Andolana originals

ಕಟ್ಟಡ ತೆರವಿನಿಂದ ಬೀದಿಗೆ ಬಿದ್ದ ಪೇಪರ್‌ ಪ್ರಕಾಶಣ್ಣ

ಸುಡು ಬಿಸಿಲಿನಲ್ಲೇ ಪೇಪರ್‌ ಮಾರಾಟ ಮಾಡಿ ದಿನದೂಡುತ್ತಿರುವ ಹಿರಿಯ ಜೀವ; ಸಂಕಷ್ಟದಲ್ಲಿ ಪೇಪರ್‌ ಪ್ರಕಾಶಣ್ಣನಿಗೆ ಬೇಕಿದೆ ನೆರವು

ಕೆ. ಬಿ. ಶಂಶುದ್ಧೀನ್

ಕುಶಾಲನಗರ: ಇಲ್ಲಿನ ಗಣಪತಿ ದೇವಾಲಯದ ಮಳಿಗೆಗಳನ್ನು ತೆರವು ಗೊಳಿಸಿದ ಪರಿಣಾಮ ಏಳು ದಶಕಗಳಿಂದ ಇಲ್ಲಿ ಆಸರೆ ಪಡೆದಿದ್ದ ಪೇಪರ್ ಪ್ರಕಾಶಣ್ಣ ಈಗ ಸೂರಿಲ್ಲದೆ ಬಿಸಿಲಿನಲ್ಲಿಯೇ ಪೇಪರ್ ಮಾರಾಟ ಮಾಡುವಂತಾಗಿದ್ದು, ಹಿರಿಯ ಜೀವಕ್ಕೆ ನೆರವು ಒದಗಿಸಬೇಕಿದೆ.

ಮುಂಜಾನೆಯಿಂದ ಮುಸ್ಸಂಜೆಯವರೆಗೂ ಪ್ರಕಾಶಣ್ಣನ ಪೇಪರ್ ಅಂಗಡಿಯಿಂದ ದಿನಪತ್ರಿಕೆಗಳನ್ನು ಕೊಂಡು ನೂರಾರು ಮಂದಿ ಓದುತ್ತಿದ್ದರು. ಸೈಕಲ್ ಗಾಡಿಯೊಂದಿಗೆ ಹಿಂದೆ ಮತ್ತು ಮುಂದೆ ಪೇಪರ್‌ಗಳನ್ನು ಇಟ್ಟು ಇದೇ ಪ್ರಕಾಶಣ್ಣ ಪಟ್ಟಣದ ಮನೆಗಳು ಹಾಗೂ ಅಂಗಡಿಗಳಿಗೂ ವಿತರಿಸುತ್ತಿದ್ದರು. ಪತ್ರಿಕೆ ವಿತರಿಸಿ ಬಸವಳಿದರೆ ಮರಳಿ ತಮ್ಮ ಪೇಪರ್ ಅಂಗಡಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು.

ಈ ಅಂಗಡಿಗೂ ಪ್ರಕಾಶಣ್ಣನಿಗೂ ಬರೋಬ್ಬರಿ ಏಳು ದಶಕಗಳ ನಿರಂತರ ನಂಟು. ಒಂದು ರೀತಿಯ ಭಾವನಾತ್ಮಕವಾದ ವ್ಯವಹಾರದ ಒಡನಾಟ. ಪ್ರತಿನಿತ್ಯವೂ ಮುಂಜಾನೆ ೫ ಗಂಟೆಯ ಒಳಗೆ ಮನೆಯಿಂದ ಬಂದು ಪೂಜೆ ಸಲ್ಲಿಸಿ ಪೇಪರ್‌ಗಳ ಗಂಟನ್ನು ಬಿಚ್ಚುತ್ತಿದ್ದರು. ಆದರೀಗ ಗಣಪತಿ ದೇವಾಲಯವನ್ನು ಅಭಿವೃದ್ಧಿಗೊಳಿಸುವ ಸಂಬಂಧ ದೇವಾಲಯ ಸಮಿತಿಯವರು ಕಟ್ಟಡವನ್ನು ತೆರವು ಮಾಡುತ್ತಿರುವ ಪರಿಣಾಮ ಪೇಪರ್ ಪ್ರಕಾಶಣ್ಣ ಸೂರು ಹಾಗೂ ನೆರಳೂ ಕೂಡ ಇಲ್ಲದಂತಹ ದುಸ್ಥಿತಿಗೆ ಸಿಲುಕಿದ್ದಾರೆ. ಮುಂಜಾನೆ ಮೈಕೊರೆವ ಚಳಿ ಹಾಗೂ ಮಧ್ಯಾಹ್ನ ಸುಡುವ ಬಿಸಿಲಿಗೆ ಆಸರೆಯಾಗಿದ್ದ ಗಣಪತಿ ದೇವಾಲಯದ ಮಳಿಗೆಗಳನ್ನು ತೆರವು ಗೊಳಿಸಿದ ಪರಿಣಾಮ ಇದೀಗ ಇಳಿ ವಯಸ್ಸಿನ ಪೇಪರ್ ಪ್ರಕಾಶಣ್ಣನ ಸ್ಥಿತಿ ಅಧೋಗತಿಯಾಗಿದೆ. ಸ್ಥಳೀಯ ಕಾರು ನಿಲ್ದಾಣದ ಮುಂಬದಿಯ ಚರಂಡಿ ಬಳಿ ವಿವಿಧ ದಿನಪತ್ರಿಕೆಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಸಂಕಟದಲ್ಲಿಯೇ ಹಳೆಯದ್ದನ್ನು ಮೆಲುಕು ಹಾಕಿದ ಪೇಪರ್ ಪ್ರಕಾಶಣ್ಣ, ನನಗೀಗ ೭೫ ವರ್ಷ. ನನಗೆ ೧೫ ವರ್ಷವಿದ್ದಾಗ ಈ ಊರಿನ ಗಣ್ಯ ವ್ಯಕ್ತಿಯಾಗಿದ್ದ ಆರ್. ಗುಂಡೂರಾವ್ ಮೊದಲು ಏಜೆನ್ಸಿಯನ್ನು ಕೊಡಿಸಿದ್ದರು. ಅವರು ಮುಖ್ಯ ಮಂತ್ರಿಯಾಗಿದ್ದಾಗಲೂ ಊರಿಗೆ ಬಂದಾಗ ನನ್ನನ್ನು ಕರೆದು ಮಾತಾಡಿಸುತ್ತಿದ್ದರು. ಈಗ ನೋಡಿ ಅಂತಹ ಮಹನೀಯರೇ ಯಾರೂ ಇಲ್ಲ. ಹಾಗಾಗಿ ನನಗೆ ಈಗ ಇಂತಹ ಸ್ಥಿತಿ ಬಂದಿದೆ ಎಂದು ಪ್ರಕಾಶಣ್ಣ ಕಣ್ಣೀರಾದರು. ಸ್ಪಂದಿಸುವ ಮನಸ್ಸು ಉಳ್ಳವರು ಕೂಡಲೇ ಪೇಪರ್ ಪ್ರಕಾಶಣ್ಣಗೆ ಸ್ಪಂದಿಸುವಂತಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನನಗೆ 15 ವರ್ಷ ಇದ್ದಾಗಿನಿಂದಲೂ ಪೇಪರ್‌ ಹಾಕುತ್ತಿದ್ದೇನೆ. ಈಗ 75 ವರ್ಷವಾದರೂ ಈ ಕಾಯಕ ಬಿಟ್ಟಿಲ್ಲ. ನನ್ನ ಪತ್ನಿ ಕೂಡ ಮೃತಪಟ್ಟಿದ್ದಾರೆ. ಅವರು ಇದ್ದಾಗ ನನಗೆ ಮಧ್ಯಾಹ್ನ ವಿಶ್ರಾಂತಿ ಮಾಡಲು ಸಮಯ ಸಿಗುತ್ತಿತ್ತು. ಈಗ ವಿಶ್ರಾಂತಿ ಹೋಗಲಿ, ಎರಡೂ ಹೊತ್ತು ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದೇನೆ.

-ಪ್ರಕಾಶ್‌, ಪೇಪರ್‌ ಏಜೆಂಟ್‌, ಕುಶಾಲನಗರ

ಆಂದೋಲನ ಡೆಸ್ಕ್

Recent Posts

ಕೆನಡಾದಲ್ಲಿ ಕನ್ನಡಿಗನ ಹತ್ಯೆ ಪ್ರಕರಣ: ಆರೋಪಿ ಭಾವಚಿತ್ರ ಬಿಡುಗಡೆ

ನೆಲಮಂಗಲ: ಕೆನಡಾ ದೇಶದಲ್ಲಿ ಕನ್ನಡಿಗನನ್ನು ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನು ಕೆನಡಾದ ಟೊರಂಟೊ ಪೊಲೀಸರು…

1 hour ago

ಕೊಡಗು ಜಿಲ್ಲೆಯಲ್ಲಿ ಏಪ್ರಿಲ್.‌8ರಿಂದ ಪಾಸ್‌ಪೋರ್ಟ್‌ ಮೇಳ: ಸಂಸದ ಯದುವೀರ್‌ ಒಡೆಯರ್‌ ಮಾಹಿತಿ

ಕೊಡಗು: ಸಂಸದ ಯದುವೀರ್‌ ಕೃಷ್ಣದತತ ಚಾಮರಾಜ ಒಡೆಯರ್‌ ಅವರ ಪರಿಶ್ರಮದ ಫಲವಾಗಿ ಕೊಡಗಿನಲ್ಲಿ ಪಾಸ್‌ಪೋರ್ಟ್‌ ಮೇಳ ಆಯೋಜಿಸಲು ಬೆಂಗಳೂರು ವಿಭಾಗೀಯ…

1 hour ago

ಇರಾನ್‌ ಸರ್ವೋಚ್ಛ ನಾಯಕನಾಗಿ ಅಯತೊಲ್ಲಾ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿ ಆಯ್ಕೆ.?

ಟೆಹರಾನ್:‌ ಇರಾನ್‌ ಸರ್ವೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರು ಮಗ ಉತ್ತರಾಧಿಕಾಗಲು ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ಇರಾನ್‌ನ ಮುಂದಿನ ಸರ್ವೋಚ್ಛ…

2 hours ago

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಿಗ್‌ ಬಜೆಟ್‌ ಸಿನಿಮಾ ಟಾಕ್ಸಿಕ್‌ ಇರಾನ್-‌ ಇಸ್ರೇಲ್‌ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.‌19ರಂದು ಬಿಡುಗಡೆಯಾಗಬೇಕಿದ್ದ…

2 hours ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ವಿಶೇಷ: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಕಂಬ ಪ್ರತಿಷ್ಠಾಪನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…

3 hours ago

ಹನೂರು| ಚಂಗಡಿ ಗ್ರಾಮದ ಸುತ್ತಮುತ್ತ ಪ್ರತಿನಿತ್ಯ ಹುಲಿ ಓಡಾಟ: ಆತಂಕದಲ್ಲಿ ಸ್ಥಳೀಯರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…

3 hours ago