‘ಆಂದೋಲನ’ದೊಂದಿಗೆ ಅಭಿಪ್ರಾಯ ಹಂಚಿಕೊಂಡ ಸಾರ್ವಜನಿಕರು, ಪ್ರವಾಸಿಗರು
ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರವೇಶ ದರ ಪರಿಷ್ಕರಣೆ ಮಾಡುವ ಕುರಿತು ಸರ್ಕಾರದಿಂದ ಆದೇಶವಾಗಿದ್ದು, ಮೃಗಾಲಯ ಪ್ರಾಧಿಕಾರ ಈ ಕುರಿತು ಈಗಾಗಲೇ ಕ್ರಮಕೈಗೊಂಡಿದೆ. ಮೃಗಾಲಯದ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಲು ನಿರ್ಧಾರ ಕೈಗೊಂಡಿದ್ದು, ಆ.೧ರಿಂದ ಅಧಿಕೃತವಾಗಿ ಹೊಸ ದರ ಜಾರಿಗೆ ಬರಲಿದೆ. ಮೃಗಾಲಯ ಪ್ರಾಧಿಕಾರದ ಈ ತೀರ್ಮಾನದ ಬಗ್ಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ‘ಆಂದೋಲನ’ದೊಂದಿಗೆ ಪ್ರವಾಸಿಗರು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
” ಈಗಿನ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ತುಂಬಿಸಲು ಮೃಗಾಲಯ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಿದೆ. ಇದು ಸರಿಯಲ್ಲ.”
-ಮೀನಾಕ್ಷಿ ಕುಮಾರ್, ದಟ್ಟಗಳ್ಳಿ, ಮೈಸೂರು
” ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮತು ಹೊರ ರಾಜ್ಯಗಳಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ದಸರಾ ಸಮಯ ಬಿಟ್ಟು ಬೇರೆ ದಿನಗಳಲ್ಲಿ ಅದರ ಬಗ್ಗೆ ಚರ್ಚಿಸಿ ದರ ಹೆಚ್ಚಿಸಬೇಕೋ ಬೇಡವೋ ಎಂಬುದರ ಬಗ್ಗೆ ಗಮನಹರಿಸಲಿ.”
-ಶಿಲ್ಪಶ್ರೀ ಬೈಸಾನಿ
” ದಸರಾ ಮಹೋತ್ಸವದ ವೇಳೆ ಮೃಗಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವುದು ಒಂದೆಡೆಯಾದರೆ, ನಿರ್ವಹಣೆ ವೆಚ್ಚದ ನೆಪವೊಡ್ಡಿ ಮೃಗಾಲಯ ಪ್ರವೇಶ ದರ ಏರಿಕೆ ಮಾಡಿರುವುದು ಸರಿಯಲ್ಲ.”
-ಶಶಿಕಲಾ, ವಿಜಯನಗರ
” ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ, ಮತ್ತೊಂದೆಡೆ ಮೃಗಾಲಯದ ಪ್ರವೇಶ ದರವನ್ನೂ ಹೆಚ್ಚು ಮಾಡಿರುವುದರಿಂದ ರಾಜ್ಯ ಸರ್ಕಾರ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳಿತು.”
-ಸಿದ್ದರಾಜು, ಎಚ್.ಡಿ.ಕೋಟೆ
” ಮೃಗಾಲಯ ಪ್ರವೇಶ ದರವನ್ನು ಶೇ.೨೦ರಷ್ಟು ಏರಿಕೆ ಮಾಡಲು ನಿರ್ಧರಿಸಿರುವುದರಿಂದ ಅರಮನೆ, ಕಾರಂಜಿಕೆರೆ ಹಾಗೂ ಮೃಗಾಲಯ ವೀಕ್ಷಿಸುವವರ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತವಾಗಿದೆ. ದರ ಹೆಚ್ಚಳ ಖಂಡನೀಯ.”
-ಪ್ರಸನ್ನ ಸಂತೇಕಡೂರು, ಜೆ.ಪಿ.ನಗರ
” ಜನರಿಗೆ ರಾಜ್ಯ ಸರ್ಕಾರದ ಸಾಲು ಸಾಲು ದರ ಏರಿಕೆ ಬಿಸಿ ತಟ್ಟುತ್ತಿದೆ. ಬಸ್ ಟಿಕೆಟ್ ದರ, ನಂದಿನಿ ಹಾಲಿನ ದರ, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಇದೀಗ ಮೃಗಾಯಲ ಪ್ರವೇಶ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ”
-ಲಿಖಿತ್‌ರಾಜ್ ಅರಸ್, ಅರಕಲಗೂಡು
” ಮೈಸೂರು ಮೃಗಾಲಯದ ಆದಾಯ ಉತ್ತಮವಾಗಿದ್ದರೂ ಪ್ರವೇಶ ದರ ಏರಿಕೆಯಿಂದ ಪ್ರವಾಸಿಗರಿಗೆ ಹೊರೆಯಾಗಲಿದೆ. ಇದರಿಂದ ಮೃಗಾಲಯಕ್ಕೆ ಭೇಟಿ ನೀಡುವವವರ ಸಂಖ್ಯೆಯ ಮೇಲೂ ಪರಿಣಾಮ ಬೀರಲಿದೆ.”
-ಮಲ್ಲಮ್ಮ, ಎರಡನೇ ಹಂತ, ವಿಜಯನಗರ
” ಮೃಗಾಲಯ ಪ್ರಾಣಿಗಳ ನಿರ್ವಹಣೆಗೆ ಸರ್ಕಾರ ಅನುದಾನ ನೀಡಬೇಕು. ಆದರೆ, ಸರ್ಕಾರದ ಬಳಿ ಹಣವಿಲ್ಲ, ಇದನ್ನು ಸರಿದೂಗಿಸಲು ಪ್ರವೇಶ ದರ ಏರಿಕೆ ಮಾಡಿರುವುದು ಪ್ರಾಣಿಗಳನ್ನು ನೋಡಲು ಬರುವವರ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ.”
-ಇಂದ್ರಾಣಿ, ಗಿರಿದರ್ಶಿನಿ ಬಡಾವಣೆ
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…
ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ…