ಲಕ್ಷ್ಮೀಕಾಂತ್ ಕೊಮಾರಪ್ಪ
ಶೀತಗಾಳಿಯಿಂದ ಪಾರಾಗಲು ಬೆಚ್ಚನೆಯ ಬಟ್ಟೆ, ಹೊದಿಕೆ, ಬೆಂಕಿಯ ಮೊರೆ
ಸೋಮವಾರಪೇಟೆ: ಶೀತಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಕಳೆದೆರಡು ದಿನಗಳಲ್ಲಿ ಅತ್ಯಂತಕಡಿಮೆ ೧೨ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರಿಂದ ಗ್ರಾಮೀಣ ಭಾಗಗಳಲ್ಲಿ ಚಳಿಗೆ ಜನರು ತತ್ತರಿಸುತ್ತಿದ್ದು, ಚಳಿಯಿಂದ ರಕ್ಷಣೆಗೆ ಪರದಾ ಡುವಂತಾಗಿದೆ.
ಮಲೆನಾಡು ಬಯಲು ಸೀಮೆ ವ್ಯಾಪ್ತಿ ಹೊಂದಿರುವ ಜಿಲ್ಲೆಯಲ್ಲಿ ಹಲವು ದಿನಗಳಿಂದ ಚಳಿಯಿದೆ. ಆದರೆ, ಹೆಚ್ಚು ಚಳಿಯ ಅನುಭವವಾಗಿರಲಿಲ್ಲ. ಆದರೆ, ಕೆಲವು ದಿನಗಳಿಂದ ಅತ್ಯಂತ ಕಡಿಮೆ ತಾಪಮಾನ ದಾಖಲಾಗುತ್ತಿರುವುದರಿಂದ ಜನರಿಗೆ ಥಂಡಿಯ ಭೀತಿ ಕಾಡುತ್ತಿದೆ.
ನವೆಂಬರ್ ತಿಂಗಳ ಕೊನೆಯವಾರ ಸ್ವಲ್ಪ ತಾಪಮಾನ ಇಳಿಕೆಯಾಗಿತ್ತು. ಆದರೆ, ನಂತರ ಯಾವುದೇ ತೊಂದರೆಯಾಗಿರಲಿಲ್ಲ. ಈಗ ಇದ್ದಕ್ಕಿದ್ದಂತೆಯೇ ೪ ಡಿಗ್ರಿ ಸೆಲ್ಸಿಯಸ್ ನಿಂದ ೬ ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಕಡಿಮೆ ದಾಖಲಾಗಿರುವುದು ಕಂಡುಬಂದಿದೆ. ವೃದ್ಧರು, ಮಕ್ಕಳಂತೂ ತೀರಾ ತೊಂದರೆ ಎದುರಿಸುತ್ತಿದ್ದಾರೆ. ಇಡೀ ದಿನ ಥಂಡಿಯ ವಾತಾವರಣ ಕಂಡುಬರುತ್ತಿದೆ. ಶೀತಗಾಳಿಯ ಪರಿಣಾಮದಿಂದ ದಿನದಲ್ಲಿಯೂ ಸಂಜೆಯಾಗುತ್ತಿದ್ದಂತೆಯೇ ಚಳಿಯ ಪ್ರಮಾಣ ಏರಿಕೆಯಾಗುತ್ತಿದ್ದು, ಬೆಳಿಗ್ಗೆ ೧೦ ಗಂಟೆಯಾದರೂ ಚಳಿ ಕಮ್ಮಿಯಾಗುತ್ತಿಲ್ಲ.
ಇಡೀ ದಿನ ಚಳಿ ಇರುತ್ತಿರುವುದರಿಂದ ಜನರು ಚಳಿಯಿಂದ ರಕ್ಷಣೆಗೆ ಸ್ವೆಟರ್, ದಪ್ಪನೆಯ ಬಟ್ಟೆ, ಮಫ್ಲರ್, ಹ್ಯಾಂಡ್ ಗೌಸ್ ಗಳನ್ನು ಧರಿಸಿ ಮೈ ಬೆಚ್ಚಗೆ ಇಟ್ಟು ಕೊಳ್ಳುತ್ತಿದ್ದಾರೆ. ಬಿಸಿ ನೀರು ಕುಡಿದು ದೇಹದ ಉಷ್ಣಾಂಶ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮುಂಜಾನೆ ಜಾಗಿಂಗ್, ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ.
ಬೆಚ್ಚನೆಯ ಬಟ್ಟೆ ಇತರೆ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚು ಚಳಿ ಇರುವುದರಿಂದ ದೇಹವನ್ನು ರಕ್ಷಿಸಿಕೊಳ್ಳಲು ಮಕ್ಕಳು, ವೃದ್ಧರು ಹ್ಯಾಂಡ್ ಗೌಸ್, ಕಿವಿ ಮುಚ್ಚಿಕೊಳ್ಳುವ ಮಫ್ಲರ್, ಕ್ಯಾಪ್‌ಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಅಂಗಡಿ, ಮಾಲ್‌ಗಳಿಗೆ ತೆರಳಿ ಬೆಚ್ಚನೆಯ ಹೊದಿಕೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ಬೆಚ್ಚನೆಯ ಬಟ್ಟೆ, ಹೊದಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಇನ್ನು ಸ್ವಲ್ಪ ದಿನ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಎಚ್ಚರವಹಿಸಲು ಸೂಚಿಸಲಾಗಿದೆ. ಇದು ಇನ್ನೂ ಹಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವಾಕಿಂಗ್ ಪ್ರಿಯರಿಗೆ ಚಳಿ ಕಾಟ:
ಸಾಮಾನ್ಯವಾಗಿ ಹಲವರು ಮುಂಜಾನೆ ವಾಕಿಂಗ್ ಹೋಗುತ್ತಾರೆ. ಬಿಪಿ, ಮಧುಮೇಹದಂತಹ ಸಮಸ್ಯೆ ಇರುವವರು ಮುಂಜಾನೆ ನಡಿಗೆಯನ್ನು ತಪ್ಪಿಸುವುದೇ ಇಲ್ಲ.ಇನ್ನೂ ಕೆಲವರು ಆದಷ್ಟು ಫಿಟ್ ಆಗಿ ಇರುವ ಉದ್ದೇಶದಿಂದವಾಕಿಂಗ್ ಮಾಡುತ್ತಾರೆ. ಇಂಥವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಚಳಿ ಕಾಟ ಕೊಡುತ್ತಿದೆ.
ಮಲೆನಾಡಿನಲ್ಲಿ ಪ್ರವಾಸಿಗರ ಸಂಭ್ರಮ…:
ಸ್ಥಳೀಯರಿಗೆ ಚಳಿ ಕಾಟ ಕೊಡುತ್ತಿದ್ದರೆ ವೀಕೆಂಡ್ ನಲ್ಲಿ ಸೋಮವಾರಪೇಟೆ ಭಾಗಕ್ಕೆ ಆಗಮಿಸುವ ಪ್ರವಾಸಿಗರು ಮಂಜು ಮುಸುಕಿದ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವು ಪ್ರವಾಸಿಗರು ಬೆಳಿಗ್ಗೆ ೧೧ ಗಂಟೆವರೆಗೂ ಹೋಂ ಸ್ಟೇನಲ್ಲಿ ಫೈರ್ ಕ್ಯಾಂಪ್ಗೆ ಬೇಡಿಕೆ ಇಡುತ್ತಿದ್ದಾರೆ.
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…
ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…
ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…
ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…