Andolana originals

ಪಣ್ಣೇದೊಡ್ಡಿ ಡೇರಿ ಆಡಳಿತ-ಹಾಲು ಉತ್ಪಾದಕರ ಮಾರಾಮಾರಿ

ಎಂ.ಆರ್.ಚಕ್ರಪಾಣಿ

ಜಗಳದಿಂದಾಗಿ ಡೇರಿಗೆ ಬೀಗ: ದೂರು-ಪ್ರತಿ ದೂರು ದಾಖಲು; ಖಾಸಗಿ ಡೇರಿಗೆ ಹಾಲು ಸರಬರಾಜು

ಮದ್ದೂರು: ತಾಲ್ಲೂಕಿನ ಪಣ್ಣೇದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಂಘದ ನೂತನ ಕಾರ್ಯದರ್ಶಿ ನೇಮಕ ವಿಚಾರದಲ್ಲಿ ಬೈಲಾ ಮೀರಿ ಅಕ್ರಮವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಂಘದ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

ಈ ಘಟನೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ನಂದೀಶ್ ಸೇರಿದಂತೆ ಅವರ ಬೆಂಬಲಿಗರು ಗಾಯಗೊಂಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಗ್ರಾಮದಲ್ಲಿ ಮುನ್ನೆಚ್ಚರಿಕೆಯಾಗಿ ಭಾರಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.

ಪಣ್ಣೇದೊಡ್ಡಿ ಗ್ರಾಮದ ಡೇರಿ ಹಾಲಿ ಕಾರ್ಯದರ್ಶಿ ಯಾಗಿದ್ದ ನಂದೀಶ್ ಕಳೆದ ಮೇ ೧೩ರಂದು ನಿವೃತ್ತಿಯಾಗಿದ್ದರು. ಅವರ ಸ್ಥಾನಕ್ಕೆ ನೂತನ ಕಾರ್ಯದರ್ಶಿ, ಉಪಾಧ್ಯಕ್ಷೆ ಮಹದೇವಮ ಅವರ ಪುತ್ರಿ ಪಿ.ಸಿ.ನಿಶ್ಚಿತ ಅವರನ್ನು ಸಂಘದ ಬೈಲಾಕ್ಕೆವಿರುದ್ಧವಾಗಿ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಗ್ರಾಮದ ಕೆಲವು ಉತ್ಪಾದಕರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರ ನಡುವೆ ವಿವಾದ ಉಂಟಾಗಿತ್ತು.

ಜೂ.೧೧ ಮತ್ತು ೧೨ ರಂದು ಸಂಘಕ್ಕೆ ಹಾಲು ಪೂರೈಸಿದ್ದ ಉತ್ಪಾದಕರಿಗೆ ನಿಕಟಪೂರ್ವ ಕಾರ್ಯದರ್ಶಿ ನಂದೀಶ್ ಹಣ ಬಟವಾಡೆ ಮಾಡಲು ಆಗಮಿಸಿದ್ದರು ಈ ವೇಳೆ ಜಿಲ್ಲಾ ಹಾಲು ಒಕ್ಕೂಟದಮದ್ದೂರು ಉಪಕಚೇರಿ ಉಪ ವ್ಯವಸ್ಥಾಪಕ ಡಾ.ಮಂಜೇಗೌಡ, ವಿಸ್ತರಣಾಧಿಕಾರಿ ಭವ್ಯ ಅವರ ಎದುರೇ, ನಿರ್ದೇಶಕರ ಗುಂಪಿನವರು ನಂದೀಶ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಾಲಿನ ಕ್ಯಾನ್ ಮುಚ್ಚಳದಿಂದ ಹಲ್ಲೆ ನಡೆಸಿದ್ದಾರೆ.

ಗಲಾಟೆಯ ಸಂಬಂಧ ಎರಡೂ ಕಡೆ ಪ್ರಕರಣ ದಾಖಲು:  ಬೆಸಗರಹಳ್ಳಿ ಠಾಣೆ ಪೊಲೀಸರು ದೂರು, ಪ್ರತಿ ದೂರು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಡಿವೈಎಸ್‌ಪಿ ಯಶವಂತ್, ಸಿಪಿಐ ನಾರಾಯಣಿ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಉತ್ಪಾದಕರ ನಡುವೆ ಮಾತುಕತೆಗೆ ಸಭೆ ಕರೆದು ಚರ್ಚೆ ನಡೆಸಿದರೂ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಹಾಲು ಶೇಖರಣೆ ಸ್ಥಗಿತವಾಗಿದೆ.

ಖಾಸಗಿ ಡೇರಿಗೆ ಹಾಲು ಸರಬರಾಜು:  ಗ್ರಾಮದಲ್ಲಿ ಈಗ ಖಾಸಗಿ ಡೇರಿ ಪ್ರಾರಂಭವಾಗಿದ್ದು, ಉತ್ಪಾದಕರು ವಿಧಿ ಇಲ್ಲದೆ ಅಲ್ಲಿಗೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಸರ್ಕಾರದ ಯಾವ ಸವಲತ್ತು ಇಲ್ಲದೆ, ಹಾಲನ್ನು ಹಾಕುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಗ್ರಾಮದ ಹಾಲು ಉತ್ಪಾದಕರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ.

ಹಾಲು ಉತ್ಪಾದಕರಿಗೆ ಅನ್ಯಾಯ: ಎರಡು ಗುಂಪುಗಳ ನಡುವೆ ರಾಜಕೀಯ ಮಾಡುತ್ತಿರು ವುದರಿಂದಾಗಿ ಗ್ರಾಮದಲ್ಲಿ ನಿಜವಾದ ಉತ್ಪಾದಕರಿಗೆ ಅನ್ಯಾಯವಾಗುತ್ತಿದ್ದು. ಕೂಡಲೇ ಡೇರಿಯ ವ್ಯವಸ್ಥಾಪಕರು, ಆಡಳಿತ ಮಂಡಳಿ ನಿರ್ದೇಶಕರು, ಮಂಡ್ಯ ಹಾಲು ಒಕ್ಕೂಟದ ಮನ್‌ಮುಲ್‌ ನಿರ್ದೇಶಕರು  ಗ್ರಾಮಸ್ಥರು, ಯಜಮಾನರು, ಒಟ್ಟಿಗೆ ಸೇರಿ ಮಾತುಕತೆ ಮೂಲಕ ಬಗೆಹರಿಸಿ ಎಂದಿನಂತೆ ಹಾಲನ್ನು ಶೇಖರಣೆ ಮಾಡಲು ಪ್ರಾರಂಭ ಮಾಡಬೇಕು ಎಂದು ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ.

ಹಾಲು ಶೇಖರಣೆ ಸ್ಥಗಿತ: 

ತಾಲ್ಲೂಕಿನ ಪಣ್ಣೇದೊಡ್ಡಿ ಗ್ರಾಮದಲ್ಲಿ ಡೇರಿ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ನಡುವೆ ಭಿನ್ನಾಭಿಪ್ರಾಯದಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಜಿಲ್ಲಾ ಹಾಲು ಒಕ್ಕೂಟದಿಂದ ದೈನಂದಿನ ಹಾಲು ಶೇಖರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಉಪ ವ್ಯವಸ್ಥಾಪಕ ಡಾ.ಮಂಜೇಗೌಡ ತಿಳಿಸಿದ್ದಾರೆ. ಹೀಗೆ ಎರಡು ಗುಂಪುಗಳ ನಡುವೆ ಜಗಳ ಘರ್ಷಣೆಯಿಂದ ಪೊಲೀಸ್ ಬಂದೋಬಸ್ತ್ ಮುಂದುವರಿದರೆ ನಿಜವಾಗಿಯೂ ಅನ್ಯಾಯವಾಗುವುದು ಹಾಲು ಉತ್ಪಾದಕರಿಗೆ. ಗೆಜ್ಜಲಗೆರೆ ಡೇರಿಯಿಂದ ಸಿಗುವ ಸಬ್ಸಿಡಿ, ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ ಐದು ರೂಪಾಯಿ. ಹಾಲಿನ ಮೇಲಿನ ಫ್ಯಾಟ್ ದರ ಹಾಗೂ ಪಶು ಆಹಾರ, ಪಶು ವೈದ್ಯಕೀಯ ಸವಲತ್ತಿನಿಂದ ವಂಚಿತರಾಗುತ್ತಾರೆ.

 

 

ಆಂದೋಲನ ಡೆಸ್ಕ್

Recent Posts

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

2 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

7 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

7 hours ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

7 hours ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

7 hours ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

7 hours ago