ ಏನಾಯಿತು ನೋಡಿ… ಏನಾಯಿತು ನೋಡಿ ಹೇಳಿ…
ಇಲ್ಲದಿದ್ದರೆ ನಾನು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಕೈಯನ್ನು ತಲೆಗೆ ಶೂಟ್ ಮಾಡಿಕೊಳ್ಳುವ ರೀತಿ ಹಿಡಿದುಕೊಂಡು ತೋರಿಸಿದರು. ಆಗ ನನಗೂ ಕೂಡ ಭಯ ಶುರುವಾಯಿತು. ಏಕೆಂದರೆ ನಾನು ದರ್ಶನ್ ಅವರನ್ನು ಎಂದೂ ಆ ರೀತಿ ನೋಡಿರಲಿಲ್ಲ. ದರ್ಶನ್ ಮುಂದುವರಿದು ಮಾತನಾಡಿ, ‘ಪ್ರದೋಷ್ ಅಲ್ಲಿ ಹೋಗಿ ಏನಾಯಿತು ಎಂದು ನೋಡಿ, ನಾವು ಅಲ್ಲಿಂದ ಹೊರಟಾಗ ಆತ ಬದುಕೇ ಇದ್ದ ಎಂದರು. ನೀವು ಟೆನ್ಗನ್ ಮಾಡಿಕೊಳ್ಳಬೇಡಿ, ನಾನು ನೋಡುತ್ತೇನೆ ಎಂದು ಸಮಾಧಾನ ಮಾಡಿದೆ. ನಾನು ಅವರನ್ನು ರೂಂನಲ್ಲೇ ಕೂರಿಸಿ ಹೊರಗೆ ಬಂದು, ನಾಗರಾಜ್‌ಗೆ ಫೋನ್ ಮಾಡಿದೆ. ಆದರೆ ಅವರು ಫೋನ್ ರಿಸೀವ್ಮಾ ಡಲಿಲ್ಲ.
ಅಣ್ಣ ರೂಂ ಒಳಗೆ ಕರೆದೊಯ್ದ 5 ನಿಮಿಷದಲ್ಲಿ ಅವನು ಸತ್ತು ಹೋದ: ನಂತರ ಮೆಟ್ಟಿಲಿಳಿದು ಹೊರಬಂದು ನನ್ನ ಕಾರನ್ನು ಹತ್ತಿ ಘಟನೆ ನಡೆದ ಪಟ್ಟಣಗೆರೆ ಶೆಡ್ ಕಡೆ ಹೊರಟೆ. ಶೆಡ್ ಹತ್ತಿರ ಹೋದಾಗ, ಗೇಟ್ ಬಳಿಯೇ ನಾಗರಾಜ್, ವಿನಯ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ರವಿ, ರಾಘವೇಂದ್ರ ಮತ್ತು ಪವನ್ ಇದ್ದರು. ನಾನು ಅಲ್ಲಿಗೆ ಹೋದ ತಕ್ಷಣ ಏನಾಯಿತು ಎಂದು ಅವರನ್ನು ಕೇಳಿದೆ. ಆಗ ಚಿತ್ರದುರ್ಗದ ಮೂರು ಜನರ ಪೈಕಿ ಜಗದೀಶ್ ಎಂಬಾತ “ಅಣ್ಣ ನೀವು ಹೋದ ನಂತರ ನಾವು ಆತನನ್ನು ರೂಂ ಒಳಗೆ ಕರೆದುಕೊಂಡು ಹೋದ 5 ನಿಮಿಷದ ಒಳಗೆ ಸತ್ತು ಹೋಗಿರುತ್ತಾನೆ’ ಎಂದು ತಿಳಿಸಿದನು.
ಪಟ್ಟಣಗೆರೆ ಶೆಡ್‌ ಒಳಗಡೆ ಬಲಭಾಗದಲ್ಲಿ ಕಮರ್ಷಿಯಲ್‌ ವಾಹನಗಳುನಿಲುಗಡೆಯಾಗಿದ್ದು, ಎಡಭಾಗದಲ್ಲಿ ಒಂದು ವಾಚ್‌ಮನ್ ರೂಂ ಇದ್ದು, ಅದು ಒಂದು ಅಂತಸ್ತಿನ ಆರ್‌ಸಿಸಿ ಕಟ್ಟಡವಾಗಿತ್ತು, ಅದರಲ್ಲಿ ಕೆಳಗಡೆ ಇರುವ ರೂಂಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡ ಹೋಗಿದ್ದರು, ಆ ರೂಂಗೆ ಕರೆದುಕೊಂಡು ಹೋದ 5 ನಿಮಿಷದಲ್ಲಿ ಆತ ಸತ್ತು ಹೋಗಿದ್ದ ಎಂದು ಜಗದೀಶ್ ನನಗೆ ತಿಳಿಸಿದರು.
ಯಾರಾರು ರೇಣುಕಾಸ್ವಾಮಿಯನ್ನು ರೂಂಗೆ ಕರೆದುಕೊಂಡು ಹೋಗಿದ್ದು ಎಂದು ನಾನು ಕೇಳಿದಾಗ, ಅವರು ರಾಘವೇಂದ್ರ ಮತ್ತು ನಂದೀಶ್ ಕರೆದು ಕೊಂಡು ಹೋಗಿದ್ದರು ಎಂದು ತಿಳಿಸಿದರು.
ಅಲ್ಲೇ ಇದ್ದ ನಾಗರಾಜ್ ಅವರನ್ನು ಏನಾಯಿತು ಎಂದು ಕೇಳಿದಾಗ, ಅವರು ‘ನನಗೂ ಕೂಡ ಗೊತ್ತಿಲ್ಲ, ನಾನು ಮೈಸೂರಿಗೆ ಹೊರಟಿದ್ದೆ. ಮಾರ್ಗ ಮಧ್ಯೆ ಫೋನ್ ಬಂತು. ಹಾಗಾಗಿ ನಾನು ವಾಪಸ್ ಬಂದಿದ್ದೇನೆ ಎಂದರು. ಈಗ ಏನು ಮಾಡುವುದು ಎಂದು ನಾನು ನಾಗರಾಜ್ ಅವರನ್ನು ಕೇಳಿದಾಗ, …ಮಗ ಪವನ್ ಎಲ್ಲರ ತಲೆಗೂ ತಂದುಬಿಟ್ಟ ಎಂದರು. ಯಾರನ್ನಾದರೂ ಸರೆಂಡರ್ ಮಾಡಿಸಲು ಪಟ್ಟಣಗೆರೆ ಶೆಡ್‌ನಲ್ಲಿ ಪ್ಲಾನ್‌
ಆ ಸಮಯದಲ್ಲಿ ನಾನು ಮತ್ತು ವಿನಯ್ ಸ್ವಲ್ಪ ಯೋಚಿಸಿ, ಚಿತ್ರದುರ್ಗದಿಂದ ಬಂದಿದ್ದ ಅನುಕುಮಾರ್, ಜಗದೀಶ್, ರವಿ ಮತ್ತು ರಾಘವೇಂದ್ರ ಅವರನ್ನು ಉದ್ದೇಶಿಸಿ ನೀವು ಯಾರಾದರೂ ಈಗ ಪೊಲೀಸರಿಗೆ ಸರೆಂಡರ್ ಆಗಲೇಬೇಕು ಎಂದು
ಹೇಳಿದೆವು. ಅವರು ಆಗಲ್ಲ ಎಂದರು. ಆಗ ನಾನು, ನೀವು ತಲೆಕೆಡಿಸಿಕೊಳ್ಳಬೇಡಿ, ನಿಮಗೆ ಬೇಲ್ ಮಾಡಿಸಿ, ನಿಮ್ಮ ಮನೆಯವರಿಗೆ ಏನು ಸಹಾಯ ಮಾಡಬೇಕೋ, ಅದನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದೆ. ಆಗ ಜಗದೀಶ್ ಮತ್ತು ಅನುಕುಮಾರ್, ‘ಅಣ್ಣ ನಾವಿ ಬ್ಬರು ಏನೂ ಮಾಡಿಲ್ಲ, ನಾವು ಇಲ್ಲೆ ಗೇಟಿನ ಹತ್ತಿರ ಕೂತು ಕೊಂಡಿದ್ದೆವು, ನಾವೇಕೆ ಸರೆಂಡರ್ ಆಗಬೇಕು’ ಎಂದರು.

ನಮ್ಮ ಶೆಡ್‌ಗೆ ಕೆಟ್ಟ ಹೆಸರು ಬರುತ್ತದೆ; ವಿನಯ್ ಜಗಳ: ನೀವು ಇದೇ ತರಹ ಹಠ ಮಾಡುತ್ತಿದ್ದರೆ ನಾನೇ ಆರ್. ಆರ್.ನಗರ ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡುತ್ತೇನೆ ಎಂದು ನನ್ನ ಪೋನ್ ಕೈಗೆ ತೆಗೆದುಕೊಂಡೆ. ಆಗ ವಿನಯ್, ‘ಇದು ಸರಿಯಿಲ್ಲ, ಇದರಿಂದ ನಮ್ಮ ಶೆಡ್‌ಗೆ ಕೆಟ್ಟ ಹೆಸರು ಬರುತ್ತದೆ’ ಎಂದು ನನ್ನೊಂದಿಗೆ ಜಗಳ ಮಾಡಿದ. ಆಗ ನಾನು ಚಿತ್ರದುರ್ಗದಿಂದ ಬಂದಿದ್ದ ಅನುಕುಮಾರ್, ಜಗದೀಶ್, ರವಿ ಮತ್ತು ರಾಘವೇಂದ್ರ ಅವರಿಗೆ ಮೃತದೇಹವನ್ನು ತೆಗೆದುಕೊಂಡು ಚಿತ್ರದುರ್ಗಕ್ಕೆ ಹೋಗಿ ಎಂದು ಹೇಳಿದೆ. ಅದಕ್ಕೆ ರವಿ ಎಂಬಾತ ‘ನಾನು ಬಾಡಿಗೆಗೆ ಮಾತ್ರ ಬಂದಿರುವುದು, ನಾನೇಕೆ ಮೃತದೇಹವನ್ನು ಹೋಗಬೇಕು’ ಎಂದು ಕೇಳಿದ.

ಸಲಹೆ ಕೇಳಲು ಪಿಎಸ್‌ಐ ವಿನಯ್‌ಗೆ ಪ್ರದೋಷ್ ಫೋನ್:  ಆಗ ನಾನು ಪಕ್ಕಕ್ಕೆ ಹೋಗಿ ನಿಂತುಕೊಂಡು ನನಗೆ ಪರಿಚಯ ಇದ್ದ ಪಿಎಸ್‌ಐ ವಿನಯ್ ಅವರಿಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಿದ ಅವರು, ‘ಏನು ಪ್ರದೋಷ್ ಹೇಳಿ ಎಂದರು. ನಾನು ಒಂದು ಸಮಸ್ಯೆಯಾಗಿದೆ ನಿಮ್ಮ ಸಲಹೆ ಬೇಕಿದ್ದರಿಂದ ಫೋನ್ ಮಾಡಿದೆ ಎಂದೆ. (ಕೋವಿಡ್ ಟೈಮ್‌ನಲ್ಲಿ ಗಿರಿನಗರ ಪೊಲೀಸ್ ಸ್ಟೇಷನ್‌ನಲ್ಲಿ ವಿನಯ್ ಅವರೊಂದಿಗೆ ನಾನು ಕೆಲಸ ಮಾಡಿದ್ದ ಕಾರಣ ನನಗೆ ಅವರ ಪರಿಚಯ ಇತ್ತು. ಮುಂದುವರಿದು ನೀವು ಎಲ್ಲಿದ್ದೀರಾ ನಾನು ನಿಮ್ಮನ್ನು ಭೇಟಿಯಾಗಬೇಕು ಎಂದು ಕೇಳಿದೆ. ಅದಕ್ಕೆ ಅವರು ‘ನಾನು ಕೇರಳದಲ್ಲಿ ಕುಟುಂಬದೊಂದಿಗೆ ಇದ್ದೇನೆ, ಏನು ಹೇಳಿ’ ಎಂದು ಕೇಳಿದರು. ಅದಕ್ಕೆ ನಾನು 15 ನಿಮಿಷಗಳ ನಂತರ ಕರೆ ಮಾಡುತ್ತೇನೆ ಎಂದು ಹೇಳಿ ಕಾಲ್ ಕಟ್ ಮಾಡಿದೆ. ಅದರಂತೆ 15 ನಿಮಿಷಗಳ ನಂತರ ನಾನು ಪಿಎಸ್‌ಐ ವಿನಯ್ ಅವರಿಗೆ ಫೋನ್ ಮಾಡಿದಾಗ, ಫೋನ್ ರಿಸೀವ್ ಮಾಡಿದ ಅವರು ಏನು ಎಂದು ವಿಚಾರಿಸಿದರು. ಆಗ ನಾನು ನನಗೆ ಗೊತ್ತಿರುವ ಹುಡುಗರ ಕಡೆಯಿಂದ ಒಂದು ಘಟನೆ ನಡೆದಿದೆ ಎಂದೆ. (-ಮುಂದುವರಿಯುವುದು)

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

9 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

10 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

10 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

12 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

12 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

13 hours ago